Select Your Language

Notifications

webdunia
webdunia
webdunia
webdunia

ಉತ್ತಮ ವಿಲನ್ ಗೆ ಕಮಲ್ ಹಾಸನ್ ಮೇಕಪ್ ಗೆ ವ್ಯಯಿಸಿದ ಸಮಯ

ಉತ್ತಮ ವಿಲನ್ ಗೆ ಕಮಲ್  ಹಾಸನ್ ಮೇಕಪ್ ಗೆ ವ್ಯಯಿಸಿದ ಸಮಯ
ಚೆನ್ನೈ , ಶನಿವಾರ, 23 ಆಗಸ್ಟ್ 2014 (10:11 IST)
ಕಮಲ್  ಹಾಸನ್ ಪಾತ್ರಗಳಲ್ಲಿ ವೈವಿಧ್ಯತೆಯನ್ನು ಬಯಸುವ ಅಭಿಜಾತ ಕಲಾವಿದ. ಅವರ ಪ್ರತಿಯೊಂದು ಪಾತ್ರವು ಆ ಕಾರಣದಿಂದ ಹೆಚ್ಚು ಜನರಮನ ಗೆದ್ದಿರುವುದು. ಪದ್ಮಭೂಷಣ ಕಮಲ್ ಹಾಸನ್ ದಶಾವತಾರ ಚಿತ್ರಕ್ಕೆಂದು ಮಾಡಿದ ಸಿದ್ಧತೆ, ಅದರಲ್ಲಿನ ನಟನೆ, ಪಾತ್ರದ ಪರಕಾಯ ಪ್ರವೇಶ ಮಾಡಿದ ಬಗೆ ಎಲ್ಲವೂ ಅನನ್ಯ. ಆ ಚಿತ್ರದ ಪಾತ್ರಗಳಿಗಾಗಿ ಅವರು ಪ್ರತಿದಿನ ನಾಲ್ಕು ಗಂಟೆಗಳ ಕಾಲ ತಪ್ಪದೆ ಮೇಕಪ್ ಕೆಲಸದಲ್ಲಿ ಮಗ್ನರಾಗುತ್ತಿದ್ದರಂತೆ. ಈಗ ಈ  ವಿಶ್ವನಾಯಕ ನಟಿಸುತ್ತಿರುವ ಮತ್ತೊಂದು ವಿಭಿನ್ನ   ಚಿತ್ರ ಉತ್ತಮ ವಿಲನ್.
 
ಈ ಚಿತ್ರದಲ್ಲಿ ಆತ ದ್ವಿಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. 1980  ರ ರಂಗ ಭೂಮಿ ನಟನ ಪಾತ್ರ ಒಂದು ಮತ್ತು ಈಗಿನ ಹೀರೋ ಪಾತ್ರ ಮತ್ತೊಂದು. ರಂಗಭೂಮಿಯ ಕಲಾವಿದನ ಪಾತ್ರಕ್ಕೆಂದು ಅವರು ಮೇಕಪ್ ಮಾಡಿಕೊಳ್ಳಲು ಸುಮಾರು ನಾಲ್ಕು ಗಂಟೆಗಳ ಕಾಲ   ವ್ಯಾಯ ಮಾಡುತ್ತಿದ್ದರಂತೆ. ಅಂದರೆ ಆ ಪಾತ್ರದ ಜೀವಂತಿಕೆಗಾಗಿ ಅವರು ಆದ್ಯತೆ ನೀಡಿದ ಪರಿ ಈ ರೀತಿಯಾಗಿದೆ.  ಬೇಗ ಎದ್ದು  ಮುಂಜಾನೆ ಮೇಕಪ್ ಮಾಡಿಸಿಕೊಳ್ಳಲು ಕುಳಿತರೆ ಅದು ಪೂರ್ಣ ಆಗುವವರೆಗೂ ಸಹನೆಯಾಗಿದ್ದು, ಆ ಬಳಿಕ ಆ ಪಾತ್ರದಲ್ಲಿ ತಲ್ಲಿನ ಆಗಿ ಬಿಡುವ ಗುಣ ಹೊಂದಿದ್ದರಂತೆ ಈ ಮಹಾನ್ ಕಲಾವಿದ. 
 
 ಇತ್ತೀಚಿಗೆ ಕಾಮನ್ ಇಂತಹ ಭಿನ್ನ ಪಾತ್ರಗಳತ್ತ ಗಮನ ನೆಟ್ಟಿದ್ದಾರೆ. ಉತ್ತಮ ವಿಲನ್ ಚಿತ್ರವನ್ನು ಕ ನಟ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. ಪೂಜಾ ಕುಮಾರ್, ಊರ್ವಶಿ , ಜಯರಾಂ, ಆಂಡ್ರಿಯ, ಮುಂತಾದವರು ಕಮಲ್ ಜೊತೆ ನಟಿಸಿದ್ದಾರೆ. ತಿರುಪತಿ ಬ್ರದರ್ಸ್  ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ. 

Share this Story:

Follow Webdunia kannada