Select Your Language

Notifications

webdunia
webdunia
webdunia
webdunia

ಹಾಲಿವುಡ್ ನಟ ಐ ಆಡಿಯೋ ಕಾರ್ಯಕ್ರಮಕ್ಕೆ...ಸಿನಿಮಾದವರ ಚಿತ್ತ 'ಐ' ನತ್ತ !!

ಹಾಲಿವುಡ್ ನಟ ಐ ಆಡಿಯೋ ಕಾರ್ಯಕ್ರಮಕ್ಕೆ...ಸಿನಿಮಾದವರ ಚಿತ್ತ 'ಐ' ನತ್ತ  !!
ಚೆನ್ನೈ , ಸೋಮವಾರ, 15 ಸೆಪ್ಟಂಬರ್ 2014 (10:32 IST)
ಐ ಸಿನಿಮಾ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದಿದೆ. ಅದಕ್ಕೆ ಕಾರಣ ಆ ಚಿತ್ರವು 180  ಕೋಟಿ ರೂಪಾಯಿಗಳನ್ನು ಹೂಡಿರುವ ಈ ಚಿತ್ರವನ್ನು ಶಂಕರ್ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ  ಸಂಬಂಧಪಟ್ಟಂತೆ ಯಾವರೀತಿ ಪ್ರಮೋಶನ್ಸ್ ಮಾಡಬೇಕು ಎನ್ನುವ ಗೊಂದಲದಲ್ಲಿ ಇರುವ ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಅದರ ಬಗ್ಗೆ ಸಿಕ್ಕಾಪಟ್ಟೆ ಗಮನ ನೀಡುತ್ತಿದ್ದಾರೆ. ಸಿನಿಮಾದ  ಮೋಶನ್ ಪೋಸ್ಟರ್‌ನ್ನು ಇತ್ತೀಚಿಗೆ ಶಂಕರ್ ಬಿಡುಗಡೆ ಮಾಡಿದರು. 
 
ಆ ಪೋಸ್ಟರ್ ಕಂಡ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಐ ಆಡಿಯೋ ಕಾರ್ಯಕ್ರಮವು ಸಹಿತ ಸಿಕ್ಕಾಪಟ್ಟೆ ಅದ್ಧೂರಿಯಾಗಿ ನಡೆಸುವುದಕ್ಕೆ ಹೆಚ್ಚು ಗಮನ ನೀಡಲಾಗಿದ್ದು ಈ ಕಾರ್ಯಕ್ರಮಕ್ಕೆ ಹಾಲಿವುಡ್ ಆಕ್ಷನ್ ಸ್ಟಾರ್ ಅರ್ನಾಲ್ಡ್  ಸ್ಕವರ್ಜ್‌ ನೆಗ್ಗೆರ್  (arnold schwarzenegger) ಅವರು ಬರುತ್ತಿದ್ದಾರೆ. 
 
 ಚೆನ್ನೈನಲ್ಲಿ  ಸೆಪ್ಟೆಂಬರ್ 15  ಅಂದರೆ ಇಂದು ಭಾರಿ ಅದ್ಧೂರಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ತಾವು ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರುವ ಸಂಗತಿಯನ್ನು ಆರ್ನಾಲ್ಡ್ ತಿಳಿಸಿದ್ದಾರೆ. ಅದ್ಭುತವಾದ ಸಿನಿಮಾ ನಿರ್ದೇಶಿಸಿರುವ  ಶಂಕರ್ ಅವರಿಗೆ ನನ್ನ ಅಭಿನಂದನೆಗಳು.  ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಆರ್ನಾಲ್ಡ್. ವಿಕ್ರಮ್ ಹೀರೋ ಆಗಿರುವ ಐ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಆರ್ನಾಲ್ಡ್ ಈ ಚಿತ್ರದ ಆಡಿಯೋ ಬಿಡುಗಡೆಗೆ ಬರುತ್ತಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ.ಅಲ್ಲದೆ ಐ ಚಿತ್ರ ಭಾರತೀಯ ಬಾಕ್ಸಾಫೀಸನ್ನು ಶೇಕ್ ಮಾಡುವುದಲ್ಲ, ಭಾರತೀಯ ಚಿತ್ರರಂಗದಲ್ಲಿ ಹೊಸ ಶಕ್ತಿ ಉಂಟು ಮಾಡುತ್ತದೆ ಎಂದು ನಂಬಲಾಗಿದೆ. 

Share this Story:

Follow Webdunia kannada