ಗ್ಲಾಮರ್ ಲೋಕದಲ್ಲಿ ಹಂಗಾಮ ಮಾಡುತ್ತಿರುವ ನಟೀಮಣಿಗಳಲ್ಲಿ ನಯನತಾರ ಸಹ ಒಬ್ಬಾಕೆ. ಆಕೆ ತನ್ನ ಅಭಿನಯ, ಗ್ಲಾಮರ್ ಮತ್ತು ಪ್ರೇಮ ಕಥೆಯಿಂದ ಸಹಿತ ಅತಿ ಹೆಚ್ಚು ಚಾಲ್ತಿಯಲ್ಲಿ ಇರುವ ನಟಿ. ಕಾಲಿವುಡ್ , ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಟಿಸಿರುವ ಈ ತಾರೆಯ ನಿಜವಾದ ಹೆಸರು ಮತ್ತು ಆ ಹೆಸರು ಬದಲಾದ ರಹಸ್ಯ ಸಂಗತಿ ಇಂದು ನಿಮ್ಮ ಮುಂದೆ ಇಡ್ತಾ ಇದ್ದಿವಿ.ನಯನತಾರ ಮೂಲ ನಾಮಧೇಯ ಡಯಾನ ಮರಿಯಮ್ ಕುರಿಯನ್ ಆಕೆ ಜನ್ಮಸ್ಥಳ ಕೇರಳ. ಆದರೆ ಯಶಸ್ವಿ ಆಗಿರೋದು ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ .
ನಯನ ನಟಿಸಿದ ಮೊದಲ ಚಿತ್ರ ಮನಸ್ಸಿನಕ್ಕರೆ ಎನ್ನುವ ಸಿನಿಮಾದ ನಿರ್ದೇಶಕ ಸತ್ಯನ್ . ಆತ ಆಕೆಯ ಹೆಸರನ್ನು ನಯನ್ ಎಂದು ಬದಲಾಯಿಸಿಕೊಳ್ಳುವಂತೆ ಹೇಳಿದರು. ಆದರೆ ತನಗೆ ಯಾವ ಹೆಸರು ಇಟ್ಟುಕೊಳ್ಳಬೇಕು ಎನ್ನುವುದು ತಿಳಿಯದ ಗೊಂದಲ ಇದೆ ಎನ್ನುವ ಮಾತು ಆಕೆ ಹೇಳಿದ್ದಳು. ಆಗ ನಿರ್ದೇಶಕರು 30 ಹೆಸರು ಚೀಟಿಗಳಲ್ಲಿ ಬರೆದು ಬೋಲ್ ನಲ್ಲಿ ಹಾಕಿದರಂತೆ.
ಆ ಬೌಲ್ ನಲ್ಲಿ ಇರುವ ಸ್ಲಿಪ್ ನಲ್ಲಿ ಒಂದನ್ನು ತೆಗೆಯುವಂತೆ ಅಂದಿನ ನಯನ್ ಗೆ ಸತ್ಯನ್ ಹೇಳಿದರು. ಅವರು ತಿಳಿಸಿದಂತೆ ಮಾಡಿದಾಗ ಅಲ್ಲಿ ನಯನತಾರ ಅನ್ನುವ ಹೆಸರು ದೊರಕಿತಂತೆ. ಈ ಹೆಸರು ವಿಚಿತ್ರ ಎಂದು ಅನ್ನಿಸಿ ಅದರ ಬಗ್ಗೆ ಆಕೆ ನಿರ್ದೇಶಕರ ಬಳಿ ಕೇಳಿದಳಂತೆ ಇದು ನನಗೆ ಹೊಂದುತ್ತದೆಯೇ ಎಂದು . ಈ ಹೆಸರು ನಿನಗೆ ಹೊಂದುತ್ತದೆ ಎಂದು ಹೇಳಿದರೂ ಸಹ ಆಕೆ ಆ ಹೆಸರನ್ನು ಅನೇಕ ದಿನಗಳ ಕಾಲ ಯಾರ ಮುಂದೆಯೂ ಸಹ ತಿಳಿಸಲೇ ಇಲ್ಲ ವಂತೆ. ಆದರೆ ಆಕೆಯು ಈಗ ದಕ್ಷಿಣ ಭಾರತದ ತಾರಾಲೋಕದ ತಾರೆ ಆಗಿದ್ದಾಳೆ. ಡಯಾನ ಹೆಸರು ಮರೆತು ಹೋಗುವಷ್ಟು ಬೆಳೆದಿದ್ದಾಳೆ.