Webdunia - Bharat's app for daily news and videos

Install App

ಕೆಂಪೇ ಗೌಡ -2 ಯಾವ ಚಿತ್ರದ ರೀಮೇಕ್ ? ಅಜಯ್ vs ಸೂರ್ಯ ?

Webdunia
ಮಂಗಳವಾರ, 19 ಆಗಸ್ಟ್ 2014 (09:58 IST)
ಕಿಚ್ಚ ಸುದೀಪ್ ಅವರ ನಟನೆಯ ಕೆಂಪೇಗೌಡ ಚಿತ್ರ ಬಾಕ್ಸ್ ಆಫೀಸನ್ನು ನಡುಗಿಸಿತ್ತು ಅಂದು. ಆ ಚಿತ್ರವನ್ನು ತಮಿಳಿನ ಸೂರ್ಯ ನಟನೆಯ ಸಿಂಗಂ ಚಿತ್ರದಿಂದ ರೀಮೇಕ್ ಮಾಡಲಾಗಿತ್ತು. ಅದೇ ರೀತಿ ಹಿಂದಿಯಲ್ಲಿ ಅಜಯ್ ದೇವಗನ್ ಅವರ ನಟನೆಯ ಸಿಂಘಂ ಸಹ ಹೆಚ್ಚು ಜನಪ್ರಿಯತೆ ಪಡೆದಿತ್ತು. ಈಗ ಸೂರ್ಯ ಸಿಂಗಂ ಚಿತ್ರವೂ ಎರಡನೇ ಆವೃತ್ತಿ ಬಿಡುಗಡೆ ಆಗಿ ಸಿಕ್ಕಾಪಟ್ಟೆ ಹಣ ಗಳಿಸಿದೆ. ಅದೇ ರೀತಿ ಅಜಯ್ ಅವರ ಹಿಂದಿಯ ಸಿಂಘಂ ರಿಟರ್ನ್ಸ್  ಸಹ ಹೆಚ್ಚು ಜನಪ್ರಿಯ ಆಗಿದೆ. ಈಗ ಆ ಸಾಲಿಗೆ ನಿಲ್ಲಲು ಹೊರಟಿದೆ ಸುದೀಪ್ ಅವರ ಕೆಂಪೇಗೌಡ. 
 
ಈ ಚಿತ್ರದ ಭಾಗ-2 ರ ಸಿದ್ಧತೆಯತ್ತ ಗಮನ ನೀಡಿದ್ದಾರೆ ಕಿಚ್ಚ. ಮೊದಲ ಭಾಗಗಳಲ್ಲಿ ರಾಗಿಣಿ ದ್ವಿವೇದಿ ಮತ್ತು ವಿಲನ್ ಆಗಿ ರವಿಶಂಕರ್ ನಟಿಸಿದ್ದರು.  ಈ ಇಬ್ಬರಿಗೂ ಸಹ ಈ ಚಿತ್ರ ಹೊಸ ಸ್ಥಾನ ಕಲ್ಪಿಸಿಕೊಟ್ಟಿತ್ತು  ಸ್ಯಾಂಡಲ್ ವುಡ್ ನಲ್ಲಿ.  ಈಗ ಕೆಂಪೇಗೌಡ ಚಿತ್ರದ ಭಾಗ-2 ಕಥೆಯನ್ನು ಹಿಂದಿ ಚಿತ್ರದಿಂದ ರೀಮೇಕ್ ಮಾಡ್ತಾರಾ ಅಥವಾ  ಸೂರ್ಯ ಅವರ ತಮಿಳು ಚಿತ್ರದಿಂದ ರೀಮೇಕ್ ಮಾಡ್ತಾರ ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿ. ಏಕೆಂದರೆ ಆ ಎರಡು ಚಿತ್ರಗಳ ಭಾಗ -2  ರ ಕಥೆಗಳು ಸಂಪೂರ್ಣವಾಗಿ ಭಿನ್ನವಾಗಿದೆ. ಹಿಂದಿ ಚಿತ್ರ ಮಾಸ್  ನ್ನು ಆಕರ್ಷಿಸಿದ್ದರೆ ತಮಿಳು ಸಿನಿಮಾ ಕ್ಲಾಸ್  ಗೆ ಇಷ್ಟಾ ಆಗಿತ್ತು.. ಕನ್ನಡ ಚಿತ್ರ ಮಾಸ್ ಮತ್ತು ಕ್ಲಾಸ್ ಇಬ್ಬರಿಗೂ ಇಷ್ಟ ಆಗುವಂತೆ ತಯಾರಾಗುತ್ತಾ.. ? ಸಧ್ಯಕ್ಕೆ ಎಲ್ಲರ ಮನದಲ್ಲಿ ಉಳಿದಿರೋದು ಇದೆ ?? 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments