Select Your Language

Notifications

webdunia
webdunia
webdunia
webdunia

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಐಶ್ವರ್ಯ ಅರ್ಜುನ್ ನಟನೆ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಐಶ್ವರ್ಯ ಅರ್ಜುನ್ ನಟನೆ
ಬೆಂಗಳೂರು , ಮಂಗಳವಾರ, 9 ಸೆಪ್ಟಂಬರ್ 2014 (11:11 IST)
ಕನ್ನಡ ಚಿತ್ರರಂಗ ಬೆಳೆಸದ ಕಲಾವಿದರನ್ನು ಬೇರೆ ಭಾಷೆಯ ಚಿತ್ರರಂಗ ಕಾಪಾಡುತ್ತದೆ.. ಅವರನ್ನು ತಮ್ಮ ಮಡಿಲಲ್ಲಿ ಇಟ್ಟುಕೊಂಡು ಕಾಯುತ್ತದೆ. ಇದಕ್ಕೆ ಆಕ್ಷನ್  ಕಿಂಗ್ ಅರ್ಜುನ್ ಸರ್ಜಾ ಹೊರತಲ್ಲ. ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಹಿರಿಯ ನಟ  ದಿ.ಶಕ್ತಿಪ್ರಸಾದ್ ಅವರ ಪುತ್ರ ಅರ್ಜುನ್ ಸರ್ಜಾ ಅವರನ್ನು ಕನ್ನಡಿಗರು ಕಾಯಲಿಲ್ಲ, ಅವರೂ ನೆರೆಯ ತಮಿಳು ಮತ್ತು ತೆಲುಗು ಭಾಷೆಯಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡು ಆಕ್ಷನ್ ಕಿಂಗ್ ಎನ್ನುವ ಖ್ಯಾತಿ ಪಡೆದರು.
 
ಅವರ ಅನೇಕ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಯ್ತು. ಒಂದು ದಶಕಗಳ ಕಾಲ ಅವರು ದಕ್ಷಿಣ ಭಾರತದ ಸಿನಿಮಾದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿದ್ದರು. ಅವರ ಇತ್ತೀಚಿನ ಚಿತ್ರಗಳು ನಿರೀಕ್ಷಿಸಿದಂತೆ ಯಶಸ್ಸು ಇತ್ತೀಚಿಗೆ ಗಳಿಸುತ್ತಿಲ್ಲ, ಆದರೆ ಈಗ ಅವರ ಚಿತ್ರದ ಬಗ್ಗೆ ಮತ್ತೊಂದು ಹೊಸ ಸಂಗತಿ ಹೊರ ಬಂದಿದೆ. ಅದೇನೆಂದರೆ ಅವರ ಮಗಳು ಐಶ್ವರ್ಯ ಸಿನಿಮಾವನ್ನು ಅರ್ಜುನ್ ಅವರು ನಿರ್ದೆಶಿಸುತ್ತಿರುವುದಾಗಿದೆ. 
 
ಆಕ್ಷನ್ ಕಿಂಗ್ ಅವರ ಮುದ್ದಾದ ಮಗಳು ಐಶ್ವರ್ಯ ಸಹಿತ  ಸಿನಿಮಾರಂಗಕ್ಕೆ ಎಂಟ್ರಿಯಾದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈವರೆಗೂ ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ಕಂಡಿದ್ದ ಈ ಚೆಲುವೆ ಈಗ ತನ್ನ ಪಪ್ಪಾ  ಅರ್ಜುನ್ ಅವರ ನಿರ್ದೇಶನದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಂಡು ಬರುತ್ತಿದ್ದಾಳೆ . ಆದರೆ ಈ ಚಿತ್ರದಲ್ಲಿ ಅರ್ಜುನ್ ನಟಿಸುತ್ತಿಲ್ಲ.  ಈಗಾಗಲೇ ಈ ಸಿನಿಮಾಗೆ ಸಂಬಂಧಪಟ್ಟಂತೆ ಎರಡು ಮೂರು ಕಥೆ ಇದೆ. ಈ ಚಿತ್ರದ ನಿರ್ಮಾಣ ಮತ್ತು ನಿರ್ದೇಶನವನ್ನು ನಾನೇ ಮಾಡುವುದರಿಂದ ಆ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ. ಈ ಚಿತ್ರ ಜೈಹಿಂದ್ 2  ನಂತರ  ಐಶ್ವರ್ಯ  ಸ್ಟೇಟ್ಸ್  ಗೆ ಹೋಗುತ್ತಿದ್ದಾಳೆ ಎಂದು ಹೇಳಿದ್ದಾರೆ ಅರ್ಜುನ್. ಅರ್ಜುನ್ ಅವರ ಹೋಂ ಪ್ರೊಡಕ್ಷನ್ ಚಿತ್ರ ಯಶಸ್ವಿಯಾಗಲಿ...

Share this Story:

Follow Webdunia kannada