Webdunia - Bharat's app for daily news and videos

Install App

ನಲವತ್ತು ಹಾಡುಗಳು ಒಂದು ಸಿನಿಮಾದಲ್ಲಿ ?

Webdunia
ಮಂಗಳವಾರ, 1 ಜುಲೈ 2014 (09:38 IST)
ಕಾಣದ ಚಿತ್ರರಂಗದ ವಿನೂತನ ಪ್ರತಿಭಾವಂತ ನಟ ನಿರ್ದೇಶಕ ವಿ ರವಿಚಂದ್ರನ್ ಹೊಸ ಸಂಗತಿಗಳ ಬಗ್ಗೆ ಕೈಚಾಚುತ್ತಲೇ ಇರುತ್ತಾರೆ. ಅದಕ್ಕಾಗಿ ಅವರು ಎಂತಹ ನಷ್ಟ ಬೇಕಾದರೂ ಎದುರಿಸಲು ಸಿದ್ಧ. ಅದೇರೀತಿ ಎಷ್ಟೇ ಶ್ರಮವನ್ನು ಸಹ! ಈಗ ಅವರ ಗಮನ  ಮಗ ಮನೋರಂಜನ್ ಹೊಸ ಚಿತ್ರ ಪ್ರೇಮಲೋಕದಲ್ಲಿ ರಣಧೀರ  ಚಿತ್ರದ ಬಗ್ಗೆ ಇದೆ. 
 
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋಕೆ ಹೊರಟಿದ್ದಾರೆ ರವಿ ಮಾಮ. ಇಲ್ಲಿವರೆಗೂ ಇದರ ಸಂಗೀತ ನಿರ್ದೇಶಕ ಯಾರು ಎನ್ನುವ ಪ್ರಶ್ನೆಗಳು ಎದ್ದಿದ್ದವು. ಹಂಸಲೇಖ ಅವರ ಹೆಸರು ಸಹ ಎಲ್ಲೆಡೆ ಹರಿದಾಡಿತ್ತು. ಆದರೆ ಅಂತಿಮವಾಗಿ ಈಗ ರವಿಮಾಮ ಈ ಡಿಪಾರ್ಟ್ ಮೆಂಟ್  ಹೊಣೆ ಹೊತ್ತಿದ್ದಾರೆ. 
 
ಅಂದಂಗೆ ಇದರಲ್ಲಿ 40 ಹಾಡುಗಳು ಇವೆಯಂತೆ...ಹಾಗಂತ ಚಿತ್ರಪೂರ್ತಿ ನಲವತ್ತು ಹಾಡುಗಳಲ್ಲಿ ಮುಗಿದು ಹೋಗಲ್ಲವಂತೆ. ಇದರ ಬಗ್ಗೆ ರವಿಮಾಮ ಹೇಳೋದಿಷ್ಟೇ.. ನಾನು ಆರಂಭದಲ್ಲಿ ಪರಮಶ್ರೇಷ್ಟ ಹಂಸಲೇಖ ಅವರನ್ನು ಈ ಕೆಲ್ಸಕ್ಕೆ ನಿಯೋಜಿಸುವ ಆಶಯ ಹೊಂದಿದ್ದೆ. 
 
........ಇನ್ನು ಇದೆ. ಮುಂದೆ ಓದಿ. 
 
ಅವರು ರಚನೆಯು5ರಿಂದ 6 ನಿಮಿಷಗಳ ಕಾಲಾವಧಿ ಹೊಂದಿತ್ತು. ಜಾಹೀರಾತಲ್ಲಿ 30 ಸೆಕೆಂಡ್ ನಲ್ಲಿ ಎಲ್ಲ ವಿಷಯವನ್ನು ಅರ್ಥ ಮಾಡಿಸುವಾಗ ಸಿನಿಮಾದಲ್ಲಿ ಯಾಕೆ ಆಗಲ್ಲ ಎಂದು ಈ ಹೊಣೆಗಾರಿಕೆ ನನ್ನ ಭುಜದ ಮೇಲೆ ಹೊತ್ತೆ ಎಂದು ಹೇಳಿದ್ದಾರೆ.
 
ನಾನು ಉತ್ತಮ ಪ್ರೇಮ ಗೀತೆಗಳನ್ನು ಬರೆಯಬಲ್ಲೆ, ಅದನ್ನು ನಿರ್ದೇಶಿಸ ಬಲ್ಲೆ. ನನಗೆ ಇದೊಂದು ಸವಾಲಾಗಿದೆ. ಈ ಸವಾಲಿಗೆ ಪೂರಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಪ್ರೇಮಲೋಕ ಮತ್ತು ರಣಧೀರ ರವಿಚಂದ್ರನ್ ಅವರ ಪ್ರೇಮಾಧಾರಿತ ಅತ್ಯದ್ಭುತ ಸಂಗೀತ ಒಳಗೊಂಡ ಚಿತ್ರಗಳು ಎನ್ನುವುದನ್ನು ಇಲ್ಲಿ ನೆನಪಿಸಿ ಕೊಳ್ಳ ಬಹುದು! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments