Select Your Language

Notifications

webdunia
webdunia
webdunia
webdunia

ಅಂಬರೀಶ ಚಿತ್ರದಲ್ಲಿ ಹಾಟ್ ಹಾಟ್ ಪ್ರಿಯಾಮಣಿ ..

ಅಂಬರೀಶ ಚಿತ್ರದಲ್ಲಿ ಹಾಟ್ ಹಾಟ್ ಪ್ರಿಯಾಮಣಿ ..
ಬೆಂಗಳೂರು , ಸೋಮವಾರ, 1 ಸೆಪ್ಟಂಬರ್ 2014 (09:15 IST)
ಪ್ರಿಯಾಮಣಿ ಮತ್ತು ದರ್ಶನ್ ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಅಂಬರೀಶ. ಈ ಚಿತ್ರದಲ್ಲಿ ಈ ತಾರ ಜೋಡಿಯ ಕೆಮಿಸ್ಟ್ರಿ ತುಂಬಾ ಚಂದ ಇದೆ. ಇದರಲ್ಲಿ ಅವರು ಇತ್ತೀಚಿಗೆ ನಟಿಸಿದ ಡ್ಯಾನ್ಸ್  ನಂಬರ್ ನಲ್ಲಿ ಸಾಕಷ್ಟು ಸುಂದರವಾಗಿ  ಕೂಡಿದೆ ಇಬ್ಬರ ಹೊಂದಾಣಿಕೆ. 
 
ಈ ಚಿತ್ರದ ಈ ಹಾಡಿನ  ಟ್ರೈಲರ್  ನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಈ ಹಾಡಿನಲ್ಲಿ ಪ್ರಿಯಾಮಣಿ ಕೆಂಪು ಸೀರೆ ಧರಿಸಿದ್ದು, ಅತ್ಯಂತ ಮಾದಕವಾಗಿ ಕಂಡು ಬರುತ್ತಿದ್ದರು. ಹಾಡಿನ ಜೊತೆಗೆ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸುವಂತೆ ಈ ಚಿತ್ರದ ಪ್ರತಿಯೊಂದು  ಭಂಗಿಗಳು  ಪೂರಕ ಆಗಿತ್ತು ಎನ್ನುವ ಸಂಗತಿ ಈಗ ಗಾಂ ಧಿ ನಗರ ವಾಸಿಗಳ ಬಾಯಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಆಕೆ ಈ ಚಿತ್ರವನ್ನು ಅರ್ಧಕ್ಕೆ ಬಿಟ್ಟು ಹೊರ ಹೋದ ಕಥೆ ಬರೆದಿದ್ದೆವು. ಆದರೆ ಅವೆಲ್ಲ ಪ್ರಚಾರದ ಭಾಗ ಅನ್ನುವ ಸುದ್ದಿ ಇತ್ತು, ಆಕೆಯ ವೃತ್ತಿಯಲ್ಲಿ ಮಾಡಿದ ಈ ರೀತಿಯ ವರ್ತನೆಗೆ ಸಂಬಂಧಪಟ್ಟಂತೆ ಸಿಟ್ಟಾಗಿದ್ದರು ತಂಡ. ಆ ಮೂಲಕ ಮತ್ತೆ ಆಕೆ ಮತ್ತು ಚಿತ್ರತಂಡ ಪ್ರಚಾರ ಗಿಟ್ಟಿಸಿದ್ದು ಸುಳ್ಳಲ್ಲ! 
 
ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಿಯಾಮಣಿ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಮಹೇಶ್ ಸುಖಧರೆ ಈ ಚಿತ್ರವನ್ನು ಸುಖಧರೆ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿಮಿಸುತ್ತಿದ್ದಾರೆ.ಅವರೇ  ಇದರ ನಿರ್ದೇಶಕರಾಗಿದ್ದಾರೆ. ಡಾ. ಅಂಬರೀಶ್, ಸುಮಲತಾ ಅಂಬರೀಶ್ ಅತಿಥಿ ಪಾತ್ರದ ಮೂಲಕ ಮನರಂಜಿಸುತ್ತಿದ್ದಾರೆ. 

Share this Story:

Follow Webdunia kannada