Webdunia - Bharat's app for daily news and videos

Install App

ಪವನ್ ಕಲ್ಯಾಣ್ ಚಿತ್ರದಲ್ಲಿ ಪ್ರಕಾಶ್ ರಾಜ್ ಟಾಲಿವುಡ್ ನಲ್ಲಿ ಪ್ರಕಾಶ್ ಯುಗ ?

Webdunia
ಶುಕ್ರವಾರ, 1 ಆಗಸ್ಟ್ 2014 (10:12 IST)
ಪ್ರಕಾಶ್ ರಾಜ್  ಟಾಲಿವುಡ್ ಸೂಪರ್ ಸ್ಟಾರ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ ಮತ್ತು ವೆಂಕಟೇಶ್ ಅವರ ನಟನೆಯ ಮಲ್ಟಿ ಸ್ಟಾರ್ ಚಿತ್ರ ಗೋಪಾಲ ಗೋಪಾಲ  ಚಿತ್ರವು ಈಗ ತನ್ನ  ಕೆಲಸ ಪೂರೈಸಿದ್ದು, ಮೊದಲ ಬಾರಿ ಈ ಚಿತ್ರದ ಮುಖಾಂತರ ವೆಂಕಿ ಮತ್ತು ಪವನ್ ಒಟ್ಟಾಗಿ ನಟಿಸುತ್ತಿದ್ದಾರೆ. 
 
ಅಲ್ಲದೆ ಇವರಿಬ್ಬರ ಸಂಭಾಷಣೆಗಳು ಸಹಿತ ಹೆಚ್ಚು ಪವರ್ಫುಲ್ ಆಗಿದೆ ಎನ್ನುವ ಮಾತು ಟಾಲಿವುಡ್ ನಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಈ ಚಿತ್ರದ ಬಳಿಕ ಪವನ್ ಕಲ್ಯಾಣ್ ನಟಿಸುತ್ತಿರುವ ಚಿತ್ರ ಗಬ್ಬರ್ ಸಿಂಗ್ 2 . ಈ ಚಿತ್ರಕ್ಕೆ ಸಂಬಂಧಪಟ್ಟ ಶೂಟಿಂಗ್ ಆಗಸ್ಟ್ ಎರಡನೇ ವಾರದಿಂದ ಆರಂಭ ಆಗುತ್ತದೆ. 
 
ಗೋಪಾಲ ಗೋಪಾಲ ಚಿತ್ರವನ್ನು 22  ದಿನಗಳಲ್ಲಿ ಪೂರ್ತಿ ಮಾಡಿದಂತೆ  ಗಬ್ಬರ್ ಸಿಂಗ್ 2  ನ್ನು ಸಹಿತ ಎರಡು ತಿಂಗಳುಗಳ ಒಳಗೆ ಪೂರ್ಣ ಗೊಳಿಸುವ ಉದ್ದೇಶ ಹೊಂದಿದ್ದಾರೆ ಪವನ್. 
.........ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರದಲ್ಲಿ ಪ್ರಕಾಶ್ ರಾಜ್  ಸಹ ಭಾಗವಾಗಿದ್ದು, ಅತ್ಯಂತ ಮುಖ್ಯ ಪಾತ್ರದಲ್ಲಿ ತಮ್ಮ ಅಭಿನಯ ತೋರಲಿದ್ದಾರೆ ಪ್ರಕಾಶ್. ಮೊನ್ನೆ ಮೊನ್ನೆ ವರೆಗೂ ಪ್ರಕಾಶ್ ರಾಜ್ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದ ಆ ಚಿತ್ರತಂಡ ಈಗ ಪವನ್ ಕಲ್ಯಾಣ್ ಅವರ ಮಾತಿನಂತೆ ಪ್ರಕಾಶ್ ಅವರಿಗೆ ಅವಕಾಶ ನೀಡುತ್ತಿದ್ದಾರೆ. 
 
ಅಂದರೆ ಈ ಮುಖಾಂತರ ಪ್ರಕಾಶ್ ರಾಜ್ ಅವರು ಮತ್ತೆ ಟಾಲಿವುಡ್ ನಲ್ಲಿ ತಮ್ಮ ಪ್ರಭಾವ ತೋರುವ ಸಂದರ್ಭಗಳು ಹೆಚ್ಚಾಯಿತು. ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಕಾಶ್ ರಾಜ್ ಇತ್ತೀಚೆಗೆ ವಿವಾದಗಳ ಮುಖಾಂತರ ಟಾಲಿವುಡ್ ನಲ್ಲಿ ಸುದ್ದಿ ಮಾಡಿದ್ದರು. ಅದೀಗ ಶಾಂತವಾಗಿದ್ದು ಅವರ ಪ್ರತಿಭೆಗೆ ಮತ್ತೆ ಗೌರವ ತೋರುತ್ತಿದೆ ಟಾಲಿವುಡ್ . 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments