Select Your Language

Notifications

webdunia
webdunia
webdunia
webdunia

ಅನುಷ್ಕ ಶೆಟ್ಟಿ ಹೀಗೆ ಮಾಡ ಬಹುದಾ? ತಪ್ಪು ತಾನೇ ?

ಅನುಷ್ಕ ಶೆಟ್ಟಿ ಹೀಗೆ ಮಾಡ ಬಹುದಾ? ತಪ್ಪು ತಾನೇ ?
ಬೆಂಗಳೂರು , ಮಂಗಳವಾರ, 22 ಜುಲೈ 2014 (09:26 IST)
ಕಾಲಿವುಡ್ ನಲ್ಲಿ ಮತ್ತು ಟಾಲಿವುಡ್ ನಲ್ಲಿ ಅನುಷ್ಕ ಬಗ್ಗೆ ಮಾತುಗಳು ಮತ್ತು ಕಥೆಗಳು. ಆಕೆ ಆಕಸ್ಮಿಕವಾಗಿ ಹೇಳಿದ ಮಾತುಗಳನ್ನು ಮುಂದಿಟ್ಟುಕೊಂಡು ವೆಬ್ ಮೀಡಿಯಾಗಳಲ್ಲಿ ಸಂಚಲ ಉಂಟಾಗಿದೆ, ಕಾಲಿವುಡ್ ನಲ್ಲೂ ಸಹ ದೊಡ್ಡ ಸುದ್ದಿ ಆಗಿದೆ. 
 
ಇತ್ತೀಚೆಗೆ ಕಾಲಿವುಡ್ ನ ಹೀರೋಯಿನ್ ತ್ರಿಷಾ ಸಂದರ್ಶನ ಒಂದರಲ್ಲಿ ತನ್ನ ಮೆಚ್ಚಿನ ಹೀರೋ ಅಜಿತ್ ಎಂದು ಹೇಳಿದ್ದರ ಪರಿಣಾಮ ಆಕೆಯ  ಮೇಲೆ ವಿಜಯ್ ಅಭಿಮಾನಿ ಬಳಗ ಕೆಂಡಾಮಂಡಲ ಆಗಿದ್ದಲ್ಲದೆ ಕೆಟ್ಟ ಭಾಷೆಗಳ ಬಳಕೆ ಮಾಡಿ ಆಕೆಯ ವ್ಯಕ್ತಿತ್ವದ ಮೇಲೆ ಬರೆ ಎಳೆದಿದ್ದರು. 
 
ಈ ಗಲಾಟೆ ಇನ್ನು ತಣ್ಣಗೆ ಆಗಿಲ್ಲ, ಆಗಲೇ ಮತ್ತೊಂದು ಗಲಾಟೆಗೆ ಕಾರಣ ಆಗಿದೆ. ಆದರೆ ಇಲ್ಲಿ ಪಾತ್ರ ಬದಲಾಗಿದೆ ಮತ್ತು ಹೆಸರುಗಳು ! ಟಾಲಿವುಡ್ ನಲ್ಲಿ ಯೋಗ ಬ್ಯೂಟಿ ಎಂದು ಕರೆಸಿಕೊಳ್ಳುವ ಚೆಲುವೆ ಅನುಷ್ಕ ಶೆಟ್ಟಿ. ಆಕೆಯನ್ನು ಪ್ರಸಿದ್ಧ ಚಾನೆಲ್ ಒಂದು ಸಂದರ್ಶನ ಮಾಡಿತು.
 
 ನಿಮ್ಮ ಮೆಚ್ಚಿನ ನಟರು ಯಾರು ಅಂದಾಗ ಆಕೆ ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್, ಶಾರೂಖ್ ಖಾನ್ ಎನ್ನುವ ಹೆಸರುಗಳನ್ನು ಹೇಳಿದಳಂತೆ. ಇದರಿಂದ ಕುಪಿತರಾದರಂತೆ ತೆಲುಗು ಮಂದಿ.. ಯಾಕೆ ತಮಿಳು- ತೆಲುಗಲ್ಲಿ ಒಂದೂ ಹೀರೋ ಇಷ್ಟ ಆಗಲಿಲ್ಲವಾ ಎಂದು ! 
 
ಇನ್ನು ಇದೆ. ಮುಂದೆ ಓದಿ. 
 
 

ಅಷ್ಟೇ ಅಲ್ಲದೆ ಈಗ ತಾನು ನಟಿಸುತ್ತಿರುವ  ವಿಜಯ್, ಅಜಿತ್, ಸೂರ್ಯ, ವಿಕ್ರಮ್, ವೆಂಕಟೇಶ್,  ನಾಗಾರ್ಜುನ, ವೆಂಕಟೇಶ್ , ಮಹೇಶ್ ಬಾಬು, ಪ್ರಭಾಸ್ ರಂತಹ ಹೀರೋಗಳ ಹೆಸರು ಹೇಳದೆ  ಇನ್ನೂ ಒಂದೂ ಚಿತ್ರದಲ್ಲೂ ನಟಿಸದೇ ಇರುವ ಹೀರೋಗಳ ಹೆಸರು ಹೇಳಿದ ಕಾರಣ ಅವರುಗಳ ಅಭಿಮಾನಿಗಳು ಕೋಪಗೊಂಡು ತಮ್ಮ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಅಭಿಪ್ರಾಯ ತೋರಿದ್ದಾರಂತೆ.. 
 
ಅನುಷ್ಕಾ ಶೆಟ್ಟಿ ಹೀಗೆ ಮಾಡ ಬಹುದಾ ತಪ್ಪು ತಾನೇ ಅಂತ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ  ತಮ್ಮ ಫೀಲಿಂಗ್ಸ್ !ಅಭಿಮಾನಿಗಳ ಸಂಗ ಅಭಿಮಾನ ಭಂಗ ! 

Share this Story:

Follow Webdunia kannada