Select Your Language

Notifications

webdunia
webdunia
webdunia
webdunia

ನನಗೆ ಕಥೆ ಬರೆದು ಕೊಡಿ ಯಂಗ್ ಹೀರೋಗಳಿಗಿಂತ ಒಳ್ಳೆ ಸಂಭಾವನೆ ಕೊಡ್ತೀನಿ-ಕಮಲ್ ಹಾಸನ್

ನನಗೆ ಕಥೆ ಬರೆದು ಕೊಡಿ ಯಂಗ್ ಹೀರೋಗಳಿಗಿಂತ ಒಳ್ಳೆ ಸಂಭಾವನೆ ಕೊಡ್ತೀನಿ-ಕಮಲ್ ಹಾಸನ್
ಚೆನ್ಣೈ , ಬುಧವಾರ, 23 ಜುಲೈ 2014 (09:33 IST)
ಭಾರತೀಯ ಚಿತ್ರರಂಗ ಕಂಡೆ ಅನೇಕ ಪ್ರತಿಭಾವಂತ ನಟರಲ್ಲಿ ಕಮಲ್ ಹಾಸನ್ ಸಹ ಒಬ್ಬರು. ಈಗಾಗಲೇ 60 ವರ್ಷಗಳ ಬಾಗಿಲನ್ನು  ತಟ್ಟುತ್ತಿರುವ ಈತ ಈಗ ಸಹ ತನ್ನವಯಸ್ಸಿಗಿಂತ ಕಿರಿಯ ನಟಿಯರ ಜೊತೆ ಪಾತ್ರದ ಮುಖಾಂತರ ಲವ್ ಮಾಡಲು, ಲಿಪ್ ಲಾಕ್ ಮಾಡಲು ಚಿಂತೆ ಮಾಡರು. ಅಲ್ಲದೆ ಭಿನ್ನವಾದ ಪಾತ್ರಗಳ ಮುಖಾಂತರ ತಮ್ಮನ್ನು ಗುರುತಿಸಿ ಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತಹ ಕಲಾವಿದೆ.  ಸದಾ ಶಾಂತಚಿತ್ತದಿಂದ ಇರುವ ಈ ಕಲಾವಿದ ಈಗ ಕೋಪ ಮಾಡಿಕೊಂಡಿದ್ದಾರೆ  ಬರಹಗಾರರ  ಮೇಲೆ.
 
ಇತ್ತೀಚಿಗೆ ಮುಂಬೈನಲ್ಲಿ ನಡೆದ ರೈಟರ್ಸ್ ವರ್ಕ್ ಶಾಪ್ ನಲ್ಲಿ ಬಾಲಿವುಡ್, ಕಾಲಿವುಡ್ ಮತ್ತು ಇನ್ನು ಕೆಲವು ವುಡ್ ಪ್ರತಿಭಾವಂತರು ಸೇರಿದ್ದರು. ಅಲ್ಲಿರುವ ಯುವ ಬರಹಗಾರರನ್ನು ಕಂಡು ತನ್ನ ಮನದ ಭಾವನೆ ವ್ಯಕ್ತ ಪಡಿಸಿದ್ದಾರೆ ಕಮಲ್.
 
..........ಇನ್ನು ಇದೆ. ಮುಂದೆ ಓದಿ. 
 
 

ದಕ್ಷಿಣ ಭಾರತದಲ್ಲೇ ಆಗಿರಲಿ ಅಥವಾ ಉತ್ತರ ಭಾರತದಲ್ಲೇ ಆಗಿರಲಿ ಈಗಿನ ಕಥೆಗಾರರು ಹೆಚ್ಚಾಗಿ ಯಂಗ್ ಹೀರೋಗಳನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಬರೆಯುತ್ತಾರೆ. ಅವರು 50ರ ಹರೆಯದ ಕಲಾವಿದರಿಗೆ ಹೊಂದುವಂತಹ ಕಥೆಯನ್ನು ರಚಿಸುವುದಕ್ಕೆ ಆದ್ಯತೆ ನೀಡರು ಎನ್ನುವ ಮಾತನ್ನು ಹೇಳುತ್ತಾ ಇದು ತನ್ನಲ್ಲಿ ಆಶಚಾರ್ಯ ಉಂಟು ಮಾಡಿದೆ ಎಂದೂ ಸಹ ಹೇಳಿದ್ದಾರೆ ಕಮಲ್. 
 
 ತನಗೆ ಹೊಂದುವಂತಹ ಕಥೆಯನ್ನು ತಂದರೆ ತಾನು ಯಂಗ್ ಹೀರೋಗಳಿಗಿಂತ ಹೆಚ್ಚಿನ ಸಂಭಾವನೆ  ನೀಡುವುದಾಗಿ ಓಪನ್ ಚಾಲೆಂಜ್ ಮಾಡಿದರಂತೆ ಕಮಲ್.ಈಗ ಹೀರೋಯಿನ್ ಗಳು ಮಾತ್ರವಲ್ಲ ಕಥೆಗಾರರಿಗೂ ಹಿರಿಯ ಕಲಾವಿದರು ಬೇಕಿಲ್ಲ ಅಂತಾಯ್ತು. ಇತ್ತೀಚಿಗೆ ಚಿರಂಜೀವಿ ತಮ್ಮ 150ನೇ ಚಿತ್ರಕ್ಕೆ ಒಳ್ಳೆಯ ಕಥೆ ನೀಡಿದರೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು! 

Share this Story:

Follow Webdunia kannada