Select Your Language

Notifications

webdunia
webdunia
webdunia
webdunia

ಒಳ್ಳೆಯದು ಅನ್ನಿಸಿದರೆ ಮಾತ್ರ ಪ್ರಾಡಕ್ಟ್ ಪ್ರಮೋಟ್ ಮಾಡೋದಂತೆ ಅನುಷ್ಕ ಶೆಟ್ಟಿ

ಒಳ್ಳೆಯದು ಅನ್ನಿಸಿದರೆ ಮಾತ್ರ ಪ್ರಾಡಕ್ಟ್ ಪ್ರಮೋಟ್ ಮಾಡೋದಂತೆ ಅನುಷ್ಕ ಶೆಟ್ಟಿ
ಹೈದ್ರಾಬಾದ್‌‌ , ಮಂಗಳವಾರ, 19 ಆಗಸ್ಟ್ 2014 (10:10 IST)
ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗದಲ್ಲಿ ತುಂಬಾ  ಅಗತ್ಯ ಇರುವ ಚೆಲುವೆ ಅನುಷ್ಕ ಶೆಟ್ಟಿ. ಆಕೆ ಕೈಲಿ ಸಾಕಷ್ಟು ಚಿತ್ರಗಳು ಇವೆ. ಅರುಂಧತಿ ಚಿತ್ರದಲ್ಲಿ ಜೇಜಮ್ಮ ಎನ್ನುವ ಹೆಸರು ಎಷ್ಟು ಪ್ರಖ್ಯಾತಿ ನೀಡಿದೆ ಎಂದರೆ ಈಗಲೂ ಆಕೆಯ ಅಭಿಮಾನಿಗಳು ಗುರುತಿಸುವುದು ಜೇಜಮ್ಮ ಅನುಷ್ಕ ಎಂದೇ! ಆಕೆ ತನ್ನ ಚಿತ್ರಗಳ ನಟನೆಯ ಜೊತೆಗೆ ಈಗ ಇನ್ಟೆಕ್ ಮೊಬೈಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾಳೆ. ಈ ಮೂಲಕ ಆಕೆ ಬ್ಯುಸಿನೆಸ್ ರಂಗಕ್ಕೂ ಇಳಿದಿದ್ದಾಳೆ . ಮುಖ್ಯವಾಗಿ ಅನುಷ್ಕಾ ಗೆ ಯಾವುದೇ ವಸ್ತು ಒಳ್ಳೆಯ ಗುಣಮಟ್ಟದ್ದು ಎಂದು ಅನ್ನಿಸಿದರೆ ಮಾತ್ರ ಅದನ್ನು ಪ್ರಮೋಟ್ ಮಾಡೋಕೆ ಇಷ್ಟ ವಂತೆ. ಸುಮ್ಮನೆ  ದುಡ್ಡಿಗಾಗಿ ಯಾವುದೆಂದರೆ ಅದನ್ನು ಪ್ರಮೋಟ್ ಮಾಡಲ್ಲ ಎನ್ನುವ ಮಾತನ್ನು ಹೇಳಿದ್ದಾಳೆ ಈ ಚೆಲುವೆ. ಪ್ರತಿಯೊಬ್ಬರೂ ತನ್ನ ವ್ಯಕ್ತಿತ್ವವನ್ನು ಆದರ್ಶವಾಗಿ ತೆಗೆದುಕೊಳ್ಳ ಬೇಕು ಎನ್ನುವ ಆಶಯ ಹೊಂದಿದ್ದಾಳೆ  ಬಾಹುಬಲಿ ಚಿತ್ರದ ರಾಜ ಕುಮಾರಿ ಆಗಿರುವ ಈ  ಸ್ವೀಟಿ . ಎಲ್ಲ ರೀತಿಯಲ್ಲೂ ತನಗೆ ಆ ಪ್ರಾಡಕ್ಟ್ ಆಪ್ತ ಆದಾಗ ಮಾತ್ರ ತಾನು ಅದರ ಪ್ರಮೋಟ್ ಮಾಡುತ್ತೇನೆ ಎಂದು ಆಕೆ ಹೇಳಿದ್ದಾಳೆ. 
 
ಅಭಿಮಾನಿಗಳ ಆದರ ಮತ್ತು ಪ್ರೀತಿಯಿಂದ ತಾನು ಟಾಪ್ ಹೀರೋಯಿನ್ ಆಗಲು ಸಾಧ್ಯವಾಯ್ತು ಎಂದು ಹೇಳಿದ್ದಾಳೆ ಈ ಚೆಲುವೆ. ದುಡ್ಡಿಗಾಗಿ ಯಾವುದೋ ಒಂದು ಪ್ರಾಡಕ್ಟ್  ಪ್ರಮೋಟ್ ಮಾಡದೆ  ಒಳ್ಳೆಯದನ್ನೆ ಪ್ರಮೋಟ್ ಮಾಡುವ  ಅನುಷ್ಕಾ ತನ್ನ ಇನ್ನು ಅನೇಕ ವಿಶೇಷ ಗುಣಗಳನ್ನು ತೋರ್ಪಡಿಸಿ ಮತ್ತಷ್ಟು ಉತ್ತಮ ಎಂದು ಅನ್ನಿಸಿಕೊಳ್ಳಲಿ ತನ್ನ ಅಭಿಮಾನಿಗಳ ಬಳಿ, ಆದರ್ಶವಾಗಿ ನಿಲ್ಲಲಿ ಅವರ ಮುಂದೆ .. ಮಾದರಿ ಆಗಲಿ ಎನ್ನುವ ಹಾರೈಕೆ ನಮ್ಮದು.
 

Share this Story:

Follow Webdunia kannada