Webdunia - Bharat's app for daily news and videos

Install App

ಹೊಸ ರೆಕಾರ್ಡ್ ಸೃಷ್ಟಿ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್ ಲಿಂಗಾ ಪ್ರಮೋಶನ್ ಪೋಸ್ಟರ್

Webdunia
ಸೋಮವಾರ, 1 ಸೆಪ್ಟಂಬರ್ 2014 (09:20 IST)
ಸಾಕಷ್ಟು ದಿನಗಳಿಂದ ಸುದ್ದಿ ಮಾಡುತ್ತಿರುವ ಚಿತ್ರ  ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟಿಸಿರುವ ಲಿಂಗಾ. ಈ ಚಿತ್ರಕ್ಕೆ ಸಂಬಂಧಪಟ್ಟ ಮೋಶನ್ ಪೋಸ್ಟರ್ ಈಗ ಅಂದರೆ ಗಣೇಶ ಹಬ್ಬದ ದಿನದಂದು ಬಿಡುಗಡೆ ಮಾಡಲಾಯಿತು. ವಿನಾಯಯಕ್ ಚೌತಿಯಂದು ಬಿಡುಗಡೆ ಮಾಡಿದ ಈ ಚಿತ್ರದ ಪೋಸ್ಟರ್ ಯು ಟ್ಯೂಬ್ ನಲ್ಲಿ ಸಾಕಷ್ಟು ಹಂಗಾಮ ಮಾಡಿದೆ. ಈ ಚಿತ್ರದಲ್ಲಿ ರಜನಿ ಕಾಂತ್ ಅವರ ಜೋಡಿಯಾಗಿ ಅನುಷ್ಕ ಶೆಟ್ಟಿ ಮತ್ತು ಸೋನಾಕ್ಷಿ ಸಿನ್ಹ ನಟಿಸುತ್ತಿದ್ದಾರೆ. ಚಿತ್ರವನ್ನು ಕೆ. ಎಸ್ . ರವಿ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದ ಇಡಿ ಭಾರತೀಯಚಿತ್ರರಂಗ ಗಮನ ನೀಡಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಇದು ರಾಕ್ ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ  ಸಿದ್ಧವಾಗುತ್ತಿದೆ. ಅತ್ಯಂತ ಅದ್ಧೂರಿ ನಿರ್ಮಾಣದ ಚಿತ್ರವಾಗಿದ್ದು, ಮೊದಲ ಲುಕ್ ಗೆ 50  ಲಕ್ಷ ಹಿಟ್ಸ್ ಬರುವುದರ   ಮೂಲಕ ಈ ಚಿತ್ರ ರೆಕಾರ್ಡ್ ಬರೆದಿದೆ. 
 
ಅದೇರೀತಿ ಎರಡನೇ ಪೋಸ್ಟರ್ ಗೆ 20  ಲಕ್ಷ ಹಿಟ್ಸ್ ಬಂದಿವೆ, ಒಟ್ಟಾರೆ ಈ ಮೂವಿಯ ಮೋಶನ್ ಪೋಸ್ಟರ್ ಗೆ ಬಂದಿರುವ ಹಿಟ್ಸ್ 70  ಲಕ್ಷ. ಈ  ಮುಖಾಂತರ ಈ ಚಿತ್ರಕ್ಕೆ ಇರುವಂತಹ ಕ್ರೇಜ್ ಎಂತಹದ್ದು ಎಂದು ತಿಳಿದು ಬರುತ್ತದೆ. ಎ . ಆರ್. ರೆಹಮಾನ್  ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದರ ಆಡಿಯೋ ದೀಪಾವಳಿಯ ದಿನದಂದು ಬಿಡುಗಡೆ  ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಲಿಂಗ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹುಟ್ಟಿದ ಹಬ್ಬದ ದಿನದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.
 
ಈ ಬಗ್ಗೆ ನಿರ್ಮಾಪಕ ರಾಕ್ಲೈನ್ ಮಾತಾಡುತ್ತಾ ಲಿಂಗಾ ಚಿತ್ರಕ್ಕೆ ಸಂಬಂಧಪಟ್ಟಂತೆ ಮೊದಲ ಲುಕ್ ನ್ನು ವಿನಾಯಕ ಚೌತಿ ದಿನದಂದು ಬಿಡುಗಡೆ ಮಾಡಲಾಯಿತು, ಅದನ್ನು ವೀಕ್ಷಿಸಿದ ಪ್ರತಿಯೊಬ್ಬರೂ ತಲೈವಾ , ಸೂಪರ್ ಸ್ಟಾರ್ ರಜನಿ ಅವರ ಲುಕ್ ಗೆ ದಂಗಾಗಿ ಹೋಗಿದ್ದಾರೆ, ಅಷ್ಟೇ ಅಲ್ಲದೆ ಒಂದೇ ದಿನದಲ್ಲಿ ಉಂಟಾದ ಹಿಟ್ಸ್ ಹೊಸ ರೆಕಾರ್ಡ್ ಸೃಷ್ಟಿ ಮಾಡಿದೆ. ಇಷ್ಟೊಂದು ಖುಷಿಯನ್ನು ನಮಗೂ ಹಾಗೂ ನಮ್ಮ  ಟೀಮ್ ಗೂ ನೀಡಿದ ಎಲ್ಲರಿಗೂ ಧನ್ಯವಾದಗಳು. ಚಿತ್ರವನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?