ಸಮಂತ ಗೆ ಕೋಪ ಬಂದ್ರೆ ಸುಮ್ಮನೆ ಇರಲ್ಲ ಗೊತ್ತ !

ಬುಧವಾರ, 2 ಜುಲೈ 2014 (09:54 IST)
ಟಾಲಿವುಡ್ ನಲ್ಲಿ ಈಗ ಸಮಂತ ಲದ್ದೆ ಹವಾ.ಆಕೆ ಏನು ಮಾಡಿದರು ಸುದ್ದಿ ಆಗುತ್ತೆ. ಆಗ ಬೇಕು ಆಕೆ ಅಲ್ಲಿನ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬಳು ತಾನೇ! ಏನೇನೋ ಸುದ್ದಿ ಆಗುತ್ತೆ ಅಂತಹುದರಲ್ಲಿ ಆಕೆಗೆ ಕೋಪ ಬಂದಿರುವ ಸುದ್ದಿಯು  ಸುದ್ದಿ ಆಗದೆ ಇರುತ್ತದೆಯೇ? ಹಾಗೆ ಆಗಿದೆ ಈಗ.

ಸಮಂತ ಗೆ ಕೋಪ ಬಂದಿದೆ! ಒಂದು ರಾಷ್ಟ್ರ್ರಿಯ ಮಟ್ಟದ ಪತ್ರಿಕೆಯ ವರದಿ ಮೇಲೆ ಹರಿಹಾಯ್ದಿದ್ದಾಳೆ ಈ ಚೆಲುವೆ. ಆ ಕೋಪವನ್ನು ಹನ್ನೊಂದು ಟ್ವೀಟ್ ಮಾಡಿ  ತೋರಿಸಿದ್ದಾಳೆ  ಆಕೆ.ಆಕೆಗೆ ಕೋಪ ಬರೋಕೆ ಕಾರಣ ಏನು.. ಅದೇ ಸ್ವಾರಸ್ಯದ ಸುದ್ದಿ! 
 
ದೀಪಿಕ ಪಡುಕೋಣೆ ಮತ್ತು ಸೋನಂ ಕಪೂರ್ ಅವರ ಸ್ಟೈಲ್ ನ್ನು ಸಮಂತ ಕಾಪಿ ಹೊಡಿತಾ ಇದ್ದಾಳೆ ಎಂದು ಆ ಪತ್ರಿಕೆಯವರು ಈಕೆಯತ್ತ ಬೆರಳು ತೋರಿಸಿದ್ದಾರೆ. 
 
........ಇನ್ನು ಇದೆ. ಮುಂದೆ ಓದಿ. 
 
ಅಷ್ಟೇ ಅಲ್ಲ ಅಲ್ಲುಡು ಶೀನು ಆಡಿಯೋ ವೇದಿಕೆಯಲ್ಲಿ ಸಮಂತ ಧರಿಸಿದ್ದ ದ್ರಾಸ್ ಡಿಸೈನ್ ಹಿಂದೊಮ್ಮೆ ದೀಪಿಕ ಧರಿಸಿದ್ದ ಡಿಸೈನ್ ನಂತೆ ಇತ್ತು ಎಂದು , ಅಂತಹದ್ದೇ ಕಾಪಿ ಮಾಡಿದ್ದಾಳೆ ಈ ಹುಡುಗಿ ಎಂದು ಆಡಿಕೊಂಡು ನಕ್ಕರೆ ಕೋಪ ಬರಲ್ವ! ನಿಮ್ಮ ಆಫೀಸಿಗೆ ಬಂದು ಈ ಬಗ್ಗೆ ಬರೆದವರಿಗೆ ಉಡುಪಿನ ಬಗ್ಗೆ ಪಾಠ ಮಾಡ ಬೇಕು. ಸಾಮಾನ್ಯವಾಗಿ ಒಂದು ಡಿಸೈನ್ ಮಾಡಿದ ವಿನ್ಯಾಸಕರು ಅಂತಹದ್ದೇ ವಿನ್ಯಾಸದ ಅನೇಕ ಬಣ್ಣದ ಉಡುಪು ತಯಾರಿಸುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮಗೆ ಎಂದು ಕೋಪ ತೋರಿದ್ದಾಳೆ  ಈ ಚೆಲುವೆ. 
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಲೇಬಲ್ ಆದರು ಸಹ ಸೆಲೆಕ್ಟೆಡ್ ಪೀಸ್ ಗಳಿರುತ್ತವೆ. ಅನಾಮಿಕ ಖನ್ನ ಧೋತಿ ಸ್ಟೈಲ್, ಅರ್ಪಿತ ಕಟ್ ವರ್ಕ್, ಹೀಗೆ ಅನೇಕ ಸೆಲೆಬ್ರಿಟಿ ಒಂದು ಪೀಸ್ ಮಾತ್ರ ತಯಾರು ಮಾಡಲ್ಲ ಆಕೆಯ ಶಾಪ್ ನಲ್ಲಿ ಇಂತಹ ಅನೇಕವು ಸಿಗುತ್ತದೆ ಎಂದು ಕೋಪ ತೀರಿಸಿದ್ದಾಳೆ  .ಸಮ್ಮುಗೆ ಕೋಪ ಬಂದ್ರೆ ಸುಮ್ಮನೆ ಇರಲ್ಲ ಅನ್ನೋ ಸಂಗತಿ ಮತ್ತೆ ಇದರಿಂದ ಸಾಬೀತಾಗಿದೆ. 

ವೆಬ್ದುನಿಯಾವನ್ನು ಓದಿ