ಅತ್ತೆಮನೆಯಲ್ಲಿ ಕಿಚ್ಚ ಸುದೀಪ್ ಗೆ ಕಾದು ಕುಳಿತಿದ್ದಾಳೆ ರಚಿತ ರಾಮ್

ಮಂಗಳವಾರ, 22 ಜುಲೈ 2014 (09:47 IST)
ಅತ್ತಾರಿಂಟಿಕಿ ದಾರೇದಿ ಎನ್ನುವ ಪ್ರಶ್ನೆ ಕೇಳಿದ್ದೆ ಬಂತು ಸುದೀಪ್ ಗೆ ಆ ದಾರಿಯನ್ನು ತೋರಿಸುವ ಒಬ್ಬ ಹೆಣ್ಣುಮಗಳು ಅವರ ಕಣ್ಣಿಗೆ ಕಾಣಲಿಲ್ಲ. ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅತ್ತಾರಿಂಟಿಕಿ ದಾರೇದಿ  ಸೂಪರ್ ಡೂಪರ್ ಕನ್ನಡ ಅವತರಣಿಕೆಯಲ್ಲಿ  ಕಿಚ್ಚ ಸುದೀಪ್  ನಟಿಸುವ ಸುದ್ದಿ ಈಗಾಗಲೇ ಹಳೆಯದಾಗಿದ್ದರು ಸಹ ಅವರ ಜೊತೆ ಡ್ಯುಯೆಟ್ ಹಾಡಲು ಯಾರು ಬರ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. 
 
........ಇನ್ನು ಇದೆ ಮುಂದೆ ಓದಿ . 

ಅದಕ್ಕೆ ಹನ್ಸಿಕ, ರಚಿತರಾಂ, ಸಾನ್ವಿಯಂತಹ ಸುಂದರಿಯರ ಪಟ್ಟಿ ಇತ್ತು. ಆದರೆ ಹನ್ಸಿಕ ಇಲ್ಲ ನಾನು ಕನ್ನಡದಲ್ಲಿ ನಟಿಸ್ತಾ ಇಲ್ಲ ಎಂದು ಹೇಳಿದಳು, ಇನ್ನು ಸಾನ್ವಿ ಕಥೆ ಯಾರಿಗೂ ಗೊತ್ತೇ ಆಗಲಿಲ್ಲ, ಅಂತಿಮವಾಗಿ ಉಳಿದವಳು ಕನ್ನಡತಿ ರಚಿತಾ ರಾಮ್. ಈ ಬುಲ್ಬುಲ್ ಸುಂದರಿ ಕಿಚ್ಚ ಅವರ ಹೆಸರಿಡದ ಚಿತ್ರದಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಅಂತೂ ಈಗ ಕಿಚ್ಚ ಹುಡುಗಿಯನ್ನು ನೋಡಲು ಅತ್ತೆಮನೆಗೆ ಧೈರ್ಯವಾಗಿ ಹೋಗಬಹುದಾಗಿದೆ.. ಎಲ್ಲಿ ಅತ್ತೆ  ಮನೆ ದಾರಿ ಅಂತ ಕೇಳಿಕೊಂಡು ! ಚಿತ್ರದಲ್ಲಿ ಮಧುಬಾಲ ಮತ್ತು ಪ್ರಕಾಶ್ ರೈ ಸಹ ನಟಿಸುತ್ತಾ ಇದ್ದಾರೆ. 

ವೆಬ್ದುನಿಯಾವನ್ನು ಓದಿ