Select Your Language

Notifications

webdunia
webdunia
webdunia
webdunia

ನಯನತಾರ ಬೆಡ್ ರೂಂ ನಲ್ಲಿ ಬಂಧಿ ಆಗೋ ಆಸೆ ಎಂದ ಯಂಗ್ ಹೀರೋ.. !

ನಯನತಾರ ಬೆಡ್ ರೂಂ ನಲ್ಲಿ ಬಂಧಿ ಆಗೋ ಆಸೆ ಎಂದ ಯಂಗ್ ಹೀರೋ.. !
ಬೆಂಗಳೂರು , ಬುಧವಾರ, 23 ಜುಲೈ 2014 (09:29 IST)
ವಿಜಯ್ ಸೇತುಪತಿ ಅನ್ನುವ ಯಂಗ್ ಹೀರೋ ಬಗ್ಗೆ ಸಾಮಾನ್ಯವಾಗಿ ನಮಗೆ ಹೆಚ್ಚು ಗೊತ್ತಿಲ್ಲ. ಆದರೆ ಈತ ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಅಲ್ಲದೆ ಈ ಉದಯೋನ್ಮುಖ ಪ್ರತಿಭೆ ವಿಷಯದ ಬಗ್ಗೆ  ಬರೆಯುವು ಮುನ್ನ ನಟಿ ನಯನತಾರ ಕಡೆ ಹೋಗೋಣ ಬನ್ನಿ! 
 
ನಯನತಾರ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿ . ಈಕೆ ತನಗೆ ಒಳ್ಳೆಯ ಪಾತ್ರಗಳು ಅಂದ್ರೆ ಅಭಿನಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕ ಸಮಯದಲ್ಲೇ ಗ್ಲಾಮರ್ ಪಾತ್ರಗಳಲ್ಲೂ ನಟಿಸಿ ತಾನು ಎಲ್ಲ ರೀತಿಯ ಪಾತ್ರಗಳಲ್ಲೂ ಅಭಿನಯಿಸ ಬಲ್ಲೆ ಎನ್ನುವುದನ್ನು ಜಗತ್ತಿಗೆ ತಿಳಿಸಿದ ಚೆಲುವೆ.
 
..........ಇನ್ನು ಇದೆ. ಮುಂದೆ ಓದಿ. 
 
 

ಗ್ಲಾಮರ್, ರೂಪ ಮತ್ತು ಪ್ರತಿಭೆ ಇರುವುದರಿಂದ ಜನಕ್ಕೆ ಮಾತ್ರವಲ್ಲ ಸಿನಿಮಾ ಮಂದಿಗೂ ಸಹ ಆಕೆ ಅಂದ್ರೆ ಲೈಕೋ ಲೈಕು. ಆಕೆಯ ಸಂಭಾವನೆ ಈಗ ಕೋಟಿ ರೂಪಾಯಿಗಳು ದಾಟಿವೆ ಎನ್ನುವ ಸುದ್ದಿ ಇದೆ. ಒಟ್ಟಾರೆ ಎಲ್ಲರ ಮೆಚ್ಚಿನ ಈ ನಟಿಯನ್ನು ಕಂಡ್ರೆ ಸಾಕಷ್ಟು ಹೀರೊಗಳಿಗೂ ಇಷ್ಟ. 
 
ಅದೇ ಬಗೆಯಲ್ಲಿ ಈ ಯಂಗ್ ಹೀರೋ ಸಹ ಲೈಕ್ ಮಾಡಿದ್ದಾರೆ ಈಕೆಯನ್ನು. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಅಕಸ್ಮಾತ್ ನಿಮ್ಮನ್ನು ಪೊಲೀಸರು ಬಂಧಿಸಿದರೆ ಎಲ್ಲಿ ಬಂಧಿ ಆಗಲು ಇಷ್ಟ ಪಡ್ತಿರಿ ಎನ್ನುವ ಪ್ರಶ್ನೆ ಕೇಳಿದಾಗ, ನಯನತಾರ ಬೆಡ್ ರೂಂ ನಲ್ಲಿ, ಅದಕ್ಕಿಂತ ಒಳ್ಳೆ ಜಾಗ ಇಲ್ಲ, ಆಕೆ ರೂಪ ಹಾಗಿದೆ  ಎನ್ನುವ ಉತ್ತರವನ್ನು ಮಾಧ್ಯಮದ ಮುಂದೆ ಹೇಳಿದರಂತೆ. ಆಸೆಗಳು ಹೀಗೂ ಇರುತ್ತೆ !! 

Share this Story:

Follow Webdunia kannada