Select Your Language

Notifications

webdunia
webdunia
webdunia
webdunia

ರವಿತೇಜಾ ಅವರನ್ನು ಹನ್ಸಿಕ ಮೋಟ್ವಾನಿ ಆ ಪರಿ ಹೊಗಳಿದ್ದು ಯಾಕೆ?

ರವಿತೇಜಾ ಅವರನ್ನು  ಹನ್ಸಿಕ ಮೋಟ್ವಾನಿ ಆ ಪರಿ  ಹೊಗಳಿದ್ದು ಯಾಕೆ?
ಚೆನ್ನೈ , ಮಂಗಳವಾರ, 9 ಸೆಪ್ಟಂಬರ್ 2014 (11:22 IST)
ಕಾಲಿವುಡ್ ಸುಂದರಿ ಹನ್ಸಿಕ ಮೋಟ್ವಾನಿ. ಆಕೆ  ತಮಿಳು ಚಿತ್ರರಂಗದ ಟಾಪ್ ಹೀರೋಯಿನ್. ಮುಖ್ಯವಾಗಿ ಆಕೆ ನಟಿಸಿದ ಚಿತ್ರಗಳು ಯಶಸ್ಸು ಪಡೆದು ಎಲ್ಲರ ಮನೆ ಮಾತಾಗಿದೆ. ಆದರೆ ಈಕೆಗೆ ಅದ್ಯಾಕೋ ಟಾಲಿವುಡ್ ನಲ್ಲಿ ಹೇಳಿಕೊಳ್ಳುವಂತಹ ಗೆಲುವು ದೊರೆತಿಲ್ಲ  . ಈ ಮುಖಾಂತರ ಆಕೆಯು ಟಾಲಿವುಡ್  ನಲ್ಲಿಯೂ ಸಹಿತ ನೆಲೆ ಕಾಣುವ ಕನಸು ಇನ್ನು ಕನಸಾಗಿಯೇ ಉಳಿದಿದೆ. ಮುಖ್ಯವಾಗಿ ಆಕೆ ಟಾಲಿವುಡ್ ಟಾಪ್  ಯಂಗ್  ಹೀರೋಗಳನ್ನು ಆಕರ್ಷಿಸಿದಷ್ಟು ಆರಾಮವಾಗಿ ಟಾಲಿವುಡ್  ಟಾಪೆಸ್ಟ್ ಹೀರೋಗಳನ್ನು ಆಕರ್ಷಿಸಿಲ್ಲ .
 
ರವಿತೇಜ ಅವರ ಜೊತೆ ನಟಿಸಿರುವ ಪವರ್ ಈ ವಾರ ಬಿಡುಗಡೆ ಆಗುತ್ತದೆ. ಆ ಚಿತ್ರದ ಯಶಸ್ಸಿನ ಮೇಲೆ ಆಕೆಯ ಟಾಲಿವುಡ್ ಟಾಪೆಸ್ಟ್ ಹೀರೋಗಳ ಗಮನ ಬೀಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಚಿತ್ರ ವಿಮರ್ಶಕರು. ಇದಕ್ಕೆ ಸಂಬಂಧಿಸಿದಂತೆ ಹನ್ಸಿಕ ಸಿನಿಮಾ ಪತ್ರಿಕೆಯ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡುತ್ತ  ರವಿತೇಜ ಅವರ ಬಗ್ಗೆ  ತನ್ನ ಭಾವನೆ ವ್ಯಕ್ತ ಪಡಿಸಿರುವುದು ಹೀಗೆ... ಆತ ನನಗಿಂತ 20  ವರ್ಷ ದೊಡ್ಡವರು ಎಂದು ಅನ್ನಿಸಲೇ ಇಲ್ಲ, ಬದಲಾಗಿ 25  ರ ಹರೆಯದ ಯುವಕ ಎನ್ನುವಂತೆ ಪ್ರಣಯದಲ್ಲಿ ಭಾಗವಹಿಸಿದ್ದರು. ಅವರ ಡ್ಯಾನ್ಸ್, ನಟನೆ, ರೋಮ್ಯಾನ್ಸ್ ಎಲ್ಲವು ಯಂಗ್ ಹೀರೋಗಳಂತೆ ಇತ್ತು ಎನ್ನುವ ಮಾತನ್ನು ಹೇಳಿದ್ದಾಳೆ ಈ ಚೆಲುವೆ.  ಇಷ್ಟೆಲ್ಲಾ   ಹೊಗಳಿಕೆಯಿಂದಾದರೂ ಆಕೆಗೆ ತೆಲುಗಿನ ಟಾಪ್ ಹೀರೋಗಳು ಅವಕಾಶ ನೀಡುವಂತಾಗಲಿ ಎನ್ನುವ ಆಶಯ ನಮ್ಮದಾಗಿದೆ. 

Share this Story:

Follow Webdunia kannada