Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಆಗಸ್ಟ್ ನಲ್ಲಿ ಮುಹೂರ್ತ ?

ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಆಗಸ್ಟ್ ನಲ್ಲಿ ಮುಹೂರ್ತ ?
ಬೆಂಗಳೂರು , ಶನಿವಾರ, 26 ಜುಲೈ 2014 (09:29 IST)
ಗೋವಿಂದಾಯ ನಮಃ ದಂತದ ಹಾಸ್ಯಪ್ರಧಾನ ಚಿತ್ರ ನೀಡಿ ಕನ್ನಡ ಪ್ರೇಕ್ಷಕರನ್ನು ಆಕರ್ಷಿಸಿದ್ದ ನಿರ್ಮಾಪಕ ಸುರೇಶ್  ಈಗ ಕೋಮಲ್ ಅವರನ್ನು ಬಿಟ್ಟು ದುನಿಯಾ ವಿಜಯ್ ಕಡೆಗೆ ನಡೆದಿದ್ದಾರೆ. ಅವರ ಹೊಚ್ಚ ಹೊಸ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಮುಖಾಂತರ ವಿಜಯ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಸಂಗತಿ ಬಹುತೇಕ ನಿಕ್ಕಿ ಆಗಿದೆ. 
 
.........ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರಕ್ಕೆ ಆರೆಕ್ಸ್ ಸೂರಿ ಎನ್ನುವ ಹೆಸರನ್ನು ಇಡಲಾಗಿದೆ. ವಿಜಯ್ ಆ  ಹೆಸರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಮುಂದಿನ ತಿಂಗಳು ಮೊದಲವಾರ ಸೆಟ್ಟೇರುತ್ತಿದೆ.ಕನ್ನಡ ಚಿತ್ರರಂಗದಲ್ಲಿ ತಮಗೊಂದು ಉತ್ತಮ ಸ್ಥಾನ ಪಡೆದಿರುವ ವಿಜಯ್ ಈಗ ಸ್ವಲ್ಪ ಕಾಲದಿಂದ ಸೋಲಿನ ಚಿತ್ರಗಳನ್ನು ನೀಡುತ್ತಿದ್ದಾರೆ. ಅವರ ಈ ಚಿತ್ರವಾದರೂ ಒಳ್ಳೆಯ ಬ್ರೇಕ್ ನೀಡುತ್ತದೆಯೋ ಏನೋ ವೆಯಿಟ್  ಅಂಡ್ ವಾಚ್ !  

Share this Story:

Follow Webdunia kannada