Webdunia - Bharat's app for daily news and videos

Install App

ಸಿನಿಮಾ ಮೈ ಡಾರ್ಲಿಂಗ್ ಎಂದು ಹೇಳುತ್ತಿರುವ ಸೆಕ್ಸಿ ಸಂಜನಾ

Webdunia
ಬುಧವಾರ, 10 ಸೆಪ್ಟಂಬರ್ 2014 (11:37 IST)
ಗೌರೀಶ್‌ ಅಕ್ಕಿ ಸಿನಿಮಾ ಮೈ ಡಾರ್ಲಿಂಗ್‌ ಎಂಬ ಚಿತ್ರವನ್ನು  ಸುದ್ದಿ ನಿರೂಪಕ ಗೌರೀಶ್‌ ಅಕ್ಕಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ವಾಹಿನಿಗಳಲ್ಲಿ ವಾರ್ತಾವಾಚಕರಾಗಿದ್ದ ಗೌರೀಶ್ ಅವರು ಈಗ ನಿರ್ದೇಶನದತ್ತ ತಮ್ಮ ಗಮನ ನೆಟ್ಟಿದ್ದಾರೆ.  ಹೊಸ ಕಲಾವಿದರ ಆಯ್ಕೆಯತ್ತ ಗಮನ ಕೊಟ್ಟಿದ್ದ ಗೌರೀಶ್ ತಮ್ಮ ಮೊದಲ ಚಿತ್ರಕ್ಕೆ  ಗಂಡ ಹೆಂಡತಿ ಖ್ಯಾತಿಯ ಸೆಕ್ಸಿ ಸಂಜನಾ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರದ ಮೊದಲ ಹಂತಹ ನಿರ್ದೇಶನ ಈಗ ಪೂರ್ಣವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಮುನ್ನ ನಟಿ ಸಂಜನಾ ಅವರನ್ನು ಆಯ್ಕೆ ಮಾಡಿದ್ದಾರೆ ಗೌರೀಶ್.
 
ಸಿನಿಮಾ ಮೈ ಡಾರ್ಲಿಂಗ್ ನಾಯಕಿಯಾಗುವ ಕನಸು ಹೊತ್ತ ಐಟಂ ಡ್ಯಾನ್ಸರ್‌  ಪಾತ್ರ ಮಾಡುತ್ತಿದ್ದಾರೆ ಸಂಜನಾ .  ವಿಹಾನ್‌ ಎಂಬುವವರು ನಾಯಕರಾಗಿದ್ದಾರೆ.  ಇವರ ಜೊತೆಯಾಗಿದ್ದಾರೆ ಮನೋಜವ ಗಲಗಲಿ, ಶಶಿ ದೇಶಪಾಂಡೆ, ರಾಜು ತಾಳಿಕೋಟೆ, ಶ್ರೇಯಸ್‌,  ಮಾಲತಿ ಸರದೇಶಪಾಂಡೆ, ಚಿಕ್ಕಣ್ಣ ಮುಂತಾದವರು.
 
ನಿರ್ದೇಶಕ  ಗೌರೀಶ್‌ ಅಕ್ಕಿ  ಚಾನಲ್‌ನಲ್ಲಿ ಕೆಲಸ ಮಾಡುವಾಗ ಬಹಳಷ್ಟು ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಮತ್ತು ನಿರ್ಮಾಪಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ನಟ ನಿರ್ದೇಶಕನ ಹಾದಿ ಸುಗಮವಲ್ಲ. ಆತ ಯಶಸ್ವಿ ಆಗ ಬೇಕಾದರೆ ಸಾಕಷ್ಟು ಕಷ್ಟ ಪಡಬೇಕು. ಅವರು ಸಹನೆ ಮೀರಿದರೆ ಫಲಿತಾಂಶ ಒಳ್ಳೆಯದಿರುವುದಿಲ್ಲ ಎನ್ನುವ ಕಥೆಯನ್ನು ಈ ಚಿತ್ರ ಹೊಂದಿದೆ ಎಂದಿದ್ದಾರೆ ಅಕ್ಕಿ. ಯಾರೇ ಆಗಲಿ ಈ ರಂಗಕ್ಕೆ ಒಮ್ಮೆ ಬಂದರೆ ಸಾಕು ಮತ್ತೆ ಹಿಂತಿರುಗಿ ಹೋಗಲ್ಲ. ಅದೇ ಇದರ ವಿಶೇಷ ಎನ್ನುವ ಸತ್ಯವನ್ನು ಸಹ ಬಿಚ್ಚಿಟ್ಟಿದ್ದಾರೆ ಅಕ್ಕಿ. ಗೌರೀಶ್‌ ಅಕ್ಕಿ ಸಿನಿಮಾಸ್‌ ಬ್ಯಾನರ್‌ನಡಿ ತಯಾರಾಗುತ್ತಿದೆ. ಇವರ ಸ್ನೇಹಿತರಾದ  ಅಮರ್‌ನಾಥ್‌ ಮತ್ತು ಮಹಾಂತೇಶ್‌ ಯಡವಾಡ್‌ ಎಂಬುವವರು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ , ಎಸ್‌.ಕೆ. ರಾವ್‌ ಛಾಯಾಗ್ರಹಣ ಚಿತ್ರಕ್ಕಿದೆ. 2015ರ ಜನವರಿ ಅಂತ್ಯದಲ್ಲಿ ಸಿನಿಮಾ ಮೈ ಡಾರ್ಲಿಂಗ್‌' ಜನರ ಬಳಿ ತರುವ ಯೋಜನೆ ಹೊಂದಿದ್ದಾರೆ ನಿರ್ದೇಶಕರು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments