Select Your Language

Notifications

webdunia
webdunia
webdunia
webdunia

ಬಾಹುಬಲಿ ಎದುರಾಳಿ ಆಗ್ತಾ ಇದ್ಯಾ ಐ ..? ಇದು ಶಂಕರ್ v /s ರಾಜಮೌಳಿ ಹೋರಾಟವೇ??

ಬಾಹುಬಲಿ ಎದುರಾಳಿ ಆಗ್ತಾ ಇದ್ಯಾ ಐ ..? ಇದು ಶಂಕರ್ v /s ರಾಜಮೌಳಿ ಹೋರಾಟವೇ??
ಚೆನ್ನೈ , ಗುರುವಾರ, 18 ಸೆಪ್ಟಂಬರ್ 2014 (10:30 IST)
ಇತ್ತೀಚೆಗಷ್ಟೇ ಬಿಡುಗಡೆಯಾದ ಶಂಕರ್ ಅವರ ಐ ಟ್ರೇಲರ್ ಬಗ್ಗೆ   ಭಾರತೀಯ ಚಿತ್ರರಂಗದ ಗಮನ ಬಿದ್ದಿದೆ. ಅದರಲ್ಲೂ ಟಾಲಿವುಡ್ ನಗರ ವಾಸಿಗಳ ಗಮನ ಅಲ್ಲಿಯೇ ಹೋಗಿ ನಿಂತಿದೆ ಎಂದೇ ಹೇಳ ಬಹುದಾಗಿದೆ. ಈ ಚಿತ್ರದ ಬಗ್ಗೆ ಹೆಚ್ಚೇನೂ ಗಮನ ನೀಡದೆ ಇದ್ದ ವಿಮರ್ಶಕರು ಈಗ ಟ್ರೇಲರ್ ಕಂಡ ಬಳಿಕ ತಾವೇನು ಕಡಿಮೆ ಇಲ್ಲ ಎಂದು ಈ ಚಿತ್ರ ಕೇವಲ  ಕಾಲಿವುಡ್ ಮಾತ್ರವಲ್ಲ ಟಾಲಿವುಡ್ ಪಟ್ಟಣವನ್ನು ನಡುಗಿಸುತ್ತದೆ ಎನ್ನುವ ಭವಿಷ್ಯವಾಣಿ ನುಡಿದಿದ್ದಾರೆ.  
 
ದೀಪಾವಳಿಯಲ್ಲಿ ಬಿಡುಗಡೆ ಆಗುತ್ತದೆ ಐ ಚಿತ್ರ. ಈಗ ಅತ್ಯಂತ ಕುತೂಹಲಕರವಾಗಿರುವ ಚಿತ್ರ ತೆಲುಗಿನ ಬಾಹುಬಲಿ. ಅದರ ಬಗ್ಗೆ ಈವರೆಗೂ ಮೀಡಿಯಾದವರು  ಹೆಚ್ಚು ಗಮನ ನೀಡಿದ್ದರು ನಿನ್ನೆ ವರೆಗೂ,.. ಯಾವಾಗ ಐ ಟ್ರೇಲರ್ ಬಿಡುಗಡೆ ಆಯ್ತೋ ಅಂದಿನಿಂದ ಈ ಚಿತ್ರದ ಬಗ್ಗೆ ಯಾರು ಹೆಚ್ಚು ಆದ್ಯತೆ ನೀಡದೆ ಐ ಕಡೆಗೆ ತಮ್ಮ ಐ ನೆಟ್ಟಿದ್ದಾರೆ.ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧ ಆಗಿರುವ ಐ ತಂತ್ರಜ್ಞಾನ. ಈವರೆಗೂ ಬಾಹುಬಲಿ ಚಿತ್ರ ದಕ್ಷಿಣ ಭಾರತದಲ್ಲಿ ರೋಲ್ ಮಾಡೆಲ್ ಆಗುತ್ತದೆ ಎನ್ನುವ ನಂಬಿಕೆಯನ್ನು ಐ ಚಿತ್ರ ಹುಸಿಗೊಳಿಸಿದೆ. ಬಾಹುಬಲಿಗಿಂತ ಐ ಹೆಚ್ಚು ಪ್ರಭಾವ ಬೀರುತ್ತಿದೆ ಎನ್ನುವ ಸಂಗತಿ ಅತ್ಯಂತ ಬಿಸಿ ಬಿಸಿಯಾಗಿದೆ.
 
ಅಷ್ಟೇ ಅಲ್ಲದೆ ರಾಜಮೌಳಿ ಅವರ  ಬಾಹುಬಲಿ ಅತ್ಯಂತ ಪ್ರತಿಷ್ಠೆಯ ಸಿನಿಮಾ ಆಗಿದ್ದರು ಹಳೆ ರಾಜರ ಕಥೆಯಾಗಿದ್ದು ಅಂತಹ ಹೊಸತೇನು ಇಲ್ಲ ಆದರೆ ಐ ಮಾತ್ರ ಹೊಸತನದಿಂದ ಕೂಡಿದೆ  ಎನ್ನುವುದು  ಈಗ ಚಿತ್ರಪಂಡಿತರ ಮನದ ಮಾತಾಗಿದ್ದು ಎಲ್ಲರಲ್ಲೂ ಈ ಸಂಗತಿ ಆಶ್ಚರ್ಯ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. ಆದರೆ ಈ ಸಂಗತಿಯು ಈಗಾಗಲೇ ಭಾರಿ ಹಣ ಕೊಟ್ಟುಕೊಂಡ ಹಂಚಿಕೆದಾರರ ನಿದ್ದೆಯನ್ನು ಕೆಡಿಸಿದೆ ಎನ್ನುವ ಮಾತು ಸಹಿತ ಕೇಳಿ ಬಂದಿದೆ. ಮುಖ್ಯವಾಗಿ ಚಿತ್ರದ ಬಗ್ಗೆ ಏನೇನು ಅರಿವು ಇಲ್ಲದೆ ಸುಖಾಸುಮ್ಮನೆ ಬಾಹುಬಲಿಯನ್ನು ಐ ಚಿತ್ರದ ಜೊತೆ ಹೋಲಿಸುತ್ತಿರುವುದು ಮಾತ್ರ ಸಾಮಾನ್ಯರಲ್ಲಿ ಆಶ್ಚರ್ಯ ಆಸಕ್ತಿಯ  ಸಂಗತಿಯಾಗಿದೆ!!

Share this Story:

Follow Webdunia kannada