Select Your Language

Notifications

webdunia
webdunia
webdunia
webdunia

ದಂಡುಪಾಳ್ಯ 2 ರಲ್ಲಿ ಪ್ರಕಾಶ್ ರಾಜ್ ನಟನೆ?

ದಂಡುಪಾಳ್ಯ 2 ರಲ್ಲಿ ಪ್ರಕಾಶ್ ರಾಜ್ ನಟನೆ?
ಬೆಂಗಳೂರು , ಗುರುವಾರ, 24 ಜುಲೈ 2014 (09:45 IST)
ನಿರ್ದೇಶಕ ಶ್ರೀನಿವಾಸ ರಾಜು ತಮ್ಮ ಬಹು ನಿರೀಕ್ಷಿತ ಚಿತ್ರ ದಂಡು ಪಾಳ್ಯ 2  ರಲ್ಲಿ ಭಾರತೀಯ  ಚಿತ್ರರಂಗದ ಅಪರೂಪದ ನಟ ಪ್ರಕಾಶ್ ರಾಜ್ ಅವರನ್ನು ತಮ್ಮ ಚಿತ್ರದ ಭಾಗವನ್ನಾಗಿ ಮಾಡಿಕೊಳ್ಳಲಿದ್ದಾರೆ. ದಂಡುಪಾಳ್ಯ ಮೊದಲ ಅವತರಣಿಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಶ್ರೀನಿವಾಸ ರಾಜು ಆ ಮುಖಾಂತರ ತಾವು ಯಶಸ್ವಿ ಆಗಿದ್ದರು. ಅದೇ ರೀತಿ ಅವರು ಈ ಚಿತ್ರದ ಎರಡನೇ ಭಾಗವನ್ನು ಸಿದ್ಧ ಮಾಡಿ ಪ್ರೇಕ್ಷಕರ ಕೈಲಿಡಲು ಸಿದ್ಧತೆ ನಡೆಸಿದ್ದಾರೆ.  ಪ್ರಕಾಶ್ ರಾಜ್ ಅವರು ಒಗ್ಗರಣೆ ಹಾಕುವಾಗ ಶ್ರೀನಿವಾಸ ರಾಜು ಅವರು ಈ ಹೊಸ ಚಿತ್ರದ ಬಗ್ಗೆ ಚರ್ಚಿಸಿದ್ದರಂತೆ.
 
........ಇನ್ನು ಇದೆ. ಮುಂದೆ ಓದಿ
 
 

ಈಗ ಸದ್ಯಕ್ಕೆ ಪ್ರಕಾಶ್ ರಾಜ್ ಅವರು ಉಪೇಂದ್ರ ನಟನೆಯ  ಬಸವಣ್ಣ ಚಿತ್ರದಲ್ಲಿ ನಟಿಸುತ್ತಾ ಇದ್ದಾರೆ. 
ಈ ಚಿತ್ರದಲ್ಲಿ ಬಾಲಿವುಡ್ ನ ಇನ್ನು ಇಬ್ಬರು ಕಲಾವಿದರು ನಟಿಸುತ್ತಾರೆ ಎನ್ನುವ ಸಂಗತಿಯನ್ನು ತಿಳಿಸಿದ್ದಾರೆ ಶ್ರೀನಿವಾಸ ರಾಜು. ಒಟ್ಟಾರೆ ಹೊಸ ರೂಪದಿಂದ ಬರಲು ಸಿದ್ಧತೆ ನಡೆಸಿದೆ ದಂಡು ಪಾಳ್ಯ 2 . ಮೊದಲ ಅವತರಣಿಕೆಯು ತಮಿಳು ಮತ್ತು ತೆಲುಗು ಭಾಷೆಯಲ್ಲೂ ಸಹ ಡಬ್ ಆಗಿತ್ತು ಈ ಚಿತ್ರವು ನವೆಂಬರ್ ಮಧ್ಯ ವಾರದಲ್ಲಿ ತನ್ನ ಕೆಲಸ ಆರಂಭಿಸುವ ಸಾಧ್ಯತೆ ಇದೆ. 

Share this Story:

Follow Webdunia kannada