Webdunia - Bharat's app for daily news and videos

Install App

ವಜ್ರಕಾಯದಲ್ಲಿ ಹತ್ತೊಂಬತ್ತರ ಟೀನಿ ಹುಡುಗೀರ ಜೊತೆ ಶಿವರಾಜ್ ಕುಮಾರ್ ನಟನೆ

Webdunia
ಮಂಗಳವಾರ, 12 ಆಗಸ್ಟ್ 2014 (09:57 IST)
ಕನ್ನಡದ ಹ್ಯಾಟ್ರಿಕ್ ಹೀರೋ , ಸೆಂಚುರಿ ಸ್ಟಾರ್ ಎನ್ನುವ ಬಿರುದು ಹೊಂದಿರುವ ಕಲಾವಿದ ಶಿವರಾಜ್ ಕುಮಾರ್. ಅವರ ಚಿತ್ರ ಆರ್ಯನ್ ಇತ್ತೀಚಿಗೆ ಬಿಡುಗಡೆ ಆಯ್ತು. ಅದು ಗಳಿಕೆಯ ವಿಷಯದಲ್ಲಿ ಆಕರ್ಷಕವಾಗಿದೆ. ಅದೇರೀತಿ ಅವರು ಕಳೆದ ವರ್ಷ ನಟಿಸಿ ಗೆದ್ದ ಚಿತ್ರ ಭಜರಂಗಿ. ಈ ಚಿತ್ರ ಹರ್ಷ ಅವರ ನಿರ್ದೇಶನದಲ್ಲಿ ತಯಾರಾಗಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದಾರೆ. ಅವರ ಹೊಸ ಚಿತ್ರದ ಹೆಸರು ವಜ್ರಕಾಯ . ಈಗಷ್ಟೇ 52 ತುಂಬಿ 53 ವರ್ಷಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಅವರು ತಮ್ಮ ಹೊಸ ಚಿತ್ರದಲ್ಲಿ 19  ವರ್ಷದ ಹೀರೋಯಿನ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಈ ಚಿತ್ರದಲ್ಲಿ  ನಭ  ನಟೇಶ್ ಸೇರಿದಂತೆ ಎಲ್ಲರು ಸಹ 19  ವರ್ಷದ ಹರೆಯದ ಯುವತಿಯರು. 
 
ಎರಡನೇ ಮದುವೆ ಚಿತ್ರದಲ್ಲಿ ನಟಿಸಿದ್ದ ಕಾರುಣ್ಯ ರಾಮ್, ಮುಂಬೈ ಮೂಲದ ತೆಲುಗು ನಟಿ  ಪ್ರೀತಿರಾನ  ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲು ಆಯ್ಕೆ ಆಗಿದ್ದಾರೆ. ಪ್ರಸ್ತುತ ಶಿವಣ್ಣ ಬೆಳ್ಳಿ ಚಿತ್ರದ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಅದರಲ್ಲಿ ಅವರು ಕೃತಿ ಕರಬಂಧ ಜೊತೆ ನಟಿಸುತ್ತಿದ್ದಾರೆ. ವಜ್ರಕಾಯ ಚಿತ್ರದ ನಂತರ ಶಿವಣ್ಣ ಪಿ ವಾಸು , ಜೋಗಿ ಪ್ರೇಂ ಮತ್ತು ಸು ನಿ ಅವರ ನಿರ್ದೇಶನ ಚಿತ್ರಗಳಲ್ಲಿ ನಾಟುವ ಸಾಧ್ಯತೆ ಹೇರಳವಾಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments