Select Your Language

Notifications

webdunia
webdunia
webdunia
webdunia

ತಮಿಳು ಆಶಿಕಿ2 ರಲ್ಲಿ ಹನ್ಸಿಕ ಮೋಟ್ವಾನಿ.. ಭಾರಿ ಸಂಭಾವನೆ ಪಡೆದಳು ಈ ರಾಣಿ!

ತಮಿಳು ಆಶಿಕಿ2 ರಲ್ಲಿ ಹನ್ಸಿಕ ಮೋಟ್ವಾನಿ.. ಭಾರಿ ಸಂಭಾವನೆ ಪಡೆದಳು ಈ ರಾಣಿ!
ಚೆನ್ನೈ , ಮಂಗಳವಾರ, 22 ಜುಲೈ 2014 (09:35 IST)
ಬಾಲಿವುಡ್ ನಲ್ಲಿ ಅತಿ ಹೆಚ್ಚಿನ ಜನರನ್ನು ಆಕರ್ಷಿಸಿದ ಚಿತ್ರ ಆಶಿಕಿ2. ಈ ಚಿತ್ರದ ರೀಮೇಕ್ ಹಕ್ಕನ್ನು ತೆಲುಗು ಸಿನಿಮಾ ಮಂದಿ ಪಡೆದದ್ದು ಆಗಿದೆ, ಅಲ್ಲದೆ ಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಸಹ ಭರದಿಂದ ಸಾಗಿದೆ. 
 
ಇದು ತೆಲುಗು ಮಂದಿ ಕಥೆ, ಇದೆ ಚಿತ್ರವನ್ನು ಕಾಲಿವುಡ್ ನಲ್ಲೂ ಸಹ ಬಿಡುಗಡೆ ಮಾಡ ಬೇಕು ಎನ್ನುವ ಉತ್ಸಾಹದಲ್ಲಿ ಇದ್ದಾರೆ ತಮಿಳು ಚಿತ್ರಸೀಮೆಯವರು! ಹಿಂದಿ ಆಶಿಕಿ 2   ಚಿತ್ರವನ್ನುಬಂಡ್ಲ ಗಣೇಶ್ ಅವರು ತೆಲುಗಿನಲ್ಲಿ ರೀಮೇಕ್ ಮಾಡಿದ್ದಾರೆ. 
 
ಅದೇರೀತಿ ತಮಿಳಿನಲ್ಲೂ ಸಹ ಆಕ್ಷನ್ ಕಟ್ ಹೇಳುವ ಆಶಯ ಹೊಂದಿದ್ದಾರೆ ಗಣೇಶ್. ಸಚಿನ್ ಜೋಷಿ ಮತ್ತು ನಾಜಿಯ ಒಟ್ಟಾಗಿ ನಟಿಸಿರುವ ಈ ರೀಮೇಕ್ ಚಿತ್ರ ನೀ  ಜೊತೆಲೋ ನೇನುಂಡಾಲಿ ಹೆಸರಿನಲ್ಲಿ ಇದೆ. ಆದರೆ ತಮಿಳಿನಲ್ಲಿ ಸಚಿನ್ ಹೀರೋ ಆದರು ಹೀರೋಯಿನ್ ಮಾತ್ರ ಬದಲಾವಣೆ ಆಗುತ್ತಿದೆ. ಹನ್ಸಿಕ ಮುಖ್ಯ ಪಾತ್ರದಲ್ಲಿ ನಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. 
 
..........ಇನ್ನು ಇದೆ. ಮುಂದೆ ಓದಿ. 
 
 

ಈಗಾಗಲೇ ಬಂಡ್ಲ ಗಣೇಶ್ ಅವರು ಹನ್ಸಿಕ ಜೊತೆ ಮಾತಾಡಿ ಆಗಿದೆಯಂತೆ. ಅಲ್ಲದೆ ಸಚಿನ್ ಸಹ ಹನ್ಸಿಕ  ಜೊತೆ ಮಾತಾಡಿ ನೀನು ನನ್ನ ಚಿತ್ರದಲ್ಲಿ ನಟಿಸ ಬೇಕು ಕಣಮ್ಮ ಎಂದು ಕೇಳಿ ಆಗಿದೆಯಂತೆ. ಅದಕ್ಕೆ ಆಕೆಯಿಂದ ಸಮ್ಮತಿ ಮುದ್ರೆ ಸಹ ದೊರಕಿದೆ!
 
ಈ ಚಿತ್ರದ ನಟನೆಗೆ ಹನ್ಸಿಕ ಸಾಕಷ್ಟು ಸಂಭಾವನೆ ಪಡೆದ ಬಗ್ಗೆ ಮಾತಾಡಿಕೊಳ್ಳುತ್ತಿದೆ ತಮಿಳುಚಿತ್ರರಂಗ .. ಏನೇ ಆದರು ಈ ಚಿತ್ರದ ಬಗ್ಗೆ ಬಂಡ್ಲ ಗಣೇಶ್ ಮಾತ್ರ ಸಿಕ್ಕಾಪಟ್ಟೆ ಹೋಪ್ಸ್ ಇಟ್ಟುಕೊಂಡಿದ್ದಾರೆ. 

Share this Story:

Follow Webdunia kannada