Webdunia - Bharat's app for daily news and videos

Install App

ನಿಕ್ಕಿ ಗಲ್ರಾಣಿ ವಿನಯ ರಾಜ್ ಕುಮಾರ್ ಸಿನಿಮಾಗೆ ನಿಕ್ಕಿ

Webdunia
ಮಂಗಳವಾರ, 12 ಆಗಸ್ಟ್ 2014 (10:03 IST)
ನಿಕ್ಕಿ ಗಲ್ರಾಣಿ ಯಾರು ಅಂತ ಗೊತ್ತಲ್ವ ? ಈ ಪ್ರಶ್ನೆ ಕೇಳಿದರೆ ಎಲ್ಲೋ ಕೇಳಿದಂತೆ ಇದೆ ಈ ಹೆಸರು ಅಂತೀರಾ ಖಂಡಿತಾ! ಈಕೆ ಕನ್ನಡ ಹಾಟೆಸ್ಟ್ ನಟಿ ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ಗಲ್ರಾಣಿ  ಖಾಸಾ ತಂಗಿ. ಆಕೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರೂ ಸಹಿತ ಬೇರೆ ಭಾಷೆಗಳಲ್ಲೂ ಸಹಿತ ತನ್ನ ಪ್ರತಿಭೆ ತೋರುತ್ತಿದ್ದಾಳೆ. ಅದರಲ್ಲೂ ಮಲೆಯಾಳಂ ಭಾಷೆಯಲ್ಲಿ ಹೆಚ್ಚಿನ ಅವಕಾಶಗಳನ್ನು   ಪಡೆದಿದ್ದಾಳೆ ಈ ಚೆಲುವೆ. ಈ ಸುಂದರ ಹುಡುಗಿ ಲೀಡ್ ರೋಲ್ ಗಳಲ್ಲಿ ತನ್ನ ಪ್ರತಿಭೆ ತೋರುತ್ತಿದ್ದಾಳೆ. ಅಕ್ಕ ಸಂಜನಾ  ಗಂಡ ಹೆಂಡತಿ  ಅಂತ ಗಲಾಟೆ ಮಾಡಿಕೊಂಡು ಬಂದರೂ ಸಹಿತ ಅಷ್ಟೇನೂ ಬೆಳಕಿಗೆ ಬರಲಿಲ್ಲ. ಆದರೆ ತಂಗಿ  ಮಾತ್ರ ಯಾವುದೇ ಸದ್ದುಗದ್ದಲ ಇಲ್ಲದೆ ತನ್ನ ಪಾಡಿಗೆ ತಾನು ಸಿನಿಮಾದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾಳೆ. 
 
ನೀವಿನ್ ಪೌಲ್ ಜೊತೆ 1983  ಚಿತ್ರದಲ್ಲ್ಲಿ ನಟಿಸಿದ ಬಳಿಕ ಈಗ ಈಕೆ ಓಂ ಶಾಂತಿ ಆಶಾನ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಇವಿಷ್ಟು ಮಲೆಯಾಳಂ ಭಾಷೆಯ ಕಥೆಯಾದರೆ ಪ್ರಸ್ತುತ ನಿಕ್ಕಿ ಈಗ ವಿನಯ್ ರಾಜ್  ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ಸಿದ್ಧಾರ್ಥ್ ಚಿತ್ರಕ್ಕೆ ಆಯ್ಕೆ ಆಗಿದ್ದಾಳೆ. ವಿನಯ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್  ಅವರ ಪುತ್ರ, ಡಾ. ರಾಜ್ ಕುಮಾರ್ ಕುಟುಂಬದ ಮೂರನೇ ಪೀಳಿಗೆ. ಸಿದ್ಧಾರ್ಥ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಏಕೆಂದರೆ ಇದು ವಿನಯ್ ಮೊಟ್ಟಮೊದಲ ಸಿನಿಮಾ ಆಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments