Webdunia - Bharat's app for daily news and videos

Install App

ಚಿತ್ರವನ್ನು ವೀಕ್ಷಿಸಿ ಪ್ರಶಂಸಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Webdunia
ಸೋಮವಾರ, 28 ಜುಲೈ 2014 (09:47 IST)
ಸಾಮಾನ್ಯವಾಗಿ ಸ್ಟಾರ್ಸ ನಟರು ತಮ್ಮ ಚಿತ್ರಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಬ್ಯುಸಿ ಆಗಿರುತ್ತಾರೆ. ಅಂತಹುದರಲ್ಲಿ ಬೇರೆ ಕಲಾವಿದರ ಚಿತ್ರಗಳನ್ನು ವೀಕ್ಷಿಸಲು ಸಮಯ ಹೊಂದಿಸಿಕೊಳ್ಳುವ ವಿಷಯ ಇದೆಯಲ್ಲ, ಅದು ನಿಜಕ್ಕೂ ಕಷ್ಟಕರ. 
 
ಆದರೆ ಇತ್ತೀಚಿಗೆ ತಮ್ಮ ಚಿತ್ರಗಳ ಜೊತೆ ಬೇರೆ ಕಲಾವಿದರ ಸಿನಿಮಾಗಳನ್ನು ಸಹಿತ ವೀಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಸ್ಟಾರ್ ನಟರು . ತೆಂಡೂಲ್ಕರ್ ಅಲ್ಲ .. ಈ ಚಿತ್ರವು ಆಟಿಸಂ ತೊಂದರೆ ಎದುರಿಸುತ್ತಿರುವ ಬಾಲಕನ ಕಥೆಯನ್ನು ಹೊಂದಿದೆ. ಆ ಪಾತ್ರದಲ್ಲಿ  ಮಾಸ್ಟರ್ ಸ್ನೇಹಿತ್ ಆಟಿಸಂ ಹೊಂದಿರುವ ಹುಡುಗನ ಪಾತ್ರಧಾರಿಯಾಗಿದ್ದಾನೆ.
 
 ಈ ಚಿತ್ರದಲ್ಲಿ ಆತನ ಅಕ್ಕನ ಪಾತ್ರದಲ್ಲಿ ಸುಹಾಸಿನಿ, ಪ್ರಿನ್ಸಿಪಾಲ್ ಆಗಿ ಸುಧಾರಾಣಿ, ಕ್ರಿಕೆಟ್ ಕೋಚ್ ಪಾತ್ರದಲ್ಲಿ ಖ್ಯಾತ ಕ್ರೀಡಾಪಟು ವೆಂಕಟೇಶ್ ಪ್ರಸಾದ್ ಅವರು ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಬಿಡುಗಡೆ ಆಯಿತು. ಇದನ್ನು ಸ್ಯಾಂಡಲ್ ವುಡ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚಿಗೆ ತಮ್ಮ ಸಹೋದರ ನಿರ್ದೇಶಕ ದಿನಕರ್ ಮತ್ತು ಕುಟುಂಬದ ಸದಸ್ಯರ ಜೊತೆ ವೀಕ್ಷಿಸಿದರು. 
 
ರೇಣುಕಾಂಬ ಡಿಜಿಟಲ್  ಥಿಯೇಟರ್ ನಲ್ಲಿ ದರ್ಶನ್ , ಅವರ ಪತ್ನಿ ವಿಜಯ ಲಕ್ಷ್ಮಿ, ಮಗ ವಿನೀತ್, ದಿನಕರ್ ತೂಗುದೀಪ, ಅವರ ಪತ್ನಿ, ಎರಡು ಮಕ್ಕಳು ವೀಕ್ಷಿಸಿದರು. 
 
.........ಇನ್ನು ಇದೆ. ಮುಂದೆ ಓದಿ. 
 
 

ಕನ್ನಡದ ನಟಿಯರಾದ ಅಮೂಲ್ಯ, ರೂಪಿಕ,ಅಲ್ಲದೆ ಟಿ ಎಸ್ ನಾಗಾಭರಣ, ಎಂ ಎಲ್ ಎ ನಾಗೇಂದ್ರ ಬಾಬು, ನಾಗಕಿರಣ್ ಈ ಷೋ ನ ವಿಶೇಷ ಆಹ್ವಾನಿತರಾಗಿದ್ದರು. ಈ ಚಿತ್ರವನ್ನು ಮೋಹನ್ ನಿರ್ದೇಶನ ಮಾಡಿದ್ದಾರೆ. 
 
ಸೌಂದರ್ಯ ಜಗದೀಶ್ ಅವರು ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ದರ್ಶನ್  ಮತ್ತು ಬಂದಿದ್ದ ಅತಿಥಿಗಳು   ಸ್ನೇಹಿತ್ ನಟನೆ ಮತ್ತು ಮೋಹನ್ ನಿರ್ದೇಶನವನ್ನು ಈ ಸಮಯದಲ್ಲಿ ಮೆಚ್ಚಿದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments