Select Your Language

Notifications

webdunia
webdunia
webdunia
webdunia

ನಮೋ ಭೂತಾತ್ಮದಲ್ಲಿ ಕನ್ನಡಿಗರಿಗೆ ಕೋಮಲ್ ಕಂಠ ಸಿರಿಯ ಸವಿ

ನಮೋ ಭೂತಾತ್ಮದಲ್ಲಿ ಕನ್ನಡಿಗರಿಗೆ ಕೋಮಲ್ ಕಂಠ ಸಿರಿಯ ಸವಿ
ಬೆಂಗಳೂರು , ಗುರುವಾರ, 11 ಸೆಪ್ಟಂಬರ್ 2014 (10:30 IST)
ಕೋಮಲ್ ಕುಮಾರ್ ಕನ್ನಡ ಚಿತ್ರರಂಗದ ಪ್ರೀತಿಯ ಕಲಾವಿದ. ತಮ್ಮ ಅಭಿನಯ, ವಿನಯವಂತಿಕೆಯಿಂದ ಮನ ಗೆದ್ದಿದ್ದಾರೆ. ಅವರು ಅನೇಕ  ಚಿತ್ರಗಳಲ್ಲಿ ತಮ್ಮ ಕಂಠ ಸಿರಿಯನ್ನು ಸಹ ತೋರಿದ್ದಾರೆ. ಈಗ ಅವರು ಮತ್ತೊಮ್ಮೆ ಹಾಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಅವರ ಅಭಿನಯದ ನಮೋ ಭೂತಾತ್ಮಾ ಚಿತ್ರದ ಮೂಲಕ. ಈ ಚಿತ್ರದ ಮೂಲಕ ಕೊರಿಯಗ್ರಾಫರ್ ಮುರಳಿ ನಿರ್ದೇಶಕರಾಗಿ ಬದಲಾಗಿದ್ದಾರೆ. 
 
 ಇತ್ತೀಚೆಗಷ್ಟೇ ಕೋಮಲ್ ಅವರು   ಕರೋಡ್ ಪತಿ ಚಿತ್ರದಲ್ಲಿ ಸನ್ ಸಿಂಗಲ್ ಎನ್ನುವ ಹಾಡನ್ನು ಹಾಡಿದ್ದರು. ಆ ಚಿತ್ರಕ್ಕೆ ಅಭಿಮಾನ್ ರಾಯ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. 
  
ಈಗ ನಮೋ ಭೂತತ್ಮ ಚಿತ್ರಕ್ಕೂ ಸಹಿತ ಹಾಡುತ್ತಿದ್ದಾರೆ. ಇವಳು ಪೋಸ್ ಕೊಟ್ರೆ  ಇದು ಹಾಡಿನ ಸಾಲಾಗಿದೆ. ಈ ಚಿತ್ರವನ್ನು ಎಮಿಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೃದಯ ಶಿವ ಅವರು ಈ ಗೀತೆಯನ್ನು ಬರೆದಿದ್ದಾರೆ. ನಮೋ ಭೂತಾತ್ಮ  ತಮಿಳು ಚಿತ್ರದ ರೀಮೇಕ್ ಆಗಿದೆ. 

Share this Story:

Follow Webdunia kannada