Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ನ ಕಡತಗಳು ಮುಂಬೈ ಠಾಣೆಯಿಂದ ಮಾಯ ಮಾಯಾ..

ಸಲ್ಮಾನ್ ಖಾನ್   ಹಿಟ್ ಅಂಡ್ ರನ್ ಕೇಸ್ ನ ಕಡತಗಳು ಮುಂಬೈ ಠಾಣೆಯಿಂದ ಮಾಯ ಮಾಯಾ..
ಮುಂಬೈ , ಶನಿವಾರ, 23 ಆಗಸ್ಟ್ 2014 (10:14 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಕೇಸ್ ನಲ್ಲಿ ಒರಿಜಿನಲ್  ಕಡತಗಳು ಮಾತ್ರವಲ್ಲದೆ ಡೈರಿ ಸಹಿತ ಮಾಯವಾಗಿದೆ. ಈ ಕೇಸ್ ನ ಕಡತಗಳನ್ನು  ಹೀಗೆ ಕಾಣೆ ಆಗುವಂತೆ ಮಾಡಿರುವ ಮುಂಬೈ  ಪೊಲೀಸರ ಬಗ್ಗೆ  ಕೋರ್ಟ್ ಅಸಂತೃಪ್ತಿ ವ್ಯಕ್ತ ಪಡಿಸಿದೆ.ಕೇಸ್ ಡೈರಿ ಸಹಿತ ಕಾಣೆ ಆಗಿದೆ ಎನ್ನುವ ಸಂಗತಿಯನ್ನು ಪೊಲೀಸರು ಮೊದಲ ಬಾರಿಗೆ ಕೋರ್ಟ್ ಮುಂದೆ ತಿಳಿಸಿದರು ಇತ್ತೀಚಿಗೆ . ಆಗ ಅದನ್ನು ಹುಡುಕುವಂತೆ ಪೊಲೀಸರಿಗೆ ಅಂತಿಮವಾಗಿ ಅವಕಾಶ ನೀಡಿದೆ ಕೋರ್ಟ್. ಮುಂದಿನ ತಿಂಗಳ  ಒಳಗೆ ಈ ಕೆಲಸವನ್ನು ಮಾಡ ಬೇಕು ಎನ್ನುವ ಆಜ್ಞೆ  ಕೋರ್ಟ್ ಹೊರಡಿಸಿದೆ. 
 
ಈ ಕೇಸ್ ಗೆ ಸಂಬಂಧಪಟ್ಟ 63 ಕಡತಗಳಲ್ಲಿ ಏಳು ಮಾತ್ರ ಸಿಕ್ಕಿದ್ದರ ಬಗ್ಗೆ ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ. ಆದರೆ ಟ್ರಯಲ್ ಕೋರ್ಟ್ ನಲ್ಲಿ ಒರಿಜಿನಲ್  ಕಡತಕ್ಕೆ ಮಾತ್ರ ಆದ್ಯತೆ ನೀಡ ಬೇಕು ಎನ್ನುವ ವಾದವನ್ನು ಸಲ್ಮಾನ್ ಖಾನ್ ಅವರ ಪರ ವಕೀಲ ಶ್ರೀಶಾಂತ್ ವಾದಿಸಿದ್ದರು. 2002  ರಲ್ಲಿ ವೇಗವಾಗಿ ಕಾರು ನಡೆಸಿ ಬಾಂದ್ರಾದ ಕಾರ್ಟರ್ ಫುಟ್ಪಾತ್ ಮೇಲೆ ನಿದ್ರಿಸುತ್ತಿದ್ದ ಐದು ಜನರ ಮೇಲೆ ಗಾಡಿ ಏರಿಸಿರುವ ಆರೋಪವನ್ನು ಸಲ್ಮಾನ್ ಖಾನ್ ಎದುರಿಸುತ್ತಿದ್ದಾರೆ. ಆ ಘಟನೆ ಆ ವರ್ಷದ 28 ನೇ ದಿನಾಂಕದಂದು ನಡೆದಿತ್ತು. ಅನೇಕ ಕಾರಣಗಳಿಂದ ಹಿಂದೆ ಉಳಿದಿದ್ದ ಆ ಕೇಸ್ ಮತ್ತೆ ಜೀವ ತಳೆದಿದೆ. ಆದರೆ ಅದನ್ನು ಮುಂದುವರೆಸಲು ಕಡತಗಳ ಮಾಯಾ ಆಗಿರುವ ಸಂಗತಿಯು ಕೇಸ್  ಹಿನ್ನಡೆ ಆಗುವಂತೆ ಮಾಡಿದೆ. 

Share this Story:

Follow Webdunia kannada