Select Your Language

Notifications

webdunia
webdunia
webdunia
webdunia

ಕಂಗನ ಈಗ ಬಾಯ್ ಫ್ರೆಂಡ್ ಜೊತೆ ಬ್ಯುಸಿ.. ಯಾರವನು ಹುಡುಗ ?

ಕಂಗನ ಈಗ ಬಾಯ್ ಫ್ರೆಂಡ್ ಜೊತೆ ಬ್ಯುಸಿ.. ಯಾರವನು ಹುಡುಗ ?
ಮುಂಬೈ , ಶನಿವಾರ, 2 ಆಗಸ್ಟ್ 2014 (11:07 IST)
ಕಂಗನಾ ರನೌಟ್ ಎನ್ನುವ ಹಿಮಾಚಲ ಸುಂದರಿ ಬಾಲಿವುಡ್ ನಲ್ಲಿ ತನ್ನದೇ ಆದ ಸ್ಥಾನ ಪಡೆದ ಪ್ರತಿಭೆ. ಆಕೆ ನಟಿಸಿದ ಚಿತ್ರಗಳು ಬಾಕ್ಸಾಫೀಸನ್ನೆ ಅಲುಗಾಡಿಸಿದೆ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಹಿಳ ಪ್ರಧಾನ ಚಿತ್ರಗಲ್ಲಿ ನಟಿಸಿದ್ದ ಈ ಚೆಲುವೆ ಗೆಲುವು ಆರಾಮವಾಗಿ ಕೈ ಜೋಡಿಸಿತು. 
 
ಆದ ಕಾರಣ ಇತ್ತೀಚಿಗೆ ಅನೇಕ ನಿರ್ದೇಶಕ ಮತ್ತು ನಿರ್ಮಾಪಕರು ಆಕೆಗೆ ಆದಷ್ಟು ವುಮನ್ ಓರಿಯೆಂಟೆಡ್  ಚಿತ್ರಗಳಲ್ಲಿ ನಟಿಸುವುದಕ್ಕೆ ಪೂರಕವಾದ ಕಥೆಗಳನ್ನು ತಂದು ಮುಂದಿಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ಭಿನ್ನ ಶೈಲಿಯಿಂದ ಎಲ್ಲರ ಗಮನ ಸೆಳೆದಿರುವ ಕಂಗನ ಬಾಯ್ ಫ್ರೆಂಡ್ ವಿಷಯದಲ್ಲೂ ಸಹ ಹೆಚ್ಚು ಗಮನ ಸೆಳೆದಾಕೆ. 
 
.........ಇನ್ನು ಇದೆ. ಮುಂದೆ ಓದಿ. 
 
ಸಾಮಾನ್ಯವಾಗಿ ಆಕೆ ಯಾರ ಜೊತೆಗೂ ಹೆಚ್ಚು ಕಾಲ ಅಂದರೆ  ಎರಡು ಮೂರು ತಿಂಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡಲ್ಲ, ಅಂತಹುದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಓರ್ವ ಬಾಲಿವುಡ್ ಯುವ ಹೀರೋ ಜೊತೆ ಡೇಟಿಂಗ್ ನಲ್ಲಿ ಬ್ಯುಸಿ ಆಗಿದ್ದಾಳೆ ಎನ್ನುವುದೇ ಸಧ್ಯದ ಸುದ್ದಿ ಆಗಿದೆ. ಆಕೆ ಬಾಲಿವುಡ್ ಚಾರ್ಮಿಂಗ್ ಹೀರೋ ಇಮ್ರಾನ್ ಖಾನ್ ಜೊತೆ ಡೇಟಿಂಗ್ ನಡೆಸ್ತಾ ಇದ್ದಾಳೆ ಎನ್ನುವ ಗುಟ್ಟಾಗಿದ್ದ ಸುದ್ದಿ ಈಗ ರಟ್ಟಾಗಿದೆ. 
 
ಆಕೆಯ ಮುಂದಿನ ಚಿತ್ರದಲ್ಲಿ ಈ ಹೀರೋ ನಟಿಸುತ್ತಿರುವುದು ಮತ್ತು ಅವರಿಬ್ಬರೂ ಹೆಚ್ಚು ಕ್ಲೋಸ್ ಆಗಿರುವುದು ಸಹ ಈಗ ನಮಗೆ ತಿಳಿದ ಸುದ್ದಿಗೆ ಹೆಚ್ಚು ಪುಷ್ಟಿ ಸಿಕ್ಕಿದೆ. ಇದು ಸತ್ಯವೇ ಆದರೂ ಸಹ ಸ್ವಲ್ಪ ದಿನಗಳಾದ ಬಳಿಕ ಇಬ್ಬರು ಇಲ್ಲ ಹಂಗೇನು ಇಲ್ಲ ನಾವು ಜಸ್ಟ್ ಫ್ರೆಂಡ್ಸ್ ಅಂತ ಹೇಳೋದು ಸತ್ಯ. ಅದಾದ ಬಳಿಕ ಏನಾಗುತ್ತೋ ಗೊತ್ತಿಲ್ಲ, ಯಾಕೆಂದ್ರೆ ಬಾಲಿವುಡ್ ಲವ್ ಗಳು ಸ್ಟಾರ್ಟ್ ಆಗುತ್ತೆ ಆದರೆ ಎಂಡ್ ಮಾತ್ರ ಸಿಕ್ಕಾಪಟ್ಟೆ ಆಗತಾನೆ ಇರುತ್ತೆ! 

Share this Story:

Follow Webdunia kannada