Select Your Language

Notifications

webdunia
webdunia
webdunia
webdunia

ಸುಮ್ಮನೆ ಬಿಗ್ ಬಾಸ್ ಮನೆಗೆ ನಾನ್ಯಾಕೆ ಹೋಗಲಿ? ಅದೇನು ಚಾರಿಟಿ ಷೋನಾ?

ಸುಮ್ಮನೆ ಬಿಗ್ ಬಾಸ್  ಮನೆಗೆ ನಾನ್ಯಾಕೆ ಹೋಗಲಿ? ಅದೇನು ಚಾರಿಟಿ ಷೋನಾ?
ಬೆಂಗಳೂರು , ಬುಧವಾರ, 20 ಆಗಸ್ಟ್ 2014 (10:18 IST)
ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಒಬ್ರು. ಅವರು ಏನೇ ಮಾಡಿದ್ರು ಎಲ್ಲಕ್ಕೂ ಲೆಕ್ಕಾಚಾರ ಇದ್ದೆ ಇರುತ್ತದೆ. ಅದೇರೀತಿ ಅವರು ಈಗ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ  ಬಿಗ್ ಬಾಸ್ 2 ರಿಯಾಲಿಟಿ ಶೋನಲ್ಲಿ ಬಿಟ್ಟಿಯಾಗಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ. ಅಂಬರೀಶ ಆಡಿಯೋ ಬಿಡುಗಡೆಯ ಸಮಯದಲ್ಲಿ ಮಾತನಾಡುತ್ತಾ ಹೇಳಿದ ದರ್ಶನ್ ಬಿಗ್ ಬಾಸ್ ನ ಅತಿಥಿಯಾಗಿ ಸುಮ್ಮನೆ ಹೋಗಲ್ಲ ನಾನು,  ನನ್ನ ಆಪ್ತಮಿತ್ರ ಕಿಚ್ಚ ಸುದೀಪ್ ಅದನ್ನು ನಡೆಸಿಕೊಡುತ್ತಿದ್ದರು ಸಹ ಸುಖಾಸುಮ್ಮನೆ ಹೋಗಿ ಬರುವ ಹುಂಬತನ ಮಾಡಲ್ಲ ಎಂದು ಹೇಳಿದ್ದಾರೆ. 
 
ಈ ಕಾರ್ಯಕ್ರಮ ಚಾರಿಟಿಗಾಗಿ ಆಗುತ್ತಿದ್ದರೆ ನಾನು ಯಾವುದೇ ರೀತಿಯಲ್ಲೂ ಹಣ ಪಡೆಯದೇ ಹೋಗಿ ಬರುತ್ತಿದ್ದೆ. ಆದರೆ ಇದರಲ್ಲಿ ನನ್ನ ಗೆಳೆಯ ಸುದೀಪ್ ಸಹ ಹಣ ಪಡೆದೆ ಕೆಲಸ ಮಾಡೋದು, ಸೊ ನಾನ್ಯಾಕೆ ಸುಮ್ಮನೆ ಹೋಗಲಿ ಹಾಗೂ ನಾನು ಭಾಗವಹಿಸಲು ಹಣ ಕೇಳುವುದು ಯಾವರೀತಿಯಲ್ಲೂ ತಪ್ಪು ಎಂದು ಅನ್ನಿಸಿಲ್ಲ ಎಂದು ಹೇಳಿದ್ದಾರೆ   ದರ್ಶನ್. 
 
ಐರಾವತದಲ್ಲಿ ಈಗ ಎರಿಕ ಫರ್ನಾಂಡೀಸ್  ಇಲ್ಲ.ಆಕೆ ತುಂಬಾ ಸಣ್ಣ ಇದ್ದಾಳೆ. ಮೊದಲ ಚಿತ್ರದಲ್ಲಿ ಕಂಡಿದ್ದಕ್ಕಿಂತ ಈಗ ಶೇ. 50  ರಷ್ಟು ಸಣ್ಣಕ್ಕಾಗಿದ್ದಾಳೆ. ತಾನು ಹದಿನೈದು ದಿನಗಳಲ್ಲಿ ದಪ್ಪ ಆಗ್ತೀನಿ ಎಂದಿದ್ದಾಳೆ. ಆದರೆ ಸಮಯ ಯಾವುದಕ್ಕೂ ಕಾಯಲ್ಲ ಎಂದು ಹೇಳಿ ತಮ್ಮ ವ್ಯವಹಾರ ಚತುರತೆ ತೋರಿದ್ದಾರೆ ದರ್ಶನ್.  
 

Share this Story:

Follow Webdunia kannada