Select Your Language

Notifications

webdunia
webdunia
webdunia
webdunia

ಕೋಮಲ್ ಭೂತಾತ್ಮನ ಬಳಿ ಗ್ಲಾಮರ್ ನಿಖಿತ ನಮೋ ಜಪ !

ಕೋಮಲ್  ಭೂತಾತ್ಮನ ಬಳಿ ಗ್ಲಾಮರ್ ನಿಖಿತ ನಮೋ  ಜಪ !
ಬೆಂಗಳೂರು , ಶನಿವಾರ, 23 ಆಗಸ್ಟ್ 2014 (09:57 IST)
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಿಖಿತ ಎನ್ನುವ ಗ್ಲಾಮರ್ ಬೊಂಬೆಗೆ ಅವಕಾಶಗಳ ಸುರಿಮಳೆ ಎಂದು ನಂಬಲಾಗಿತ್ತು. ಆದರೆ ಅಂತಹ ಯಾವುದೇ ಬದಲಾವಣೆ ಕಂಡಿಲ್ಲ ಈ ತಾರೆಯ ಬದುಕಲ್ಲಿ. ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಆಕೆ ಪುಟ್ಟ, ಅತಿಥಿ ಪಾತ್ರ ಹೀಗೆ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಕೆಲಸದಲ್ಲಿ  ನಿರತರಾಗಿದ್ದಾರೆ. ಈಗ ಕೋಮಲ್ ಅಭಿನಯದ 'ನಮೋ ಭೂತಾತ್ಮ ಚಿತ್ರದಲ್ಲಿ  ನಿಖಿತ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ತೆಲುಗು ಹಾಸ್ಯನಟ  ಆಲಿ ಸಹಿತ ಆ ಚಿತ್ರದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
 
ನಿಖಿತ ಈಗಾಗಲೇ ಈ ಚಿತ್ರದಲ್ಲಿ ನಟಿಸಿ ಆಗಿದೆ. ಅಷ್ಟೇ ಅಲ್ಲದೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿ ನಿರ್ಮಾಪಕರ ಖರ್ಚು ಉಳಿಸಿದ್ದಾರೆ. ಕನ್ನಡ ಬರಲ್ಲ ಎನ್ನುವ ಅಪವಾದದಿಂದ ಮುಕ್ತರಾಗಲು  ಇಂತಹ ಸಾಹಸಕ್ಕೆ ಸಿದ್ಧರಾಗಿದ್ದಾರೆ ನಿಖಿತ.   ಕಂಠೀರವ ಸ್ಟುಡಿಯೋದಲ್ಲಿರುವ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ತಾವೇ ಸ್ವತಃ ಡಬ್ ಮಾಡಿ ಸುದ್ದಿ ಮಾಡಿದ್ದಾರೆ. ಈಕೆ ಈ ಚಿತ್ರದ ನಾಯಕಿಯ ಪಾತ್ರಧಾರಿಯಂತೆ!!ಕನ್ನಡದ ನಮೋ ಭೂತಾತ್ಮ  ತಮಿಳಿನ ಯಾಮಿರುಕ್ಕ ಭಯಮೇ ಎಂಬ ಚಿತ್ರದ ರೀಮೇಕು.  ನೃತ್ಯ ನಿರ್ದೇಶಕ ಮುರಳಿ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಈ ಚಿತ್ರದ ಮುಖಾಂತರ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ಮುಗಿದಿರುವ ಚಿತ್ರದ  ಮಾತಿನ ಭಾಗದ ಚಿತ್ರೀಕರಣದ ಜೊತೆಗೆ ಒಂದು ಹಾಡಿನ ಚಿತ್ರೀಕರಣವೂ ಮುಗಿದಿದೆಯಂತೆ.. ಸಧ್ಯದಲ್ಲೇ ಕೋಮಲ್ ಅಭಿಮಾನಿಗಳಿಗೆ ಭೂತದ ಕಾಟ ನಿಶ್ಚಿತ !! 

Share this Story:

Follow Webdunia kannada