Select Your Language

Notifications

webdunia
webdunia
webdunia
webdunia

ಪುನೀತ್ ರಾಜ್‌ಕುಮಾರ್ ಪವರ್‌ನಿಂದ ಜೀವದಾನ ಪಡೆದ ತ್ರಿಷಾ

ಪುನೀತ್ ರಾಜ್‌ಕುಮಾರ್ ಪವರ್‌ನಿಂದ  ಜೀವದಾನ ಪಡೆದ ತ್ರಿಷಾ
ಬೆಂಗಳೂರು , ಶನಿವಾರ, 6 ಸೆಪ್ಟಂಬರ್ 2014 (10:04 IST)
ಚೆನ್ನೈ ಬ್ಯೂಟಿಗೆ ಜೀವದಾನ ಮಾಡಿದ  ಕನ್ನಡ ಚಿತ್ರ ಪವರ್ ***. ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರದ ಗೆಲುವಿನಿಂದ ತ್ರಿಷಾಗೆ ಹೆಚ್ಚು ಆನಂದ ಆಗಿದೆ. ಆಕೆ ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳುವತ್ತ  ಗಮನ ಕೇಂದ್ರೀಕರಿಸಿದ್ದಾಳೆ. ಎಲ್ಲರಿಗೂ ಗೊತ್ತಿದೆ ಚಿತ್ರರಂಗದಲ್ಲಿ ಹೀರೋ ಹೀರೋಯಿನ್‌ಗಳು ತಮ್ಮ ದೇಹದಲ್ಲಿ ತಮಗಿಷ್ಟವಾದ ಕಡೆ ಟ್ಯಾಟೂ  ಹಾಕಿಸಿಕೊಳ್ತಾರೆ. ಆದರೆ ತ್ರಿಷಾ ನನ್ನ ದೇಹ ನನ್ನಿಷ್ಟ ಎಂದು ದೇಹದ  ಎಲ್ಲಾ ಕಡೆ ಟ್ಯಾಟೂ ಹಾಕಿಕೊಂಡು ಅದನ್ನು ಕ್ಯಾಮರಾಗಳ ಮುಂದೆ ತೆರೆದಿಟ್ಟಿದ್ದಾಳೆ. ಈ ಸಂಗಾತಿ ಈಗ ಕಾಲಿವುಡ್ ಮೀಡಿಯಾ ಮಂದಿಯ ಹಾಟ್ ಟಾಪಿಕ್ ಆಗಿದೆ.  
 
ಆರಂಭದಲ್ಲಿ ಮೀನಿನ ಚಿತ್ರಗಳ ಹಚ್ಚೆ ತನ್ನ ಎದೆಯ ಮೇಲೆ ಹಾಕಿಸಿಕೊಂಡಿದ್ದ ಆಕೆ ಆ ಬಳಿಕ ರಾಣನನ್ನು ಹೋಲುವಂತಹ ಹಚ್ಚೆ ಹಾಕಿಸಿಕೊಂಡು ಸಂಚಲನ ಉಂಟು ಮಾಡಿದ್ದಳು. ಈಗ ಅಷ್ಟು ಸಾಲದು ಎಂದು ಕೈಗಳು, ತೊಡೆ, ಎಲ್ಲಿ ಸಾಧ್ಯವಾದ ಮತ್ತು ಪ್ರದರ್ಶಿಸಲು ಸಾಧ್ಯವಾಗುವ ಎಲ್ಲಾ ಕಡೆ  ಹಚ್ಚೆ  ಹಾಕಿಸಿಕೊಂಡು ಸುದ್ದಿ ಆಗಿದ್ದಾಳೆ ಈ ಚೆಲುವೆ.  
ಆ ಟ್ಯಾಟೂ ಒಂದು ಬಾಹುಬಲಿ  ಚಿತ್ರ ಹೊಂದಿದೆ. ಆದರೆ ಇವ್ಯಾವುದು ನಿಜವಾದ ಹಚ್ಚೆಗಳಲ್ಲ . ಆಕೆಯ ಮುಂದಿನ ಚಿತ್ರ ಭೂಲೋಕಂಗೆಂದು ಹಾಕಿಕೊಂಡ ಕೃತಕವಾದ ಹಚ್ಚೆ ಆಗಿದೆ. ಈ ಮೂಲಕವೂ ಸಹಿತ ಆಕೆ  ಪ್ರಚಾರ ಗಿಟ್ಟಿಸಿ ಕೊಳ್ತಾ ಇದ್ದಾಳೆ.
 

Share this Story:

Follow Webdunia kannada