Select Your Language

Notifications

webdunia
webdunia
webdunia
webdunia

ಐ ಚಿತ್ರದ ಸ್ಯಾಟಲೈಟ್ ಹಕ್ಕು 22 ಕೋಟಿಗೆ ಮಾರಾಟ .. ಎಲ್ಲರ ಐ ಈಗ ಐ ಕಡೆಗೆ!

ಐ ಚಿತ್ರದ ಸ್ಯಾಟಲೈಟ್ ಹಕ್ಕು 22  ಕೋಟಿಗೆ ಮಾರಾಟ .. ಎಲ್ಲರ ಐ ಈಗ ಐ ಕಡೆಗೆ!
ಚೆನ್ನೈ , ಗುರುವಾರ, 18 ಸೆಪ್ಟಂಬರ್ 2014 (10:26 IST)
ಸಾಕಷ್ಟು ಗಮನ ಸೆಳೆದ ಆಡಿಯೋ ಕಾರ್ಯಕ್ರಮ ಐ. ಇದಕ್ಕೆ ಐದರಿಂದ ಏಳು ಕೋಟಿ ರೂಪಾಯಿಗಳು ವೆಚ್ಚವಾಗಿದೆ.  ಈ ಕಾರ್ಯಕ್ರಮಕ್ಕೆ ಹಾಲಿವುಡ್ ಸ್ಟಾರ್ ನಟ ಆರ್ನಾಲ್ಡ್ ಸಹ ಭಾಗವಹಿಸಿ ಅದರ ಪ್ರಾಮುಖ್ಯತೆ ಹೆಚ್ಚು ಮಾಡಿದ್ದರು. ಅರ್ನಾಲ್ಡ್ ಅವರ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸೌಹಾರ್ದಯುತ ಭೇಟಿಯನ್ನು ರಜನಿ ಮನೆಯಲ್ಲಿ ಮಾಡಿದರು. ಅದಾದ ಬಳಿಕ ಈ ಸ್ಟಾರ್‌ಗಳು ಸ್ವಲ್ಪ ಕಾಲ ಮಾತು ಕಥೆ ನಡೆಸಿದ್ದರು. ಹಾಲಿವುಡ್ ಅರ್ನಾಲ್ಡ್ ರನ್ನು ಕಾಲಿವುಡ್‌ನ ಮತ್ತೊಬ್ಬರು ಸ್ಟಾರ್ ನಟ ಸೂರ್ಯ ಸಹ ಹೋಟೆಲ್ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಮಾಡಿದರು.  ಈ ಇಬ್ಬರು ಬಾಡಿ ಬಿಲ್ಡರ್‌ಗಳು ಎನ್ನುವ ಸಂಗತಿ ಎಲ್ಲರಿಗು ಗೊತ್ತಿದೆ.
 
 ಅರ್ನಾಲ್ಡ್ ಅವರ ಬಳಿ ಬಾಡಿ  ಬಿಲ್ಡ್ ಗೆ ಸಂಬಂಧ ಪಟ್ಟಂತೆ ಕೆಲವೊಂದು ಸಂಗತಿಗಳನ್ನು ಕೇಳಿ ತಿಳಿದರು ಸೂರ್ಯ. ಅದೇ ರೀತಿ ಆ ಹೋಟೆಲ್ ನಲ್ಲಿ ಸೂರ್ಯ ಅವರ ಸಿಕ್ಸ್ ಪ್ಯಾಕ್ ಫೋಟೋಗಳನ್ನು ಕಂಡು ಆಶ್ಚರ್ಯ ಚಕಿತರಾದರಂತೆ  ಅರ್ನಾಲ್ಡ್. ಅಷ್ಟೇ ಅಲ್ಲದೆ ಈ ಭೇಟಿಯ ಬಳಿಕ ಈ ಜೋಡಿ ಒಬ್ಬರ ಬಳಿ ,ಮತ್ತೊಬ್ಬರು  ಆಟೋಗ್ರಾಫ್   ಪಡೆದರು. 
 
ಈ ಚಿತ್ರ ಸ್ಯಾಟಲೈಟ್  ಹಕ್ಕನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜಯ ಟೀವಿ 22 ಕೋಟಿಗೆ ಕೊಂಡಿರುವ ಸುದ್ದಿಯು ಈಗ  ಕಾಲಿವುಡ್ ಗಮನ ಸೆಳೆದಿದೆ. ಒಟ್ಟಾರೆ ಭಾರತದಲ್ಲೇ ಇಷ್ಟು  ಅದ್ಧೂರಿಯಾಗಿ ಚಿತ್ರದ ಆಡಿಯೋ ಈವರೆಗೂ ಯಾರು ಮಾಡಿರಲಿಲ್ಲ ಎನ್ನುವ ಮಾತು ಈಗ ಹೆಚ್ಚು ಹರಿದಾಡುತ್ತಿದೆ ಕಾಲಿವುಡ್ ಮಾಧ್ಯಮಗಳಲ್ಲಿ!. 

Share this Story:

Follow Webdunia kannada