Select Your Language

Notifications

webdunia
webdunia
webdunia
webdunia

ವಿಶ್ವರೂಪ 2 ತೆರೆಗೆ ಸಧ್ಯದಲ್ಲೇ? ಇಷ್ಟೇ ತಡ ಆಗುತ್ತಿದೆ ಬಿಡುಗಡೆ ಆಗಲು ?!

ವಿಶ್ವರೂಪ 2  ತೆರೆಗೆ ಸಧ್ಯದಲ್ಲೇ? ಇಷ್ಟೇ ತಡ ಆಗುತ್ತಿದೆ ಬಿಡುಗಡೆ ಆಗಲು ?!
ಚೆನ್ಣೈ , ಬುಧವಾರ, 2 ಜುಲೈ 2014 (09:48 IST)
ಅಪರೂಪದ ಭಾರತೀಯ ನಟ ಕಮಲ್ ಹಾಸನ್. ತಮ್ಮ ಪ್ರಯೋಗಗಳ ಮುಖಾಂತರ ಸದಾ ಸುದ್ದಿಯಲ್ಲಿರುವ ಉಳಗನಾಯಗನ್ ಕಮಲ್ ಈಗ ಮತ್ತೆ ಸುದ್ದಿ ಮಾಡುತ್ತಿದ್ದಾರೆ ತಮ್ಮ ಹೊಚ್ಚ ಹೊಸ ಚಿತ್ರ ವಿಶ್ವರೂಪ 2  ರ ಮುಖಾಂತರ. 
 
ಕಳೆದ ವರ್ಷ ಜನವರಿಯಲ್ಲಿ ವಿಶ್ವರೂಪ ಚಿತ್ರವೂ ಬಿಡುಗಡೆ ಆಗಿತ್ತು. ಅನೇಕ ವಿವಾದಗಳನ್ನು ಒಳಗೊಂಡಿದ್ದರು ಸಹ ಆ ಚಿತ್ರ ಅಪಾರ ಜನರ ಗಮನ ಸೆಳೆದಿತ್ತು. ವಿಶ್ವ ಮಟ್ಟದಲ್ಲಿ ಎಲ್ಲರಿಗೂ ಇಷ್ಟ ಆಗಿತ್ತು. ಈಗ ಈ ಚಿತ್ರದ ಎರಡನೇ ಭಾಗ ಸಹ ಇಂತಹದ್ದೇ ಸುದ್ದಿ ಮಾಡಲು ಸಿದ್ಧ ಆಗಿದೆ.
 
ಆದ್ದರಿಂದಲೇ ಚಿತ್ರೀಕರಣದ ಆರಂಭದಲ್ಲೇ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಈ ಚಿತ್ರ ಈಗ ಕೆಲಸಗಳನ್ನು ಪೂರೈಸಿದೆ, ಸದ್ಯದಲ್ಲೇ ಚಿತ್ರ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೇಳಿದ್ದಾರೆ ಕಮಲ್. ಆದರೆ ಈ ಬಗ್ಗೆ ಕಾಲಿವುಡ್ ಮಾಧ್ಯಮಗಳು ಮೌನವಾಗಿದೆ. 
 
ಚಿತ್ರದ ಹೀರೋಯಿನ್ ಪೂಜಾ ಕುಮಾರ್ ಇದರಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಎಫೆಕ್ಟ್ ತೋರುವ ಉದ್ದೇಶ ಹೊಂದಿರುವ ಕಾರಣದಿಂದ ಚಿತ್ರದ ಬಿಡುಗಡೆಗೆ ತಡ ಆಗುತ್ತಿದೆ. ಮೊದಲ ಭಾಗಕ್ಕಿಂತ ಇದು ಹೆಚ್ಚು ಎಫೆಕ್ಟೀವ್ ಆಗಿದೆ ಎಂದು ಹೇಳಿದ್ದಾರೆ. 
 
.......ಇನ್ನು ಇದೆ. ಮುಂದೆ ಓದಿ. 
 

 
ಒಂದು ಯುದ್ಧ ಸನ್ನಿವೇಶದಲ್ಲಿ ಬಾಂಬ್ ತೆಗೆಯುವ ಶೂಟಿಂಗ್ ಸಕತ್ತಾಗಿದೆ. ಅದರಲ್ಲಿ ನೀರಿನ ಒಳಗೆ ನಟಿಸ ಬೇಕಾಯಿತು , ಸಾಕಷ್ಟು ಕಷ್ಟ ಪಟ್ಟಿದೆ ಟೀಮ್ ಎಂದು ಹೇಳಿದ್ದಾರೆ. ಕಮಲ್ ಪ್ರಮುಖ ಪಾತ್ರದಲ್ಲಿ ಇರುವ ಈ ಚಿತ್ರದಲ್ಲಿ ಪೂಜಾ ಕುಮಾರ್, ಆಂಡ್ರಿಯ, ರಾಹುಲ್ ಭೋಸ್ ಮುಂತಾದವರು ಇದ್ದಾರೆ. 
 
ವೇಣು ರವಿ ಚಂದ್ರನ್, ಏಕತ ಕಪೂರ್ ಮತ್ತು ಶೋಭಾ ಕಪೂರ್ ಮುಖ್ಯ ನಿರ್ಮಾಪಕರಾಗಿದ್ದಾರೆ . ಈ ಚಿತ್ರಕ್ಕೆ ಗಿರ್ಬಾನ್ ಸಂಗೀತವಿದೆ. ಸುಮಾರು 75 ಕೋಟಿರೂಪಾಯಿ ವೆಚ್ಚ ಮಾಡಿ ಚಿತ್ರವನ್ನು ನಿರ್ಮಿಸಲಾಗಿದೆಯಂತೆ. 

Share this Story:

Follow Webdunia kannada