Select Your Language

Notifications

webdunia
webdunia
webdunia
webdunia

ನಯನತಾರ ಹೊಸ ಪ್ರೇಮಪ್ರಕರಣ .. ಸದ್ದು ಮಾಡುತ್ತಿರುವ ಪ್ರಣಯ ಹಕ್ಕಿಗಳು

ನಯನತಾರ ಹೊಸ ಪ್ರೇಮಪ್ರಕರಣ .. ಸದ್ದು ಮಾಡುತ್ತಿರುವ ಪ್ರಣಯ ಹಕ್ಕಿಗಳು
ಬೆಂಗಳೂರು , ಮಂಗಳವಾರ, 12 ಆಗಸ್ಟ್ 2014 (09:48 IST)
ಸಿಕ್ಕಾಪಟ್ಟೆ ಇಷ್ಟ ಪಟ್ಟೆ ಅಂತ ಆ ಹುಡುಗಿ ಹಿಂದೆ ಹೋಗಿ ಹಾಡಿದ್ದರು  ಉಪೇಂದ್ರ. ಆ ಹುಡುಗಿ ನಯನತಾರ ಅಂತ  ಬಿಡಿಸಿ ಹೇಳ ಬೇಕಿಲ್ಲ. ದಕ್ಷಿಣ ಭಾರತ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳಾಗಿರುವ ನಯನತಾರ ಈಗ ತನ್ನ ಅನೇಕ ಸುದ್ದಿಯ ಮೂಲಕ ಜನರ ಗಮನ ಸೆಳೆಯುತ್ತಲೇ ಇದ್ದಾಳೆ. ಆರಂಭದಲ್ಲಿ ಮಾತ್ರವಲ್ಲ ಈಗಲೂ ಸಹ ಆಕೆ ಹೆಚ್ಚು ಗೊತ್ತಾಗೋದು ಪ್ರಣಯ ಕಥೆಗಳಿಂದ. 
 
ನಯನತಾರ ಮೊದಲು ತನ್ನನ್ನು ಹೆಚ್ಚು ಗುರುತಿಸಿಕೊಂಡಿದ್ದು ಶಿಂಬು ಜೊತೆಗಿನ ಪ್ರಣಯದಿಂದ ಅದಾದ ಬಳಿಕ ಈ ಜೋಡಿ ಒಡೆದು ಹೋಯ್ತು . ಆನಂತರ ಆಕೆ ತನ್ನ ಗಮನ ಕೇಂದ್ರೀಕರಿಸಿದ್ದು ಪ್ರಭುದೇವ ಅವರ  ಕಡೆಗೆ. ಮದುವೆ ಆಗೇ ಹೋಯ್ತು ಅಥವಾ ಇನ್ನೇನು ಆಗುತ್ತೆ ಎಂದು ಚಿತ್ರಮಂದಿ ನಂಬಿದ್ದ  ಸಮಯದಲ್ಲಿ ಈ ತಾರಾಜೋಡಿ ಬೇರ್ಪಟ್ಟರು. ಅದಾದ ಸ್ವಲ್ಪ ಕಾಲದ ಬಳಿಕ ಶಿಂಬು ಅವರ ಜೊತೆ ಮತ್ತೆ ಪ್ರಣಯದಾಟದಲ್ಲಿ ತೊಡಗಿದ್ದಾಳೆ ನಯನ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಅದು ಶುದ್ಧ ಸುಳ್ಳು ಎಂದುಹೇಳಿ ಎಲ್ಲರ ಬಾಯ್ ಮುಚ್ಚಿಸಿದ್ದಳು.
 
...........ಇನ್ನು ಇದೆ. ಮುಂದೆ ಓದಿ 
 
 ಹೀಗೆ ಇರುವಾಗ ಆಕೆ ಆರ್ಯ ಜೊತೆ ರಾಜರಾಣಿ ಅನ್ನುವ ಸೂಪರ್ಹಿಟ್ ಚಿತ್ರದಲ್ಲಿ ನಟಿಸಿದಳು. ಆ ಹೀರೊ ಜೊತೆ ಅದೇನೋ ನಡೀತಾ ಇದೆ ಎನ್ನುವ ಸುದ್ದಿಯು ಹೆಚ್ಚು ಪಾಪ್ಯುಲರ್ ಆಯ್ತು. ಅವರಿಬ್ಬರೂ ಅಲ್ಲಿದ್ದರಂತೆ ಇಲ್ಲಿದ್ದರಂತೆ ಎನ್ನುವ ಗಾಸಿಪ್ಸ್ ಗಳಿಗೆ ಹೆಚ್ಚು ಬೆಲೆ ದೊರಕಿತು. ಇದರ ಪರಿಣಾಮ ಎಲ್ಲರ ಗಮನ ಮತ್ತೆ ಆಕೆಯತ್ತ.
 
 ಆದರೆ ಅವ್ಯಾವುದು ಇಲ್ಲ ಅಂತ ಹೇಳಿದ್ದಾಳೆ ಈ ಚೆಲುವೆ. ಇವೆಲ್ಲ ಕಂಡಾಗ ಮನದಲ್ಲಿ ಮೂಡೋ ಪ್ರಶ್ನೆ ತಾನು ಸದಾ ಚಲಾವಣೆಯಲ್ಲಿ ಇರಲು ನಯನತಾರ ಗಾಸಿಪ್ಸ್ ಗೆ ಹೆಚ್ಚು ಗಮನ ನೀಡ್ತಾ ಇದ್ದಾಳ.. ? ತನ್ನ ಬಗ್ಗೆ ತಾನೇ ಸುದ್ದಿಗಳನ್ನು ಹರಡಿಸ್ತಾ ಇದ್ದಾಳಾ ಅಂತ! ಹೆಸರಿಗಾಗಿ ಹಿಂಗೆಲ್ಲ ಮಾಡ್ತಾರ ಅಂತ ಇದ್ದರಂತೆ ಆಕೆಯ ಸಹೋದ್ಯೋಗಿ ನಟಿಯರು !

Share this Story:

Follow Webdunia kannada