Select Your Language

Notifications

webdunia
webdunia
webdunia
webdunia

ಸಾಯಿಪ್ರಕಾಶ್ ನಿರ್ದೇಶನದಲ್ಲಿ ಲೇಡಿ ಸಿಂಗಂ ಆಗಲು ರಾಗಿಣಿ ರೆಡಿ

ಸಾಯಿಪ್ರಕಾಶ್ ನಿರ್ದೇಶನದಲ್ಲಿ  ಲೇಡಿ ಸಿಂಗಂ ಆಗಲು ರಾಗಿಣಿ  ರೆಡಿ
ಬೆಂಗಳೂರು , ಬುಧವಾರ, 10 ಸೆಪ್ಟಂಬರ್ 2014 (11:39 IST)
ಸಾಯಿಪ್ರಕಾಶ್‌ ಅವರ ನಿರ್ದೇಶನದ 99 ನೇ ಚಿತ್ರದ ಬಗ್ಗೆ ಗಾಂಧಿನಗರವಾಸಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ ಅದಕ್ಕೆ ಕಾರಣ ರಾಗಿಣಿ . ರಾಗಿಣಿ ಐಪಿಎಸ್‌ನಲ್ಲಿ ಮಿಂಚಿದ್ದ ಈ ವನಿತೆ ಆ ಬಳಿಕ ವೀರ ರಣಚಂಡಿಯಾಗಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿಒದ್ದಾಳೆ. ಆಕೆಯು ಇತ್ತೀಚೆಗೆ ಆಕ್ಷನ್ ಚಿತ್ರಗಳತ್ತ ಗಮನ ನೆಟ್ಟಿದ್ದು ಪ್ರಸ್ತುತ ಸಾಯಿ ಪ್ರಕಾಶ್ ಅವರ ನಿರ್ದೇಶನದ ಲೇಡಿ ಸಿಂಗಂನಲ್ಲಿ ನಟಿಸುತ್ತಿದ್ದಾಳೆ. 
 
 ಸಿಂಗಂ ಹೆಸರಿನ ಚಿತ್ರ ತಮಿಳು ಮತ್ತು ಹಿಂದಿಯಲ್ಲಿ ತೆರೆ ಏರಿದ್ದು ಯಶಸ್ವಿ ಆಗಿತ್ತು. ಆದರೆ ಈಗ ಆ ಸಿಂಗಂ ಹೆಸರಿನ ಮುಂದೆ ಲೇಡಿ ಸೇರ್ಪಡೆ ಆಗಿ  'ಲೇಡಿಸಿಂಗಂ' ಹೆಸರಿನ ಚಿತ್ರ ಕನ್ನಡ ಪ್ರೇಕ್ಷಕರಿಗೂ ಲಭ್ಯ ಆಗುತ್ತಿದೆ. ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಿ.ವಿಜಯಕುಮಾರ್‌ ಅವರು ನಿರ್ಮಾಪಕರಾಗಿದ್ದಾರೆ.  ರಾಗಿಣಿ, ಸಾಯಿಪ್ರಕಾಶ್‌ ಮತ್ತು ವಿಜಯಕುಮಾರ್‌ ಮೊಟ್ಟ ಮೊದಲಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.   ಸಾಹಸ ಭರಿತ ಸಿನಿಮಾವಂತೆ ಹಾಗಂತ ನಿರ್ದೇಶಕ ಸಾಯಿ ಪ್ರಕಾಶ್  ಹೇಳಿದ್ದಾರೆ. ಜೊತೆಗೆ ಭಾವನೆ, ಭಾವುಕತೆ ಪ್ರೀತಿ ಎಲ್ಲವೂ ಇದೆಯಂತೆ!  ರಾಗಿಣಿ  ಸಮಯ ಕೊಟ್ಟ ತಕ್ಷಣ ಕೆಲಸ ಆರಂಭ ಆಗುತ್ತದೆಯಂತೆ. ವಾಸ್ತುಪ್ರಕಾರದ  ಹೀರೋಯಿನ್  ಐಶಾನಿಶೆಟ್ಟಿ  ಇನ್ನೊಂದು ನಾಯಕಿಯ ಜಾಗ ತುಂಬುವ ಸಾಧ್ಯತೆ ಇದೆಯಂತೆ!  ಸಧ್ಯಕ್ಕೆ ಇಬ್ಬರು ಹೀರೋಯಿನ್‌ಗಳನ್ನು ಮಾತ್ರ ಸೆಲೆಕ್ಟ್  ಮಾಡಿರುವ ಸಾಯಿ ಅವರು ಸಧ್ಯದಲ್ಲೇ ಉಳಿದವನ್ನು  ಸಹಿತ ಆಯ್ಕೆ ಮಾಡುತ್ತಾರೆ. ಪ್ರಸ್ತುತ  ಮಾಲಾಶ್ರೀ ಅಭಿನಯದ ಗಂಗಾಗೆ ಜೀವದಾನ ಮಾಡುತ್ತಿರುವ ಸಾಯಿ ಅವರು ಸಧ್ಯದಲ್ಲೇ ಲೇಡಿ ಸಿಂಗಂಗೂ ಸಹ ಜೀವ ಕೊಡುವ ಕೆಲಸ ಆರಂಭಿಸುತ್ತಾರೆ.

Share this Story:

Follow Webdunia kannada