Select Your Language

Notifications

webdunia
webdunia
webdunia
webdunia

ದೂದ್ ಪೇಡ ದಿಗಂತ್‌ಗೆ ಲಕ್ ಖುಲಾಯಿಸಿತು, ಮತ್ತೊಂದು ಹಿಂದಿ ಚಿತ್ರದಲ್ಲಿ ಅವಕಾಶ ಪಡೆದ ದಿಗ್ಗಿ !

ದೂದ್ ಪೇಡ ದಿಗಂತ್‌ಗೆ ಲಕ್ ಖುಲಾಯಿಸಿತು, ಮತ್ತೊಂದು ಹಿಂದಿ ಚಿತ್ರದಲ್ಲಿ ಅವಕಾಶ ಪಡೆದ ದಿಗ್ಗಿ !
ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2014 (10:29 IST)
ಕನ್ನಡ ಚಿತ್ರರಂಗದ ದೂದ್ ಪೇಡ ಈಗ ಹಿಂದಿ ಚಿತ್ರರಂಗದಲ್ಲೂ ಸಹಿತ ಉತ್ತಮ ಅವಕಾಶಗಳನ್ನು  ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ನಟನೆಯ ಮೊಟ್ಟ ಮೊದಲ ಹಿಂದಿ ಚಿತ್ರವೇ ಬಿಡುಗಡೆ ಆಗಿಲ್ಲ, ಆದರೆ ಆಗಲೇ ಮೂರನೇ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. 
 
ಬಿನೋದ್ ಪ್ರಧಾನ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ವೆಡ್ಡಿಂಗ್ ಪಲಾವ್ ಅನ್ನುವ ಚಿತ್ರದಲ್ಲಿ ದಿಗಂತ್ ಅವಕಾಶ ಪಡೆದಿದ್ದಾರೆ. 
ಈ ಚಿತ್ರ ಪ್ರಣಯ ಹಾಸ್ಯದ  ಅಂಶಗಳನ್ನು ತನ್ನೊಂದಿಗೆ  ಹೊಂದಿದೆ. ದಿಗಂತ್ ಜೊತೆ ಅನುಷ್ಕ ರಂಜನ್, ಸತೀಶ್ ಕೌಶಿಕ್, ಉಪಾಸನ ಸಿಂಗ್ ರಿಷಿ ಕಪೂರ್ ಮತ್ತು ಸೊನಾಲಿ ಸೆಹಗಲ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಬೈಕ್  ಡಿಸೈನರ್ ಆಗಿ ನಟಿಸುತ್ತಿದ್ದಾರೆ. ಚಿತ್ರಗಳ ಬಿಡುಗಡೆಗೆ ಮುನ್ನವೇ ಅವಕಾಶಗಳನ್ನು ಗಳಿಸುತ್ತಿರುವ ದಿಗಂತ್ ಅವರ ಚಿತ್ರಗಳು ಯಶಸ್ವಿಯಾಗಲಿ .ಬಹುಭಾಷ ತಾರೆಯಾಗಿ ಬೆಳೆಯಲಿ.
 

Share this Story:

Follow Webdunia kannada