Select Your Language

Notifications

webdunia
webdunia
webdunia
webdunia

ಯೋಗಾ ಸುಂದರಿ ಅನುಷ್ಕ ಶೆಟ್ಟಿ 2014 ದ ಗಳಿಕೆ ಬರೋಬ್ಬರಿ 15 ಕೋಟಿ ...

ಯೋಗಾ ಸುಂದರಿ ಅನುಷ್ಕ ಶೆಟ್ಟಿ 2014  ದ ಗಳಿಕೆ ಬರೋಬ್ಬರಿ 15  ಕೋಟಿ ...
ಹೈದ್ರಾಬಾದ್‌ , ಗುರುವಾರ, 28 ಆಗಸ್ಟ್ 2014 (11:07 IST)
ದಕ್ಷಿಣ ಭಾರತದ ನಂಬರ್ ಆನ್ ತಾರೆ ಹೆಸರಲ್ಲಿ ಸಮಂತ ಹೆಸರು ಮೊದಲು ಬರುತ್ತದೆ. ಆಕೆಯ ನಟಿಸುವ ಚಿತ್ರಗಳು, ಯಶಸ್ಸು, ಈಗ ಕೈಲಿ ಇರುವಂತಹ ಸಿನಿಮಾಗಳ ಲೆಕ್ಕದಲ್ಲಿ ಆಕೆ ಮುಂದೆ . ಆದರೆ ಆದಾಯ ಗಳಿಕೆಯಲ್ಲಿ ಮಾತ್ರ  ಕನ್ನಡದ ಹುಡುಗಿ ಅನುಷ್ಕಗಿಂತ ಹಿಂದೆ ಇದ್ದಾಳೆ. ಬ್ರಾಂಡಿಂಗ್, ಸಿನಿಮ, ಅದೂ ಇದು ಅಂತ ಎಲ್ಲವನ್ನು ಲೆಕ್ಕ ಹಾಕಿದರೆ ಅನುಷ್ಕ 2014 ರಲ್ಲಿ ಗಳಿಕೆ ಮಾಡಿರುವ ಮೊತ್ತ 15  ಕೋಟಿ ರೂಪಾಯಿಗಳು. ಈ ಸಂಖ್ಯೆ ಕಣ್ಣಿಗೆ  ಕಾನುವನ್ತಹದ್ದು, ಗೊತ್ತಿಲ್ಲದೇ ಇರುವ ಅಮೌಂಟ್ ಬಗ್ಗೆ ಯಾರಿಗೂ ಹೇಳೋಕೆ ಆಗಿಲ್ಲ.. ಆ ವಿಷ್ಯ ಪಕ್ಕಕೆ ಇಡಿ. ದಕ್ಷಿಣ ಭಾರತದಲ್ಲಿನ ನಟಿಯರಲ್ಲಿ ಯಾರು ಅಧಿಕ ಪ್ರಮಾಣದಲ್ಲಿ ಹಣವನ್ನು  ಗಳಿಸುತ್ತಿದ್ದಾರೆ ಎನ್ನುವ ಬಗ್ಗೆ ಕಾಲಿವುಡ್ ಮಗಜೈನ್ ನಡೆಸಿದ ಸರ್ವೆಯಿಂದ ಹೊಸ ಸಂಗತಿ ಹೊರ ಬಂದಿದೆ.  
 
ಅದರಲ್ಲಿ ಅನುಷ್ಕ ಹೆಸರು ಮೊದಲು ಬಂದಿದ್ದು ಸಮಂತ ಎರಡನೆಯ ಸ್ಥಾನಕ್ಕೆ ಇಳಿದಿದ್ದಾಳೆ. ತೆಲುಗು ಮತ್ತು ತಮಿಳು ಚಿತ್ರಗಳಿಗೆ ಬೇಕಾಗಿರುವ ಅತಿ ಬೇಡಿಕೆಯ ನಟಿ. ಈಗ ಆಕೆ ಕೈಲಿ ಬಾಹುಬಲಿ, ರುದ್ರಮದೇವಿ, ಸೂಪರ್ ಸ್ಟಾರ್ ರಜನೀಕಾಂತ್ ಅವರ ಜೊತೆ ಲಿಂಗ, ಅಜಿತ್ ಜೊತೆಯಲ್ಲಿ ಇನ್ನು ಹೆಸರಿದ ಚಿತ್ರದಲ್ಲಿ ಸಹಿತ ಆಕೆ ನಟಿಸುತ್ತಿದ್ದು, ಅವೆಲ್ಲವೂ ಅದ್ಧೂರಿಯ ಚಿತ್ರಗಳಾಗಿವೆ. 
ಈ ನಾಲ್ಕು ಪ್ರಾಜಕ್ಟ್ ಗಳಿಗೆಂದು ಆಕೆ ಅನೇಕ ದಿನಗಳಿಂದ  ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾಳೆ. ಅದಕ್ಕೆ ಕಾರಣ ಆ ಪ್ರಾಜಕ್ಟ್ ಗಳಿಗಿರುವ ವಿಶೇಷತೆ. ಒಟ್ಟಾರೆ ಈ ಯೋಗಾ ಸುಂದರಿ ಎಲ್ಲರ ಹಾಟ್ ಫೇವರೆಟ್ ಹಣಗಲಿಕೆಯಲ್ಲಿಯು ಸಹಿತ ಮುಂದೆ ಇದ್ದಾಳೆ. 

Share this Story:

Follow Webdunia kannada