Select Your Language

Notifications

webdunia
webdunia
webdunia
webdunia

ದೊಡ್ಡಮನೆ ಹುಡುಗ ಚಿತ್ರದಿಂದ ರಮ್ಯ ಔಟ್ !

ದೊಡ್ಡಮನೆ ಹುಡುಗ ಚಿತ್ರದಿಂದ ರಮ್ಯ ಔಟ್ !
ಬೆಂಗಳೂರು , ಗುರುವಾರ, 31 ಜುಲೈ 2014 (09:47 IST)
ಅದ್ಯಾಕೋ ಗೊತ್ತಿಲ್ಲ, ಇತ್ತೀಚೆಗೆ ಒಪ್ಪಿಕೊಂಡ ಚಿತ್ರಗಳಲ್ಲಿ ಹೀರೋಯಿನ್ ಗಳು ನಟಿಸುವ ಗೋಜಿಗೆ ಹೋಗುತ್ತಿಲ್ಲ.  ಈವರೆಗೂ ಹೊಸ ನಟಿಯರ ಬಗ್ಗೆ ಹೇಳಿದ್ದೆವು. ಆದರೆ ಈಗ ಹಿರಿಯ ನಟಿಯರ ಕಥೆಯು ಹೀಗೆ ಆಗ್ತಾ ಇದೆ. ಈ ಪಟ್ಟಿಯಲ್ಲಿ ರಮ್ಯ ಹೆಸರು ಮೊದಲಿದೆ ಎಂದೇ ಹೇಳ ಬಹುದಾಗಿದೆ. ಕನ್ನಡ ಚಿತ್ರರಂಗದ ಕ್ವೀನ್ ಅನ್ನುವ ಹೆಸರನ್ನು ಪಡೆದ ನಟಿ ರಮ್ಯ.
 
 ಆಕೆಯ ಪಾತ್ರಗಳು, ನಟನೆ, ರೂಪ ಎಲ್ಲವು ಕನ್ನಡಿಗರಿಗೆ ಇಷ್ಟ. ಆದರೆ ಆಕೆ ಅವೆಲ್ಲದರ ಜೊತೆಗೆ ಸಿನಿಮಾಗಳಿಂದ ಹೊರ ಬರುವ ವಿಷಯದಲ್ಲೂ ಸಹ ಸದಾ ಮುಂದೆ ಇರ್ತಾರೆ. ಈಗ ಬಂದಿರೋ ಸುದ್ದಿ ಪ್ರಕಾರ ಆಕೆ ಪುನೀತ್ ರಾಜ್ ಕುಮಾರ್ ಅಭಿನಯದ ಸೂರಿ ನಿರ್ದೇಶನದ ದೊಡ್ಡ ಮನೆ ಹುಡುಗ ಚಿತ್ರದಿಂದ ಹೊರ ಬಂದಿದ್ದಾರೆ. ಈ ಸಿನಿಮಾದಲ್ಲಿ ನಟ ಅಂಬರೀಶ್ ಅವರು ಪುನೀತ್ ತಂದೆ ಪಾತ್ರಧಾರಿ ಆಗಿದ್ದಾರೆ. 
 
......ಇನ್ನು ಇದೆ. ಮುಂದೆ ಓದಿ 
 
 

ಈ ಚಿತ್ರದಲ್ಲಿ ಆಕೆ ನಟಿಸುವ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಅಂತಿಮವಾಗಿ ರಮ್ಯ ನಟಿಸ್ತೀನಿ ಎಂದು ಹೇಳಿ ಎಲ್ಲರ ಬಾಯಿಗೆ ಬೀಗ ಹಾಕಿದ್ದಳು. ಆದರೆ ಈಗ ಆಕೆ ನಟಿಸಲ್ಲ ಎನ್ನುವ ಮಾತು ಹೇಳಿ ಚಿತ್ರದಿಂದ ದೂರ ಸಾಗಿದ್ದಾಳೆ. 
 
ಅದಕ್ಕೆ ಕಾರಣ ಆಕೆ ಕೇಳಿದ ಅತಿ ಹೆಚ್ಚು ಮೊತ್ತದ ಸಂಭಾವನೆಯಂತೆ! ಆದರು ಅಂಬಿ ಈ ಚಿತ್ರದ ಮುಖ್ಯಧಾರಿ ಆಗಿರೋದು ರಮ್ಯ ಗೆ ಸಹಿಸಿಕೊಳ್ಳಲಿಕ್ಕೆ ಆಗಲಿಲ್ಲವೇ ? ಯಾರಿಗೆ ಗೊತ್ತು ಆಕೆಯ ಮನದಲ್ಲಿ ಏನಿದೆ ಅಂತ! ಒಟ್ಟಾರೆ ದೊಡ್ಡ ಮನೆ ಹುಡುಗನ ಜೊತೆ ಡ್ಯುಯೆಟ್ ಹಾಡುವ ಭಾಗ್ಯ ಆಕೆಗಿಲ್ಲ ಅಷ್ಟೇ!

Share this Story:

Follow Webdunia kannada