Webdunia - Bharat's app for daily news and videos

Install App

ಸುದೀಪ್ ಅತ್ತೆಮನೆ ಕಥೆ ಮುಹೂರ್ತ ನಡೆಯಿತು.. ಮುಂದಿನ ಕಥೆ ಹೈದರಾಬಾದ್ ನಲ್ಲಿ

Webdunia
ಶುಕ್ರವಾರ, 1 ಆಗಸ್ಟ್ 2014 (10:09 IST)
ಕಿಚ್ಚ ಸುದೀಪ್ ಅವರು ಬಹುನಿರೀಕ್ಷೆಯ ಚಿತ್ರ  ಅತ್ತಾರಿಂಟಿಕಿ ದಾರೇದಿ ತೆಲುಗು ಚಿತ್ರದ ಕನ್ನಡ ಅವತರಣಿಕೆ. ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಿತ್ತು. ಹೀರೋಯಿನ್ ಗಳ ಆಯ್ಕೆ, ಆ ಹೀರೋಯಿನ್ ಗಳ  ಕಥೆ, ಹೀಗೆ ಹತ್ತು ಹಲವಾರು. ಅಂತಿಮವಾಗಿ ಈಗ ಎಲ್ಲವು ಸಿದ್ಧವಾಗಿದ್ದು ಮುಹೂರ್ತವು ಸಹಿತ ನಡೆದಿದೆ. 
 
ಬುಧವಾರ  ಬೆಂಗಳೂರು ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಇರುವ ಗಣಪತಿ ದೇಗುಲದಲ್ಲಿ  ಕಿಚ್ಚ ಅವರ ಈ ಚಿತ್ರವು ಮುಹೂರ್ತ ನೆರವೇರಿಸಿ ಕೊಂಡಿತು. ಅಲ್ಲಿಗೆ ನಿರ್ದೇಶಕ ನಂದಕಿಶೋರ್, ಸುದೀಪ್, ಕೋಚ್ ಅನಿಲ್, ಯೋಗೀಶ್ ದ್ವಾರ್ಕೀಶ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಹೈದರಾಬಾದ್ ನಲ್ಲಿ ನೆರವೇರಲಿದೆ. ಪ್ರಕಾಶ್ ರಾಜ್ , ದೇವರಾಜ್ ಸೇರಿದಂತೆ ಅನೇಕ ಪ್ರಸಿದ್ಧರ ತಂಡವೇ ಈ ಚಿತ್ರದಲ್ಲಿದೆ.
 
.........ಇನ್ನು ಇದೆ. ಮುಂದೆ ಓದಿ. 
 
 

ನಿಮಿಷಾಂಬ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಮಗಳು ದೀಪಿಕ ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಂದ್ರ ಶೇಖರ್ ಮಗ ಉದಯ ಚಂದ್ರ ಶೇಖರ್ ಕ್ಯಾಮರ ಸ್ವಿಚ್ ಆನ್ ಮಾಡಿದರು.ಹರಿಪ್ರಿಯ ಮತ್ತು ರಚಿತ ರಾಮ್ ಹೀರೋಯಿನ್ ಗಳಾಗಿದ್ದಾರೆ. 
 
ಮಿರ್ಚಿಯನ್ನು ಮಾಣಿಕ್ಯ ಮಾಡಿ ಆ ಚಿತ್ರವನ್ನು  ಸೂಪರ್ ಡೂಪರ್ ಹಿಟ್ ಮಾಡಿದ ಕಿಚ್ಚ ಈಗ ತಮ್ಮ ಹೊಸ ಚಿತ್ರದ ಮುಖಾಂತರ ಹಂಗಾಮ ನಡೆಸಲು ಸಿದ್ಧ ಆಗಿದ್ದಾರೆ. ಅತ್ತೆ ಮನೆದಾರಿಯತ್ತ ಹೊರಟಿದ್ದಾರೆ ಕಿಚ್ಚ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments