Webdunia - Bharat's app for daily news and videos

Install App

ಕನ್ನಡದ ಪ್ರಣೀತ ಇಂದು 'ರಭಸ' ವಾಗಿ ಮನರಂಜಿಸಲು ಸಿದ್ಧ !

Webdunia
ಶುಕ್ರವಾರ, 29 ಆಗಸ್ಟ್ 2014 (11:07 IST)
ಕನ್ನಡದ ಹುಡುಗಿ  ಪ್ರಣೀತ . ಆಕೆಯ ತೆಲುಗು ಚಿತ್ರರಂಗದ ಯಶಸ್ವಿ ನಟಿಯರಲ್ಲಿ ಒಬ್ಬಾಕೆ. ತನ್ನ ತಾರ ಬದುಕಿನ ಬಗ್ಗೆ ಹೇಳುತ್ತಾ ಈ ಚೆಲುವೆ, ಮುಖ್ಯವಾಗಿ ನಾನು ಈ ರಂಗಕ್ಕೆ ಬರ್ತೀನಿ ಎಂದು  ತಿಳಿದೇ ಇರಲಿಲ್ಲ. ನಮ್ಮದು ವೈದ್ಯರ   ಕುಟುಂಬ, ನಾನು ಸಹಿತ ಓದಿ ಯಾವುದಾದರೊಂದು ವೃತ್ತಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಗಮನ ಕೊಟ್ಟಿದ್ದೆ, ಆದರೆ ಆಕಸ್ಮಿಕವಾಗಿ ಈ ರಂಗದಲ್ಲಿ ನೆಲೆ ಕಾಣುವ ಅವಕಾಶ ಸಿಕ್ಕಿತು ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.ಅಷ್ಟೇ ಅಲ್ಲದೆ ಯಶಸ್ಸಿನ  ಮೆಟ್ಟಿಲು ಹತ್ತುವುದರಲ್ಲಿ ಈ ರಂಗ ಸಹಾಯ ಮಾಡಿದೆ ಎನ್ನುವ ಖುಷಿ ಹಂಚಿಕೊಂಡಿದ್ದಾಳೆ ಈ ಚೆಲುವೆ  . 
 
2010  ರಲ್ಲಿ ಕನ್ನಡ ಚಿತ್ರ  ಪೊರ್ಕಿ ಮೂಲಕ ಬಣ್ಣ ಹಚ್ಚಲು ಆರಂಭ ಮಾಡಿದ ಈ ಚೆಲುವೆ ಅದಾದ ಬಳಿಕ  ಸುಮಾರು 12  ಚಿತ್ರಗಳಲ್ಲಿ   ನಟಿಸಿದ್ದಾಳೆ.  ಅತ್ತಾರಿಂಟಿಕಿ ದಾರೇದಿ ಮೂಲಕ ಪವನ್ ಕಲ್ಯಾಣ್ ಅವರ ಜೋಡಿ ಆದ ಈ ಚೆಲುವೆ ಟಾಲಿವುಡ್ ನಲ್ಲಿಯೂ ಸಹ ಯಶಸ್ಸಿನ ಮಂತ್ರ ಹೇಳಿದ್ದಾಳೆ.
 
ತನ್ನ ಕೆರಿಯರ್ ಈಗ ಸರಾಗವಾಗಿ ಸಾಗುತ್ತಿದೆ, ಅದರ ಬಗ್ಗೆ ಹೆಚ್ಚಿನ ಖುಷಿ ಇದೆ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. ನಾನು ಚಿತ್ರದಲ್ಲಿ ಬರ್ತೀನಿ ಎಂದು ತಿಳಿದೇ ಇರಲಿಲ್ಲ ಕಳೆದ ನಾಲ್ಕು ವರ್ಷಗಳ ಹಿಂದೆ. ಆದರೆ ಇಲ್ಲಿಗೆ ಬಂದು ಈಗ ಒಂದು ನೆಲೆ ಕಂಡಿದ್ದೇನೆ. ಈಕೆ ಎನ್ಟಿಆರ್ ಅವರ ಜೊತೆ ನಟಿಸಿರುವ ಬಹು ನಿರೀಕ್ಷಿತ ಚಿತ್ರ ರಭಸ ಇಂದು ಬಿಡುಗಡೆ ಆಗುತ್ತಿದೆ. ಎನ್ಟಿಆರ್ ಅದ್ಭುತ ನಟ. ನಾನು ಅವರಿಂದ ಸಾಕಷ್ಟು ಕಲಿತೆ   ಎಂದು ಹೇಳಿದ್ದಾಳೆ ಈ ಚೆಲುವೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments