Select Your Language

Notifications

webdunia
webdunia
webdunia
webdunia

ಏನಾಗಿದೆ ತಮನ್ನ ಮಹೇಶ್ ಬಾಬು ನಡುವೆ... ಏನೋ ನಡಿತಾ ಇದೆ ಅವರಿಬ್ಬರ ಮಧ್ಯೆ?

ಏನಾಗಿದೆ ತಮನ್ನ ಮಹೇಶ್ ಬಾಬು ನಡುವೆ... ಏನೋ ನಡಿತಾ ಇದೆ ಅವರಿಬ್ಬರ ಮಧ್ಯೆ?
ಹೈದ್ರಾಬಾದ್‌‌ , ಗುರುವಾರ, 28 ಆಗಸ್ಟ್ 2014 (11:04 IST)
ಸಾಮಾನ್ಯವಾಗಿ ಕೆಲವು ಕಲಾವಿದರು ಯಾವುದೇ ರೀತಿಯ ಗಾಸಿಪ್ಸ್ ಕಡೆಗೆ ಆದ್ಯತೆ ನೀಡಲ್ಲ, ತುಂಬಾ ಎಚ್ಚರಿಕೆಯಿಂದ ವ್ಯವಹಾರ ಮಾಡ್ತಾರೆ.  ಆ ಪಟ್ಟಿಯಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹ ಸೇರ್ಪಡೆ ಆಗ್ತಾರೆ. ಆದರೆ ಆಗದು ಚಿತ್ರದಲ್ಲಿ ಮಾತ್ರ ಭಿನ್ನತೆ ಆರಂಭ ಆಗಿದೆ ಎನ್ನುವ ಗುಸುಗುಸು ಆರಂಭ ಆಗಿದೆ ಟಾಲಿವುಡ್ ಫಿಲಂ ನಗರದಲ್ಲಿ. ಅಲ್ಲಿನ ನಗರವಾಸಿಗಳ ಪ್ರಕಾರ  ತಮನ್ನ ಇದಕ್ಕೆಲ್ಲ ಕಾರಣ ಅಂತೆ. ಎಲ್ಲರಿಗೂ ಗೊತ್ತು ತಮನ್ನ ಅಂಬೋ ಮಿಲ್ಕಿ ಬ್ಯೂಟಿ ಈಗ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿಯೂ ಸಣ್ಣ ಮಟ್ಟದ ಫ್ಲಾಪ್ ಆಗಿದ್ದಾಳೆ. ಇದರಿಂದ ಆಕೆಯ ಬದುಕು ತಾರುಮಾರಾಗಿದೆ. ಜೊತೆಗೆ ಆಕೆಗೆ ಟಾಲಿವುಡ್ ನಲ್ಲಿ ಅವಕಾಶಗಳ ಕೊರತೆ ಇದೆ. ಇವೆಲ್ಲ ಒಂದು ಕಡೆ ಇಡೋಣ. ಈ ಹಾಲು ಬಣ್ಣದ ಚೆಲುವೆ ತನಗೆ ,ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ದೊರೆತರೆ ಸಾಕು ತಾರ ಬದುಕು ಪಾವನ ಆಗುತ್ತದೆ  ಎಂದು ನಂಬಿದ್ದಳು. 
 
ಆಕೆಯ ಕನಸಿನಂತೆ ಆಗಡು ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆಕೆಯ ವರ್ತನೆ ಸೆಟ್ ನಲ್ಲಿ ತುಂಬಾ ವಿಚಿತ್ರವಾಗಿದೆಯಂತೆ. ಮಹೇಶ್ ಜೊತೆ ಯಾವುದೇ ಸೀನ್ ಬಗ್ಗೆ ಚರ್ಚಿಸದೆ ನೇರವಾಗಿ  ಡೈರೆಕ್ಟರ್ ಬಾಲಿ ಹೋಗಿ ತಾನು ಶಾಟ್ ಗೆ ರೆಡಿ ಎಂದು ಹೇಳ್ತಾ ಇರೋದು ಕಂಡು ಮಹೇಶ್ ಮತ್ತು ತಮ್ಮು ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂದು ಟಾಲಿವುಡ್ ನಗರವಾಸಿಗಳು ಆಡಿಕೊಳ್ತಾ ಇದ್ದಾರೆ. ಅದಕ್ಕೆ ಕಾರಣ ಆಗಡು ಚಿತ್ರದ ಪ್ರಮೋಶನ್ ಗಳಲ್ಲಿ ತಮ್ಮುಗಿಂತ ಮಹೇಶ್ ಗೆ ಹೆಚ್ಚು ಆದ್ಯತೆ ನೀಡಿರುವುದಾಗಿದೆ ಎನ್ನುವ ನಿಜ ಫ್ಯಾಕ್ಟ್ ಸಹಿತ ಈಗ ಜೋರಾಗಿ ಕೇಳಿ ಬರುತ್ತಿದೆ. ಆಕೆಗೆ ಹೆಚ್ಚು ಆದ್ಯತೆ ನೀಡಿದ್ದ  ಹಮ್ಷಕಲ್ ಡೈರೆಕ್ಟರ್ ತೋಪಾದಂತೆ ಆಗಡು ನಿರ್ದೇಶಕರು ತಮ್ಮ ಚಿತ್ರವನ್ನು ಫ್ಲಾಪ್ ಮಾಡೋಕೆ ಆದ್ಯತೆ ನೀಡ್ತಾ ಇಲ್ಲ ಅಷ್ಟೇ!! 

Share this Story:

Follow Webdunia kannada