Select Your Language

Notifications

webdunia
webdunia
webdunia
webdunia

ಮೆರಿಕೊಂ ಚಿತ್ರಕ್ಕೆ ಯು ಸರ್ಟಿಫಿಕೇಟ್ .. ಖುಷಿ ವ್ಯಕ್ತಪಡಿಸಿದ ಪಿಗ್ಗಿ ಚಾಪ್ಸ್

ಮೆರಿಕೊಂ ಚಿತ್ರಕ್ಕೆ ಯು ಸರ್ಟಿಫಿಕೇಟ್ .. ಖುಷಿ ವ್ಯಕ್ತಪಡಿಸಿದ ಪಿಗ್ಗಿ ಚಾಪ್ಸ್
ಮುಂಬೈ , ಶನಿವಾರ, 30 ಆಗಸ್ಟ್ 2014 (09:23 IST)
ಪ್ರಿಯಾಂಕ ಚೋಪ್ರ ಪ್ರಮುಖ ಪಾತ್ರದಲ್ಲಿ ಇರುವ ಚಿತ್ರ ಮೆರಿಕೊಂ. ಈ ಚಿತ್ರದಲ್ಲಿ ಆಕೆಯ ಪಾತ್ರವು ರಾಷ್ಟ್ರ ಪ್ರಸಿದ್ಧ ಬಾಕ್ಸಿಂಗ್ ಪಟು ಮೆರಿಕೊಂ ಅವರ ನಿಜ ಬದುಕನ್ನು ಕುರಿತದ್ದಾಗಿದೆ. ಈ ಚಿತ್ರಕ್ಕೆಂದು ಈಕೆ  ಡಿ ಗ್ಲಾಮರ್ ಆಗಿದ್ದಲ್ಲದೆ, ಅದಕ್ಕೆಂದು ಸಾಕಷ್ಟು ಪ್ರಯತ್ನಗಳನ್ನು ಆಕೆ ಮಾಡಿದ್ದಾಳೆ. ಆದರೆ ಇಷ್ಟೆಲ್ಲಾ ಕಷ್ಟಪಟ್ಟು ವಿಭಿನ್ನ ರೀತಿಯಲ್ಲಿ ತಯಾರಾದ ಕ್ರೀಡಾಪಟುವಿನ ಜೀವನ ಚರಿತ್ರೆಗೆ  ಸೆಂಟ್ರಲ್ ಬೋರ್ಡ್ ಆಫ್ ಫಿಲಿಂ ಸರ್ಟಿಫಿಕೇಶನ್ (ಸಿಬಿಎಫ್ಸಿ ) ಯು/ಎ ಸರ್ಟಿಫಿಕೆಟ್ ಕೊಟ್ಟಾಗ ಸಿಟ್ಟು ಬರೋದು ಸಹಜ ಚಿತ್ರದವರಿಗೆ. ಹಾಗೆ ಆಯ್ತು ಮೇರಿ ಕೊಂ ಚಿತ್ರತಂಡಕ್ಕೂ ಸಹಿತ. ಈ ನಿರ್ಧಾರದಿಂದ ಆ ಚಿತ್ರತಂಡ ಅಸಂತೃಪ್ತಿ ವ್ಯಕ್ತ ಪಡಿಸಿದಾಗ  ಸಿಬಿಎಫ್ಸಿ ಯವರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಈಗ ಅದಕ್ಕೆ ಯು ಸರ್ಟಿಫಿಕೇಟ್ ನೀಡಿದ್ದಾರೆ. 
 
 ಈ ಬಗ್ಗೆ ಖುಷಿ ವ್ಯಕ್ತ ಪಡಿಸಿರುವ ಪ್ರಿಯಾಂಕ ಚೋಪ್ರ ತಮ್ಮ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ದೊರಕಿರುವುದರ ಬಗ್ಗೆ ಟ್ವಿಟ್ವರ್ ನಲ್ಲಿ  ಹೇಳಿದ್ದಾರೆ. ಈ ಚಿತ್ರ ಸೆಪ್ಟಂಬರ್ ೫ ರಂದು ಪ್ರೇಕ್ಷಕರ ಮುಂದೆ ಬರಲಿದೆ.ಈಗಾಗಲೇ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ನಡೆದ ಪ್ರಚಾರವು ಸಾಕಷ್ಟು ಜನರನ್ನು ಆಕರ್ಷಿಸಿದ್ದು, ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಚಿತ್ರತಂಡದವರು. ಈ ಸಿನಿಮಾವನ್ನು ಒಮಾಂಗ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಸಂಜಯ್ ಲೀಲ ನಿರ್ಮಿಸಿದ್ದಾರೆ. 

Share this Story:

Follow Webdunia kannada