Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಗೆ ಈಗ ಸೂಪರ್ ಟೈಮ್ ಆರಂಭ ಆಗಿದೆ!

ಗೋಲ್ಡನ್ ಸ್ಟಾರ್ ಗಣೇಶ್  ಗೆ  ಈಗ ಸೂಪರ್ ಟೈಮ್ ಆರಂಭ ಆಗಿದೆ!
ಬೆಂಗಳೂರು , ಗುರುವಾರ, 28 ಆಗಸ್ಟ್ 2014 (11:01 IST)
ಸುವರ್ಣ ವಾಹಿನಿಯಲ್ಲಿ ಸುದೀಪ್ ಬಿಗ್ ಬಾಸ್2 ಕಾರ್ಯಕ್ರಮ, ರಮೇಶ್ ಅರವಿಂದ್ ಜೀ ಕನ್ನಡ ವಾಹಿನಿಯಲ್ಲಿ ವಿಕೆಂಡ್   ವಿತ್ ರಮೇಶ್ ಹೀಗೆ ಸ್ಟಾರ್ ನಟರು ಟಿವಿಗೆ ಬಂದು ತಮ್ಮ ಯಶಸ್ಸು ಅಲ್ಲಿಯೂ ತೋರಿಸಿದ್ದಾರೆ. ಆ ಬಗ್ಗೆ ಎರಡು ಮಾತಿಲ್ಲ. ಈಗ ಈಟೀವಿ ಮೂಲಕ ಮತ್ತೊಮ್ಮೆ ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಮಿನಿಟ್ ಎನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಧಾವಿಸಿದ್ದಾರೆ. ಈ ಕಾರ್ಯಕ್ರಮ ಇದೆ ತಿಂಗಳ 30  ರಿಂದ ಆರಂಭ ಆಗಲಿದೆ. ಇದು 32ಎಪಿಸೋಡ್ ನೀಡುತ್ತದೆ ಎನ್ನುವ ಮಾತನ್ನು ಈಟಿವಿ ಮನೋರಂಜನಾ ವಿಭಾಗದ ಮುಖ್ಯಸ್ಥ ಪರಮೇಶ್ವರ್ ಗುಂಕಲ್ ಹೇಳಿದ್ದಾರೆ.
 
 ಉದಯ ಟೀವಿಯ ಕಾಮಿಡಿ ಟೈಮ್ ನಂತರ ಗಣೇಶ್ ಹಿರಿತೆರೆಗೆ  ಹೋಗಿ ಅಲ್ಲಿ ಯಶಸ್ಸು ಪಡೆದರು. ಅದಾದ ಬಳಿಕ ಈಗ ಮತ್ತೆ ಕಿರುತೆರೆಯತ್ತ ಗಮನ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ಗಳು ಭಾಗವಹಿಸುತ್ತಾರೆ. ಅದರಲ್ಲಿ ಗಳಿಸಿದ ಮೊತ್ತವನ್ನು ಅವರು ತಮ್ಮ ಅಭಿಮಾನಿಗಳಿಗೆ ನೀಡುತ್ತಾರೆ. ಆರಂಭಿಕ ಎಪಿಸೋಡ್ ನಲ್ಲಿ ಫೇರ್ ಅಂಡ್ ಲವ್ಲಿ ತಂಡ ಬರಲಿದೆ. ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರ ಆಗುತ್ತದೆ. ಬೆಂಗಳೂರಿನ ಪಾರ್ಕ್ ಹೋಟೆಲ್ ನಲ್ಲಿ ಈ ಕಾರ್ಯಕ್ರಮ ಲಾಂಚ್ ಆಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಯ ಸಹನೆಯ, ಬುದ್ಧಿವಂತಿಕೆ ಎಲ್ಲವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಗೆದ್ದವರಿಗೆ 10  ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಈಟೀವಿ ತಂಡ ತಿಳಿಸಿದೆ.  ಈಗಾಗಲೇ  ಪಾಪ ಪಾಂಡು, ಸಿಲ್ಲಿಲಲ್ಲಿ , ಮನ್ವಂತರ , ಮುಕ್ತ ಮುಕ್ತ ಹೀಗೆ ಹತ್ತು ಹಲವ್ವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿರುವ ಈಟೀವಿ ಈಗ ಟೈಮ್ ಮೂಲಕ ಯಶಸ್ವಿ ಆಗಲು ಸಿದ್ಧವಾಗಿದೆ. ಒಟ್ಟಾರೆ  ಈಟೀವಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು   ಅಗತ್ಯವಾದ ಹಣಾಹಣಿಗೆ ಸಿದ್ಧ ಆಗಿದೆ. ಅದಕ್ಕೆ ಪೂರಕವಾದ ಸಿದ್ಧತೆ ಮಾಡಿದೆ ಸೂಪರ್ ಟೈಮ್ ಮೂಲಕ!  

Share this Story:

Follow Webdunia kannada