Select Your Language

Notifications

webdunia
webdunia
webdunia
webdunia

ಪುನೀತ್ ಪವರ್ ಸ್ಟಾರ್ ಚಿತ್ರದ ಬಿಡುಗಡೆ ಕಾಲ ಕೂಡಿ ಬಂದಿಲ್ಲ ... ಅಭಿಮಾನಿಗಳಿಗೆ ನಿರಾಸೆ?

ಪುನೀತ್ ಪವರ್ ಸ್ಟಾರ್ ಚಿತ್ರದ ಬಿಡುಗಡೆ ಕಾಲ ಕೂಡಿ ಬಂದಿಲ್ಲ ... ಅಭಿಮಾನಿಗಳಿಗೆ ನಿರಾಸೆ?
ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2014 (10:21 IST)
ಕೆಲವು ಚಿತ್ರಗಳ ಕತೆಯೇ ಹಾಗೆ ಅಂತ ಕಾಣುತ್ತೆ ಆರಂಭಿಕ ಹಂತದಿಂದಲೂ ಸಹ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ. ಇದಕ್ಕೆ ಪವರ್ಸ್ಟಾರ್ ಪುನೀತ್ ಅವರ ನಟನೆಯ ಪವರ್ ಸ್ಟಾರ್ ಚಿತ್ರ ಹೊರತಲ್ಲ.  ಇದೇ ತಿಂಗಳ 28ನೇ ತಾರೀಖು ಬಿಡುಗಡೆ ಆಗ ಬೇಕಿತ್ತು, ಆದರೆ ಹಾಗೆ ಆಗುವ ಸಾಧ್ಯತೆ ಕಡಿಮೆ ಆಗಿದೆ ಏಕೆಂದರೆ ಈಗಾಗಲೇ ಕರ್ನಾಟಕ ಫಿಲಿಂ ಚೇಂಬರ್ ನಲ್ಲಿ ಪವರ್ ಎನ್ನುವ ಟೈಟಲ್ ನೋಂದಾಯಿಸಿದ್ದ ಸೂರ್ಯ ಎನ್ನುವ ನಟ ನಿರ್ದೇಶಕ   ಈ ಟೈಟಲ್ ಗೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಿಲು ಏರಿ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಈ ಟೈಟಲ್ ರಿಜಿಸ್ಟರ್ ಆಗಿದ್ದರೂ ಸಹ ಮತ್ತೆ ಇಂತಹ ಟೈಟಲ್ ಹೋಲಿಕೆ ಇರುವುದಕ್ಕೆ ಸಮ್ಮತಿ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ ಸೂರ್ಯ. 
 
ಪವರ್ ಸ್ಟಾರ್ ಚಿತ್ರ ಮತ್ತು ತಮ್ಮ ಚಿತ್ರದ ಬಗ್ಗೆ ಜನರಿಗೆ ಗೊಂದಲ ಉಂಟಾಗುತ್ತದೆ. ಆದ ಕಾರಣ ಈ ಟೈಟಲ್ ನ್ನು ನೀವು ಸಮ್ಮತಿಸ ಬೇಡಿ ಎನ್ನುವ ಮನವಿ ಮಾಡಿದ್ದರು ಸೂರ್ಯ. ಆದರೂ ಪುನೀತ್ ಚಿತ್ರಕ್ಕೆ ಅಂತಿಮವಾಗಿ ಪವರ್  ಬಂದೇ ಬಿಟ್ಟಿದೆ. ಈ ಕಾರಣಕ್ಕಾಗಿ ಈ ಚಿತ್ರದ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿ ಸೂರ್ಯ ಸಿಟಿ ಸಿವಿಲ್ ಕೋರ್ಟ್ ಮೊರೆ ಹೊಕ್ಕಿದ್ದಾರೆ.ಸೂರ್ಯ ಅವರ ದೂರಿನ ಅನ್ವಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಕೋರ್ಟ್ ಚಿತ್ರದ ಬಿಡುಗಡೆಗೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ತ್ರಿಶ ನಟಿಸಿದ್ದಾರೆ. ಪುನೀತ್ ಅಭಿಮಾನಿಗಳ ಆಸೆಗೆ ಸಧ್ಯಕ್ಕೆ ತಣ್ಣೀರು ಎರೆಚಿದೆ ಕೋರ್ಟ್.

Share this Story:

Follow Webdunia kannada