Select Your Language

Notifications

webdunia
webdunia
webdunia
webdunia

ರಾಕೆಟ್ ಹಾರಿಸಲು ಸಿದ್ಧ ಆಗ್ತಾ ಇರುವ ನೀನಾಸಂ ಸತೀಶ್

ರಾಕೆಟ್ ಹಾರಿಸಲು ಸಿದ್ಧ ಆಗ್ತಾ ಇರುವ ನೀನಾಸಂ ಸತೀಶ್
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2014 (09:11 IST)
ನಟ ನೀನಾಸಂ ಸತೀಶ್ ನಟನೆಗೆ ಮಾತ್ರ ಆದ್ಯತೆ ನೀಡದೆ ಈಗ  ನಿರ್ಮಾಪಕರಾಗುತ್ತಿದ್ದಾರೆ. ಅವರ ಚೊಚ್ಚಲ ನಿರ್ಮಾಣ ಚಿತ್ರದ ಹೆಸರು ಈಗ ನಿಕ್ಕಿ ಆಗಿದೆ.   ರಾಕೆಟ್  ಈ ಚಿತ್ರದ ಹೆಸರು ದುಬೈಬಾಬು,ಸೂಪರ್ ಮತ್ತು ಸೈಬರ್ ಯುಗದೊಳ್ ನಂತ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ  ಜಗದೀಶ್ ಕುಮಾರ್   ಸತೀಶ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆಯುವುದರ  ಮೂಲಕ  ರಾಕೆಟ್ ಗೆ  ನಿರ್ದೇಶಕರಾಗುತ್ತಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಸಿದ್ಧ ಆಗುತ್ತಿದೆ.  ಸಾಮಾನ್ಯವಾಗಿ ಎಲ್ಲರಿಗೂ ತಾವು ಒಂದು ಒಳ್ಳೆಯ ಚಿತ್ರ ನಿರ್ಮಿಸ ಬೇಕು ಎನ್ನುವ ಆಸೆ ಇರುತ್ತದೆ. ಅದೆ ಆಸೆ ನೀನಾಸಂ ಸತೀಶ್ ಅವರಿಗೂ ಸಹಿತ ಇದ್ದರು ಯಾವ ಕಥೆಯು ಅಷ್ಟೊಂದು ಆಸಕ್ತಿ ಉಂಟು ಮಾಡಲೇ ಇಲ್ಲವಂತೆ. ಆದರೆ ಜಗದೀಶ್ ಕುಮಾರ್ ಅವರ ಕಥೆಯಲ್ಲಿ ಏನೋ ಇದೆ ಎಂದು ಅನ್ನಿಸಿ ಚಿತ್ರದ ನಿರ್ಮಾಣಕ್ಕೆ ಓಕೆ ಅಂದಿದ್ದಾರಂತೆ!
 
ಈಗ ಲೋಕೇಶನ್ ನೋಡಿ ಬಂದಿರುವ ಸತೀಶ್ ಮತ್ತು ಟೀಮ್  ಪೂರ್ಣಚಂದ್ರ ತೇಜಸ್ವಿ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ.  ಸದ್ಯಕ್ಕೆ ಸತೀಶ್ ಜೊತೆ ಯಾರು ಡ್ಯುಯೆಟ್ ಹಾಡ್ತಾರೆ ಎನ್ನುವ ಸಂಗತಿ ಗೊತ್ತಿಲ್ಲ ಆದರೂ ಸಹಿತ ಈ ತಿಂಗಳು ರಾಕೆಟ್ ಹಾರಲು ಸಿದ್ಧತೆ ಮಾಡುತ್ತಿದ್ದು.. ಅದೆಷ್ಟರ ಮಟ್ಟಿಗೆ ಕೆಲಸ ಮಾಡುತ್ತೋ ವೇಟ್ ಅಂಡ್ ವಾಚ್!  

Share this Story:

Follow Webdunia kannada