Select Your Language

Notifications

webdunia
webdunia
webdunia
webdunia

ಗಂಡುಬೀರಿ ಪ್ರಿಯಾ ಹಾಸನ್.. ಇದು ಆಕೆ ಹೊಸ ಅವತಾರ

ಗಂಡುಬೀರಿ ಪ್ರಿಯಾ ಹಾಸನ್.. ಇದು ಆಕೆ ಹೊಸ ಅವತಾರ
ಬೆಂಗಳೂರು , ಮಂಗಳವಾರ, 22 ಜುಲೈ 2014 (09:51 IST)
ಹೀರೋಯಿಸಂ ನಟನೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತನಗೊಂದು ಸ್ಥಾನ ಪಡೆದ ನಟಿ ಪ್ರಿಯಾಹಾಸನ್ .ಈಗ  ಪ್ರಿಯಾ ಹಾಸನ್ ಗಂಡುಬೀರಿ ಎಂಬ ಹೊಸ ಚಿತ್ರ ಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನಿಮ್ಮ ಎಣಿಕೆಯಂತೆ, ಈ ಚಿತ್ರಕ್ಕೂ ಸಹ ಆಕೆಯೇ ಆಕ್ಷನ್ ಕಟ್ ಹೇಳುವುದರೊಂದಿ ಹೀರೋಯಿನ್ ಆಗಿ ನಟಿಸುತ್ತಾ ಇದ್ದಾರೆ. ಅಲ್ಲದೆ  ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.  ಕಥೆ, ಚಿತ್ರಕಥೆ ಸಿದ್ಧವಾಗಿದ್ದು , ಪ್ರಿಯಾಹಾಸನ್, ಕಲಾವಿದರ ಹುಡುಕಾಟದಲ್ಲಿ ನಿರತರಾಗಿದ್ದಾರೆ. 
 
ಇದು ಆಕ್ಷನ್ ಚಿತ್ರ. ಇದರಲ್ಲಿ ಫೈಟ್, ಡೈಲಾಗ್ ಗಳ ಜೊತೆಗೆ ಎಮೋಶನ್, ಸೆಂಟಿಮೆಂಟು ಎಲ್ಲವು ಇರುತ್ತದೆಯಂತೆ ಭರಪೂರ. ಗಂಡು ಬೀರಿ ಸಹ ಸಮಾಜಕ್ಕೆ ಸಂದೇಶ ಹೇಳುವ  ಒಳ್ಳೆ ಮನದ ಹೆಣ್ಣು ಮಗಳ ಕಥೆಯಂತೆ. 
 
..........ಇನ್ನು ಇದೆ. ಮುಂದೆ ಓದಿ. 
 
 

ಸಮಾಜದಲ್ಲಿ ಹೆಣ್ಣು ಯಾವ ಸ್ಥಿತಿಯಲ್ಲಿದ್ದಾಳೆ, ಆಕೆಗೆ ಆಗುತ್ತಿರುವ ದೌರ್ಜನ್ಯ ಹೇಗಿದೆ, ಅವುಗಳನ್ನೆಲ್ಲಾ ಆಕೆ ಹೇಗೆಲ್ಲಾ ಎದುರಿಸುತ್ತಿದ್ದಾಳೆ, ಮುಗ್ಧ ಹೆಣ್ಣಿಗೆ ನ್ಯಾಯ ಸಿಗುತ್ತಿದೆಯೇ ಇತ್ಯಾದಿ ಹೆಣ್ಣು ಮಕ್ಕಳ ಸಮಸ್ಯೆ ಮೂಲಕವೇ ಚಿತ್ರದ ಕಥೆ ಇದ್ದು, ಹೆಣ್ಣುಮಕ್ಕಳಿಗೆ ಅರ್ಥ ಮಾಡಿಸುವ ಪ್ರಯತ್ನ ಇದರ ಮೂಲಕ ಮಾಡುತ್ತಿದ್ದಾರೆ ಪ್ರಿಯ. 
 
ಅವರ ನಟನೆಯ ಸ್ಮಗ್ಲರ್ ರಿಲೀಸ್ಗೆ ರೆಡಿಯಾಗಿದೆ. ಅದು ಜನರ ಮುಂದೆ ಬಂಡ ಬಳಿಕ ಗಂಡುಬೀರಿ ಸೆಟ್ಟೇರಲಿದೆಯಂತೆ! ಎನ್ನುತ್ತಾರೆ. ಸ್ಮಗ್ಲರ್ ಚಿತ್ರದಲ್ಲಿ ಪ್ರಿಯಾ ಹಾಡೊಂದನ್ನು ಹಾಡಿದ್ದಾರೆ. ಗಂಡುಬೀರಿ ಚಿತ್ರದಲ್ಲಿ ಹಾಡು ಮತ್ತು ಕೊರಿಯಾಗ್ರಫಿ ಮಾಡುವ ಉದ್ದೇಶ ಹೊಂದಿದ್ದಾರೆ ಪ್ರಿಯ.  ಒಟ್ಟಾರೆ ಸಾಹಸ ಮಾಡುವ ವಿಷಯದಲ್ಲಿ ಪ್ರಿಯ ಎಂದಿಗೂ ಹಿಂದೆ ಉಳಿಯಲ್ಲ ಎನ್ನುವುದು ಈಗ ಗಂಡುಬೀರಿ ಚಿತ್ರದಿಂದಲೂ ಸಾಬೀತಾಗ ಬೇಕಿದೆ! 

Share this Story:

Follow Webdunia kannada