Select Your Language

Notifications

webdunia
webdunia
webdunia
webdunia

ಆಂಡಿ ಹಿಂದೆ ಯಶ್ .. ವಾಟ್ ಹ್ಯಾಪನ್ ರಾಧಿಕ ಪಂಡಿತ್ ??

ಆಂಡಿ ಹಿಂದೆ ಯಶ್ .. ವಾಟ್ ಹ್ಯಾಪನ್ ರಾಧಿಕ ಪಂಡಿತ್ ??
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2014 (09:18 IST)
ಹೀಗೆಲ್ಲ ಆಗುತ್ತೆ ಮತ್ತು ಹೇಗೆ ಬೇಕಾದರೂ ಆಗಲು ಸಾಧ್ಯತೆ ಇದೆ ಚಿತ್ರರಂಗದವರ ವಿಷಯದಲ್ಲಿ. ಹಾಗೆ ಆಗಿದೆ ಯಶ್  ವಿಷಯದಲ್ಲೂ ಸಹಿತ. ಕನ್ನಡ ಚಿತ್ರರಂಗದ ಯಶಸ್ವಿ ನಟ ಯಶ್. ಆತ ಈಗ ರಾಧಿಕ್ ಪಂಡಿತ್  ಜೊತೆ ಡೇಟಿಂಗ್ ಮಾಡ್ತಾ ಇರೋ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಎಷ್ಟೇ ಮುಚ್ಚಿಟ್ಟರು ಸಹಿತ ಅದೀಗ ಎಲ್ಲರ ಗಮನಕ್ಕೆ ಬಂದ ಸಂಗತಿ ಆಗಿದೆ ಎಂದೇ ಹೇಳ ಬಹುದಾಗಿದೆ. ಆದರೆ ಈಗ ನಾವು ಹೇಳ ಹೊರಟಿರುವ ಸಂಗತಿ ಅದಲ್ಲ. ಇತ್ತೀಚಿಗೆ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಯಶ್  ಬಂದಿದ್ದರು. ಆದರೆ ಅವರ ಜೊತೆ ಆತನ ಅಭಿಮಾನಿಗಳು ರಾಧಿಕಾಳನ್ನು ನಿರೀಕ್ಷೆ ಮಾಡಿದ್ದರು, ಅಲ್ಲಿಗೆ ಬಂದಿದ್ದು ರಾಧಿಕ ಬದಲಾಗಿ ದಿಗಂತ್ ಗರ್ಲ್   ಫ್ರೆಂಡ್  ಐಂದ್ರಿತಾ ರೇ. 
 
ಇದು ಆತನ ಅಭಿಮಾನಿಗಳಲಿ ಆಶ್ಚರ್ಯ ಉಂಟು ಮಾಡಿದ್ದು ಸಹಜ. ಏಕೆಂದರೆ ಯಾವುದೇ ಜೋಡಿ ಆಗಿರಲಿ ಅವರ ಸಂಬಂಧಿತ ಡೇಟ್ ಜೊತೆ ಬರ್ತಾರೆ ವಿನಃ ಬೇರೊಬ್ಬರ ಡೇಟ್  ಜೊತೆ ಅಲ್ಲ. ಆದರೆ ಯಶ್ ರಾಧಿಕಾಳನ್ನು ಬಿಟ್ಟು ಆಂಡಿ ಹಿಂದೆ ಹೋದದ್ದು ಯಾಕೆ? ಇದು ಒಂದು ಪ್ರಚಾರದ ಗಿಮಿಕ್ಕಾ??  ಈಗಿರುವ ಸುದ್ದಿ ಪ್ರಕಾರ ಯಶ್ ಮತ್ತು ರಾಧಿಕ ಮದುವೆ ಆಗ್ತಾ ಇದ್ದಾರೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಬಳಿಕ. ಆದರೆ ಇದೇನು ಯಶ್ ಆಂಡಿ  ಜೊತೆ? ವಾಟ್ ಹ್ಯಾಪನ್ ??  

Share this Story:

Follow Webdunia kannada