Select Your Language

Notifications

webdunia
webdunia
webdunia
webdunia

ಅಜಿತ್ ಟಾಲಿವುಡ್ ನ ರೀಲ್ ಮಾತ್ರವಲ್ಲ ರಿಯಲ್ ಹೀರೋ ..

ಅಜಿತ್  ಟಾಲಿವುಡ್ ನ  ರೀಲ್ ಮಾತ್ರವಲ್ಲ ರಿಯಲ್ ಹೀರೋ ..
ಹೈದ್ರಾಬಾದ್‌‌ , ಮಂಗಳವಾರ, 19 ಆಗಸ್ಟ್ 2014 (10:04 IST)
ಟಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಪಡೆದ ಕಲಾವಿದ ಅಜಿತ್. ಅವರು ಕೇವಲ ತಮ್ಮ ಚಿತ್ರಗಳಿಂದ ಮಾತ್ರವಲ್ಲ, ತಮ್ಮ ಸ್ವಭಾವದಿಂದಲೂ ಸಹಿತ ಜನಮನ ಗೆದ್ದಿರುವ ಪ್ರತಿಭಾವಂತ ಮತ್ತು ಹೃದಯವಂತ ಕಲಾವಿದ. 2000  ದಲ್ಲಿ ಅವರು ನಟಿ ಶಾಲಿನಿಯನ್ನು ವಿವಾಹವಾದರು. ಆ ಬಳಿಕ ಅವರ ದಾಂಪತ್ಯ ಸುಂದರವಾಗಿ ಸಾಗಿದೆ. ಅನೌಷ್ಕ ಅವರಿಬ್ಬರ ಬದುಕನ್ನು ಬೆಳಗಿದ್ದಾಳೆ. ಪ್ರೇಮವಿವಾಹ ಮಾಡಿಕೊಂಡ ಈ ಜೋಡಿ ಇನ್ನು ಪ್ರೇಮಿಗಳಾಗಿಯೇ ಉಳಿದಿದ್ದಾರೆ. ಸಾಮಾನ್ಯವಾಗಿ ಚಿತ್ರಗಳಲ್ಲಿ ಹೀರೋಗಳಾಗಿ ಇದ್ದವರು, ಆದರ್ಶ ಪತಿ ಗಳಾಗಿ ನಟಿಸಿದವರು ನಿಜ ಬದುಕಲ್ಲಿ ಹಾಗೆ ಇರಲ್ಲ ಅದೇ ದುರಂತ. ಆದರೆ ಅಜಿತ್ ವಿಷಯದಲ್ಲಿ ಎಂದಿಗೂ ಹಾಗಿಲ್ಲ. ಅವರು ಕುಟುಂಬ ಮತ್ತು ವೃತ್ತಿ ಎರಡು ಸಂಗತಿಯಲ್ಲೂ ಕ್ಲೀನ್ ಹ್ಯಾಂಡ್.
 
 ಅದಕ್ಕೆ ಇಂಡಸ್ಟ್ರಿ ಮಾತ್ರವಲ್ಲ ಜನರ ಮನದಲ್ಲೂ ಸಹಿತ ಅವರ ಬಗ್ಗೆ ವಿಶೇಷವಾದ ಆದರ ಆಪ್ಯಾಯತೆ. ಈಗ ಮತ್ತೊಮ್ಮೆ ಅಜಿತ್ ನಿಜ ಬದುಕಲ್ಲಿ ಹೀರೋ ಆಗಿ ಎಲ್ಲರ ಮುಂದೆ ಬಂದಿದ್ದಾರೆ. ತಾವು ದುಡಿದು ಸುಖವಾಗಿ ಇದ್ದರೇ ಸಾಕು, ತನ್ನ ದುಡಿತ ಕೇವಲ ತನಗೆ ಮಾತ್ರ ಎನ್ನುವ ಮನೋಭಾವ ಹೆಚ್ಚಾಗಿರುವ ಈ ಸಮಯದಲ್ಲಿ ಅಜಿತ್ ಭಿನ್ನವಾಗಿ ನಿಂತಿದ್ದಾರೆ. ಅವರು ತಮ್ಮ ಸೇವೆ ಮಾಡುವ ವಾಚ್ಮನ್, ಮನೆ ಕೆಲಸದವರು, ಕಾರ್ ಡ್ರೈವರ್ ಹೀಗೆ ತನ್ನ  ಮತ್ತು ತನ್ನ ಕುಟುಂಬದ ಸೇವೆ ಮಾಡುವವರನ್ನು ನೆನಪಲ್ಲಿಟ್ಟುಕೊಂಡು ಅವರ ಬದುಕನ್ನು ಹಸನು ಮಾಡಿದ್ದಾರೆ. ಆ ಕೆಲಸಗಾರರಿಗೆ ಮಹಾಬಲಿಪುರಂ ಬಳಿ ಜಾಗ ಕೊಂಡು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮುಖಾಂತರ ತಾವು ತುಂಬಾ ಭಿನ್ನ ಎನ್ನುವುದನ್ನು ತೋರಿಸಿದ್ದಾರೆ ಅಜಿತ್. ತಾವು ಮಾಡಿದ ಕೆಲ್ಸಕ್ಕೆ ಪ್ರಚಾರ ಪಡೆಯದೇ ತಮ್ಮಪಾಡಿಗೆ ತಾವು ಮಾಡಿದ್ದಾರೆ. ಅಜಿತ್ ಅವರ ಈ ಸ್ವಭಾವ ಬೇರೆಲ್ಲಾ ಹೀರೊಗಳಿಗೂ ಮಾದರಿ.

Share this Story:

Follow Webdunia kannada