Select Your Language

Notifications

webdunia
webdunia
webdunia
webdunia

ಮುಂದೊಂದು ದಿನ ಜ್ಯೋತಿಕ ನನಗೆ ಸ್ಪರ್ಧಿ ಆಗ ಬಹುದು -ಸೂರ್ಯ

ಮುಂದೊಂದು ದಿನ ಜ್ಯೋತಿಕ ನನಗೆ ಸ್ಪರ್ಧಿ ಆಗ ಬಹುದು -ಸೂರ್ಯ
ಚೆನ್ನೈ , ಗುರುವಾರ, 21 ಆಗಸ್ಟ್ 2014 (10:04 IST)
ದಕ್ಷಿಣ ಭಾರತದ ತಾರ ದಂಪತಿಗಳಲ್ಲಿ ಸೂರ್ಯ ಮತ್ತು  ಜ್ಯೋತಿಕ ಸಹ ಒಬ್ಬರು. ತನ್ನ ಅಪರೂಪದ ಅಭಿನಯದ ಮೂಲಕ ಜ್ಯೋತಿಕ ಚಿತ್ರ ರಸಿಕರ  ಮನ ಗೆದಿದ್ದರು. ಮದುವೆ  ಆಗಿ ಮಕ್ಕಳ ತಾಯಿ ಆದ ಬಳಿಕ ಬಣ್ಣ ಹಚ್ಚಲು ಆದ್ಯತೆ ನೀಡಿರಲಿಲ್ಲ. ಆದರೆ ಈಗ ಮತ್ತೊಮ್ಮೆ ಈ ಸುಂದರಿ ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾಳೆ. ಇತ್ತೀಚಿಗೆ ಅಂಜಾನ್ ಚಿತ್ರದ ತೆಲುಗು ಅವತರಣಿಕೆಯಾದ ಸಿಕಂದರ್ ಚಿತ್ರದ ಪ್ರೊಮೋಷನ್ ಸಮಯದಲ್ಲಿ ಸೂರ್ಯ ತನ್ನ ಪತ್ನಿ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜ್ಯೋತಿಕ ಚಂದ್ರಮುಖಿ ಚಿತ್ರದಲ್ಲಿ ನಟಿಸಿದ ಬಳಿಕ ಆಕೆಯ ಅಭಿಮಾನಿಗಳು ಹೆಚ್ಚಾಗಿದ್ದಾರೆ. 
 
ಆಕೆಯಂತಹ ಪ್ರತಿಭಾವಂತೆಯನ್ನು ಮತ್ತೆ ಸಿನಿಮಾಕ್ಕೆ ಕರೆತರಲು ಸಾಕಷ್ಟು ನಿರ್ಮಾಪಕರು ಮುಂದೆ ಬಂದಿದ್ದಾರೆ ಇಂತಹ ಪ್ರತಿಭೆ ಮನೆಯಲ್ಲಿ ಕುಳಿತು ಕಾಲ ಕಳಿಯುವುದು ನನಗೆ ಇಷ್ಟ ಇಲ್ಲ, ಆದ್ದರಿಂದ ಮತ್ತೆ ಚಿತ್ರಗಳಲ್ಲಿ ನಟಿಸಲು  ಸಮ್ಮತಿ ನೀಡಿದ್ದೇನೆ. ಜ್ಯೋತಿಕಾ ಕೇವಲ ನನ್ನ ಹೆಂಡತಿಯ  ಅಲ್ಲ ಆಕೆ  ಉತ್ತಮ ಮಗಳು, ಸೊಸೆ ಮತ್ತು ಅಮ್ಮನಾಗಿಯು ಸಹ ಯಶಸ್ವಿ ಆಗಿದ್ದಾಳೆ.  ಎಂಟು ವರ್ಷಗಳ ಬಳಿಕ ಅವಳು ಮತ್ತೆ  ಚಿತ್ರಗಳಲ್ಲಿ ನಟಿಸುವುದು ಅತ್ಯಂತ ಖುಷಿಯ ಸಂಗತಿ. ಅಲ್ಲದೆ ಮುಂದಿನ ದಿನಗಳಲ್ಲಿ ಈಕೆಯೇ ನನ್ನ ಪ್ರತಿಸ್ಪರ್ಧಿ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನುವ ಮಾತು ಗಳನ್ನು ಆಡುವುದರ ಮೂಲಕ ತನ್ನ ಹೆಂಡತಿಯನ್ನು ಹೊಗಳಿ ಆ ಮೂಲಕ ಆಕೆಯ ಸಂಭಾವನೆ ಹೆಚ್ಚಾಗುವ ಒಂದು ಮಾರ್ಗ ಸೃಷ್ಟಿ ಮಾಡಿದ್ದಾರೆ ಸೂರ್ಯ. 

Share this Story:

Follow Webdunia kannada