ಕನ್ನಡದ ಹ್ಯಾಟ್ರಿಕ್ ಹೀರೋ , ಸೆಂಚುರಿ ಸ್ಟಾರ್ ಎನ್ನುವ ಬಿರುದು ಹೊಂದಿರುವ ಕಲಾವಿದ ಶಿವರಾಜ್ ಕುಮಾರ್. ಅವರ ಚಿತ್ರ ಆರ್ಯನ್ ಇತ್ತೀಚಿಗೆ ಬಿಡುಗಡೆ ಆಯ್ತು. ಅದು ಗಳಿಕೆಯ ವಿಷಯದಲ್ಲಿ ಆಕರ್ಷಕವಾಗಿದೆ. ಅದೇರೀತಿ ಅವರು ಕಳೆದ ವರ್ಷ ನಟಿಸಿ ಗೆದ್ದ ಚಿತ್ರ ಭಜರಂಗಿ. ಈ ಚಿತ್ರ ಹರ್ಷ ಅವರ ನಿರ್ದೇಶನದಲ್ಲಿ ತಯಾರಾಗಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದಾರೆ. ಅವರ ಹೊಸ ಚಿತ್ರದ ಹೆಸರು ವಜ್ರಕಾಯ . ಈಗಷ್ಟೇ 52 ತುಂಬಿ 53 ವರ್ಷಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಅವರು ತಮ್ಮ ಹೊಸ ಚಿತ್ರದಲ್ಲಿ 19 ವರ್ಷದ ಹೀರೋಯಿನ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಈ ಚಿತ್ರದಲ್ಲಿ ನಭ ನಟೇಶ್ ಸೇರಿದಂತೆ ಎಲ್ಲರು ಸಹ 19 ವರ್ಷದ ಹರೆಯದ ಯುವತಿಯರು.
ಎರಡನೇ ಮದುವೆ ಚಿತ್ರದಲ್ಲಿ ನಟಿಸಿದ್ದ ಕಾರುಣ್ಯ ರಾಮ್, ಮುಂಬೈ ಮೂಲದ ತೆಲುಗು ನಟಿ ಪ್ರೀತಿರಾನ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲು ಆಯ್ಕೆ ಆಗಿದ್ದಾರೆ. ಪ್ರಸ್ತುತ ಶಿವಣ್ಣ ಬೆಳ್ಳಿ ಚಿತ್ರದ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಅದರಲ್ಲಿ ಅವರು ಕೃತಿ ಕರಬಂಧ ಜೊತೆ ನಟಿಸುತ್ತಿದ್ದಾರೆ. ವಜ್ರಕಾಯ ಚಿತ್ರದ ನಂತರ ಶಿವಣ್ಣ ಪಿ ವಾಸು , ಜೋಗಿ ಪ್ರೇಂ ಮತ್ತು ಸು ನಿ ಅವರ ನಿರ್ದೇಶನ ಚಿತ್ರಗಳಲ್ಲಿ ನಾಟುವ ಸಾಧ್ಯತೆ ಹೇರಳವಾಗಿದೆ.