Select Your Language

Notifications

webdunia
webdunia
webdunia
webdunia

ಬಾಕ್ಸಾಫೀಸ್ ನಲ್ಲಿ ಪವರ್ಫುಲ್ಲಾಗಿ ಸದ್ದು ಮಾಡುತ್ತಿರುವ ಪವರ್ ಸ್ಟಾರ್

ಬಾಕ್ಸಾಫೀಸ್ ನಲ್ಲಿ ಪವರ್ಫುಲ್ಲಾಗಿ  ಸದ್ದು ಮಾಡುತ್ತಿರುವ ಪವರ್ ಸ್ಟಾರ್
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2014 (09:16 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷೆಯ ಚಿತ್ರ ಪವರ್ ***  ಚಿತ್ರ ಬಿಡುಗಡೆ ಆದ ಎರಡು ದಿನದಲ್ಲಿ ಸಕತ್ ಕಲೆಕ್ಷನ್ ಮಾಡಿ ಬಾಕ್ಸಾಫೀಸಿನಲ್ಲಿ ಗದ್ದಲ ಮಾಡುತ್ತಿದೆ.  ಕಳೆದವಾರ ಬಿಡುಗಡೆ ಆದ ಈ ಚಿತ್ರ ಆರಂಭಿಕ ಎರಡು ದಿನಗಳಲ್ಲಿ  3.2 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಿದೆ.
 
ಕಳೆದ ಗುರುವಾರ ಬಿಡುಗಡೆ ಆದ  ಪವರ್ ಅಂದು 275  ಚಿತ್ರಮಂದಿರಗಳಲ್ಲಿ ತೆರೆ ಏರಿತು. ಒಟ್ಟು 1 , 100  ಶೂಗಳನ್ನು ಪ್ರದರ್ಶಿಸಿತು. ಅಲ್ಲದೆ ದಿನೇದಿನೇ ಉತ್ತಮ ಗಳಿಕೆ ಮಾಡುತ್ತಿದೆ. ಪವರ್ ಟೈಟಲ್ ಗೆ ಸಂಬಂಧ ಪಟ್ಟಂತೆ ವಿವಾದ ಉಂಟಾಗಿತ್ತು, ಅದನ್ನು ಸರಿ ಮಾಡಿ ಚಿತ್ರ ನಿಗದಿತ ವೇಳೆಗೆ ಬಿಡುಗಡೆ ಮಾಡಿದ ಚಿತ್ರತಂಡ ಗೆಲುವಿನ ಬಾಗಿಲು ತಟ್ಟಿದೆ.  
 
ಭಾನುವಾರ 1 .6 ಕೋಟಿ ಗಳಷ್ಟು ಗಳಿಕೆ ಮಾಡಿದ ಚಿತ್ರ ಶನಿವಾರವೂ ಸರಿಸುಮಾರು ಅಷ್ಟೇ ಹಣ ಗಳಿಕೆ ಮಾಡಿತ್ತು. ಒಟ್ಟಾರೆ ಆರಂಭಿಕ ವಾರಾಂತ್ಯದಲ್ಲಿ ಸುಮಾರು ಆರು ಕೋಟಿಗಳಷ್ಟು ಹಣ ಗಳಿಕೆ ಮಾಡಿದ ಸುದ್ದಿ ಇದೆ. ಈ ಚಿತ್ರದಲ್ಲಿ ತ್ರಿಷ ಪುನೀತ್ ಗೆ  ಹೀರೋಯಿನ್ ಆಗಿದ್ದು , ಕೆ. ಮಾದೇಶ್ ನಿರ್ದೇಶಿಸಿದ್ದಾರೆ. 

Share this Story:

Follow Webdunia kannada